ವಿಕ್ಟರ್ ಎಮ್ ಡಿಸಿಲ್ವ

Update: 2018-11-28 14:09 GMT

ಮಂಗಳೂರು, ನ. 29: ನಗರದ ವಕೀಲರಾಗಿದ್ದ ಕ್ರಿಶ್ಚಿಯನ್ ಮ್ಯಾರೇಜ್ ರಿಜಿಸ್ಟ್ರಾರ್ ಆಗಿದ್ದ ವಿಕ್ಟರ್ ಎಮ್ ಡಿಸಿಲ್ವ (75) ಅವರು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ತನ್ನ ವೃತ್ತಿಯೊಂದಿಗೆ ಸಮಾಜ ಸೇವಕರಾಗಿದ್ದ ಅವರು ಜಿಲ್ಲಾ ಸೈನಿಕ ಬೋರ್ಡ್‍ನ ಮಾಜಿ ಸದಸ್ಯರು, ದ.ಕ ಜಿಲ್ಲಾ ಮಾಜಿ ಸೈನಿಕರ ಎಸೋಸಿಯೇಶನ್ನಿನ ಮಾಜಿ ಅಧ್ಯಕ್ಷರು, ಬಿಎಸ್‍ಎನ್‍ಎಲ್ ನ್ಯೂಟ್ ವಿಭಾಗದ ಮಾಜಿ ಕಾರ್ಯದರ್ಶಿ, ಎಮ್‍ಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕರು ಮತ್ತು ರಾಜ್ಯ ಹಾಗೂ ಕೇಂದ್ರ ಸರಕಾರಿ ನೌಕರರ ಹೌಸಿಂಗ ಕೋಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅವರು ಪತ್ನಿ, ಪುತ್ರ, ಪುತ್ರಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ