ದಲಿತರು ವೈದಿಕ ಹಬ್ಬಗಳನ್ನು ತಿರಸ್ಕರಿಸಲಿ

Update: 2018-11-25 18:34 GMT

ಮಾನ್ಯರೇ

ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಕಾರ ಪ್ರಾಚೀನ ಕಾಲದಲ್ಲಿ ಕಾನೂನು ಮತ್ತು ಧರ್ಮ ಎರಡೂ ಒಂದೇ ಆಗಿತ್ತು ಮತ್ತು ಈ ಹಿನ್ನೆಲೆಯಲ್ಲಿ ಆ ಕಾಲದಲ್ಲಿ ಜನರ ಸಾಮಾನ್ಯ ನಂಬಿಕೆ ಏನಾಗಿತ್ತೆಂದರೆ, ಕಾನೂನು ಬರೆಯುವವನು ದೇವರ ಜೊತೆ ನೇರ ಸಂಪರ್ಕದಲ್ಲಿದ್ದಾನೆ, ದೇವರೇ ಅವನ ಮೂಲಕ ಕಾನೂನುಗಳನ್ನು ನಮಗೆ ಕೊಟ್ಟಿದ್ದಾನೆ ಎಂಬುದಾಗಿತ್ತು. ದೇವರು ಕೊಟ್ಟದ್ದು ಎಂಬ ಕಾರಣಕ್ಕಾಗಿ ಮನುಸ್ಮತಿ ಕೆಟ್ಟದ್ದು ಎಂದು ಕಂಡುಬಂದರೂ ದೇವರ ಭಯಕ್ಕಾಗಿ ಯಾರೂ ಕೂಡ ಅದನ್ನು ವಿರೋಧಿಸಲಿಲ್ಲ. ಹಾಗೆಯೇ ದೇವರ ಕಾರಣಕ್ಕಾಗಿ ಅಥವಾ ದೇವರ ಹೆಸರಲ್ಲಿ ಮನುಸ್ಮತಿಯ ಅಸಮಾನತೆಯ ಕಾನೂನು ಯಾವುದೇ ವಿರೋಧ ಎದುರಿಸದೇ ಸಹಜವಾಗಿ ಜಾರಿಯಾಯಿತು. ಹಾಗೆಯೇ ಅದರ ಮೂಲಕ ಮೂಡಿಬಂದ ಅಸ್ಪಶ್ಯತೆ ಅಷ್ಟೇ ಸಹಜವಾಗಿ ಜಾರಿಯಾಯಿತು.

ಈ ಹಿನ್ನೆಲೆಯಲ್ಲಿ ನಾವು ವೈದಿಕ ಹಬ್ಬಗಳನ್ನು, ಆಚರಣೆಗಳನ್ನು ಆಚರಿಸುತ್ತೇವೆ ಎಂದರೆ ವೈದಿಕ ಕಾನೂನುಗಳನ್ನು, ಅಂಬೇಡ್ಕರ್ ಕಾನೂನಿಗಿಂತ ಮನುಸ್ಮತಿಯ ಕಾನೂನುಗಳನ್ನು ಒಪ್ಪುತ್ತೇವೆ ಎಂದರ್ಥ. ಅಂದಹಾಗೆ ಆ ವೈದಿಕ ಕಾನೂನಿನಲ್ಲಿ ಅಸ್ಪಶ್ಯತಾಚರಣೆಯೂ ಬರುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮತ್ತೊಮ್ಮೆ ಗಮನಿಸಬೇಕು. ಈ ಕಾರಣಕ್ಕಾಗಿ ಅಸ್ಪಶ್ಯತಾಚರಣೆಯ ಆ ಕರಾಳ ಕಾನೂನಿನಿಂದ ತಪ್ಪಿಸಿಕೊಳ್ಳಲು ಬಾಬಾಸಾಹೇಬರು ಆ ಧರ್ಮವನ್ನೇ ಬದಲಿಸಿದರು. ಮನುಸ್ಮತಿಯ ಕಾನೂನು ಧಿಕ್ಕರಿಸಿ ಬೌದ್ಧ ಧರ್ಮ ಸ್ವೀಕರಿಸಿದರು. 
 

Writer - ರಘೋತ್ತಮ ಹೊಬ, ಮೈಸೂರು

contributor

Editor - ರಘೋತ್ತಮ ಹೊಬ, ಮೈಸೂರು

contributor

Similar News