ಹವಾಮಾನ ಬದಲಾವಣೆಯ ತೀವ್ರ ಪರಿಣಾಮಕ್ಕೆ ಒಳಗಾದ ದೇಶಗಳಲ್ಲಿ ಭಾರತ ಕೂಡ ಒಂದು: ಅಧ್ಯಯನ ವರದಿ

Update: 2018-11-29 18:24 GMT

ಹೊಸದಿಲ್ಲಿ, ನ. 29: ಹವಾಮಾನ ಬದಲಾವಣೆಯಿಂದ ಜಗತ್ತಿನಾದ್ಯಂತದ ಮಾನವನ ಆರೋಗ್ಯದ ಮೇಲೆ ಬೀಳುವ ಪ್ರಭಾವದ ಕುರಿತು ಗಮನ ಕೇಂದ್ರೀಕರಿಸಿರುವ ವೈದ್ಯಕೀಯ ಪತ್ರಿಕೆ ‘ದಿ ಲ್ಯಾನ್ಸೆಟ್’, ಹವಾಮಾನ ಬದಲಾವಣೆಯ ಅತಿ ಕೆಟ್ಟ ಪರಿಣಾಮಕ್ಕೆ ಒಳಗಾದ ದೇಶಗಳಲ್ಲಿ ಭಾರತ ಕೂಡ ಒಂದು ಹೇಳಿದೆ.

ಆರೋಗ್ಯ ಮತ್ತು ಹವಾಮಾನ ಬದಲಾವಣೆ ವರದಿ ಕುರಿತ ‘ದಿ ಲ್ಯಾನ್ಸೆಟ್ ಕೌಂಟ್‌ಡೌನ್’ ಬುಧವಾರ ಪ್ರಕಟಗೊಂಡಿತು.

1986 ಹಾಗೂ 2005ರ ಅವಧಿಗೆ ಹೋಲಿಸಿದರೆ 2000 ಹಾಗೂ 2017ರ ನಡುವೆ ಪ್ರತಿ ವ್ಯಕ್ತಿ ಉಷ್ಣ ಮಾರುತಕ್ಕೆ ಹೆಚ್ಚುವರಿ 1.4 ದಿನಗಳು ಒಳಗಾಗಿದ್ದಾನೆ. 2016ರ 139 ದಶಲಕ್ಷಕ್ಕೆ ಹೋಲಿಸಿದರೆ, 2017ರಲ್ಲಿ 157 ದಶಲಕ್ಷ ಹೆಚ್ಚುವರಿ ಉಷ್ಣ ಮಾರುತಕ್ಕೆ ಒಳಗಾಗಿದ್ದಾನೆ.

2012ಕ್ಕೆ ಹೋಲಿಸಿದರೆ, ಭಾರತದಲ್ಲಿ 2016ರಲ್ಲಿ ಹೆಚ್ಚುವರಿ 40 ದಶಲಕ್ಷ ಉಷ್ಣ ಮಾರುತಕ್ಕೆ ಒಳಗಾದ ಘಟನೆಗಳು ನಡೆದಿವೆ ಎಂದು ವರದಿ ಹೇಳಿದೆ. 2000ದ 43,000 ದಶಲಕ್ಷಕ್ಕೆ ಹೋಲಿಸಿದರೆ, 2017ರಲ್ಲಿ ಸುಮಾರು 75,000 ದಶಲಕ್ಷ ಕಾರ್ಮಿಕ ಗಂಟೆಗಳನ್ನು ಭಾರತ ಕಳೆದುಕೊಂಡಿದೆ ಎಂದು ವರದಿ ಹೇಳಿದೆ.

‘ದಿ ಲ್ಯಾನ್ಸೆಟ್’ ವರದಿಯ ಆಧಾರದಲ್ಲಿ ವಿವರಣೆ ನೀಡಿರುವ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ, ಭಾರತದ ಕೃಷಿ ವಲಯದಲ್ಲಿ 2000ರ 40,000 ದಶಲಕ್ಷಕ್ಕೆ ಹೋಲಿಸಿದರೆ 2017ರಲ್ಲಿ 60,000 ದಶಲಕ್ಷ ಕಾರ್ಮಿಕ ಗಂಟೆಗಳು ನಷ್ಟವಾಗಿವೆ ಎಂದು ಅದು ಹೇಳಿದೆ.

ನಿರ್ದಿಷ್ಟವಾಗಿ ಕಳೆದ ಒಂದು ದಶಕದಲ್ಲಿ ಉಷ್ಣ ಮಾರುತದ ಸಂಖ್ಯೆ, ಅವಧಿ, ತೀವ್ರತೆ ಹೆಚ್ಚಾಗಿದೆ ಎಂಬುದು ಈ ದತ್ತಾಂಶ ತೋರಿಸುತ್ತದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಹೆಲ್ತ್‌ನ ಡಾ. ಪೂರ್ಣಿಣಾ ಪ್ರಭಾಕರನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News