‘ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಪ್ರೊ.ಷ.ಷಟ್ಟರ್ ಆಯ್ಕೆ: ಡಾ.ವಸುಂಧರಾ ಭೂಪತಿ

Update: 2018-11-30 16:33 GMT

ಬೆಂಗಳೂರು, ನ. 30: ಅತ್ಯುತ್ತಮ ಪ್ರಕಾಶನ-ವಿದ್ಯಾನಿಧಿ ಪ್ರಕಾಶನ-ಗದಗ, ಡಾ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ-ಪ್ರೊ.ಷ.ಷಟ್ಟರ್, ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ-ನ.ರವಿಕುಮಾರ್ ಹಾಗೂ ಡಾ.ಅನುಪಮಾ ನಿರಂಜನ ವೈದ್ಯಕೀಯ ಸಾಹಿತ್ಯ ಪ್ರಶಸ್ತಿ-ಡಾ.ಎಚ್.ಗಿರಿಜಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದ್ದಾರೆ.

ಶುಕ್ರವಾರ ಕನ್ನಡ ಭವನದಲ್ಲಿನ ಪ್ರಾಧಿಕಾರದ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಲ್ಕಂಡ ಪ್ರಶಸ್ತಿಗಳು ಕ್ರಮವಾಗಿ 1ಲಕ್ಷ ರೂ., 75 ಸಾವಿರ ರೂ., 50 ಸಾವಿರ ರೂ. ಹಾಗೂ 25ಸಾವಿರ ರೂ.ನಗದು ಪುರಸ್ಕಾರ ಒಳಗೊಂಡಿದೆ ಎಂದು ಹೇಳಿದರು.

ಪುಸ್ತಕ ಸೊಗಸು: ‘ಕರುನಾಡ ಕೋಟೆಗಳ ಸುವರ್ಣ ನೋಟ’ ಸಂ: ವಿಶ್ವನಾಥ ಸುವರ್ಣ ಸುವರ್ಣ ಪಬ್ಲಿಕೇಷನ್, ಬೆಂಗಳೂರು ಮೊದಲ ಬಹುಮಾನ-25 ಸಾವಿರ ರೂ., ‘ಯುಗಪುರುಷ ಮಹಾವೀರ ಮಹಾರಾಣಾ ಪ್ರತಾಪ್’ ಲೇ: ಡಾ.ಎನ್.ಗುರುಮೂರ್ತಿ, ಭವತಾರಿಣಿ ಪ್ರಕಾಶನ-ಬೆಂಗಳೂರು-ಎರಡನೆ ಬಹುಮಾನ 20 ಸಾವಿರ ರೂ., ‘ಬಾಬಾ ಸಾಹೇಬರೆಡೆಗೆ ಖರ್ಗೆ ಜೀವನ ಕಥನ’ ಲೇ: ಪ್ರೊ.ಎಚ್.ಟಿ. ಪೋತೆ-ಸಿವಿಜಿ ಬುಕ್ಸ್ ಬೆಂಗಳೂರು-ಮೂರನೆ ಬಹುಮಾನ-10ಸಾವಿರ ರೂ.ಗಳು ಎಂದರು.

ಮಕ್ಕಳ ಪುಸ್ತಕ ಸೊಗಸು: ‘ಪುಟ್ಟಿಯ ಗಿರಗಟ್ಟೆ’ ಲೇ: ಬಾಗೂರು ಮಾರ್ಕಂಡೇಯ, ಎಸ್‌ಎಲ್ಎನ್ ಪಬ್ಲಿಕೇಷನ್ ಬೆಂಗಳೂರು 8 ಸಾವಿರ ರೂ., ಮುಖಪುಟ ಚಿತ್ರ ವಿನ್ಯಾಸಕ್ಕೆ ‘ಕರಿ ಕಣಗಿಲ’ ಕೃತಿ, ಇ.ಮೂ.ಲೇ: ಕೆ.ಪುರುಷೋತ್ತಮ ಅನುವಾದ: ಡಾ. ಎಚ್.ಎಸ್.ಅನುಪಮಾ, ಬಹುಮಾನಿತ ಕಲಾವಿದರು ಅರುಣ್‌ಕುಮಾರ ಜಿ., ಕೃಷ್ಣ ಗಿಳಿಯಾರ್-10 ಸಾವಿರ ರೂ.

ಕೃತಿ ‘ಹಲಗೆ ಮತ್ತು ಮೆದುಬೆರಳು’ ಲೇ: ಕಾದಂಬಿನಿ ಬಹುಮಾನಿತ ಕಲಾವಿದ- ಗಿರಿಧರ ಕಾರ್ಕಳ-8 ಸಾವಿರ ರೂ., ‘ವಚನ ಮಾರ್ಗ’ ಪ್ರ.ಸಂ.: ಡಾ.ಶಿವಮೂರ್ತಿ ಮುರುಘಾ ಶರಣರು ಮುದ್ರಣಾಲಯ: ಸ್ವ್ಯಾನ್ ಪ್ರಿಂಟರ್ಸ್‌, ಬೆಂಗಳೂರು-5 ಸಾವಿರ ರೂ.ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಚೊಚ್ಚಲ ಕೃತಿಗೆ ಪ್ರೋತ್ಸಾಹ: 2017ನೆ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೆ ಒಟ್ಟು 136 ಹಸ್ತಪ್ರತಿಗಳು ಬಂದಿದ್ದು, ಆ ಪೈಕಿ ‘ಮೊದಲ ಮೊಗ್ಗು’ರಜನಿ ರೆಡ್ಡಿ-ರಾಯಚೂರು, ‘ಮೌನ ಮಾತಾಡಿದಾಗ’ ಮಮತಾ ಡಿ.ಎಲ್. ಚಾಮರಾಜನಗರ, ‘ಒಲವಿನೊರತೆ’ -ವಿದ್ಯಾಧರ ಎಪಿಎಮ್-ದಾವಣಗೆರೆ, ‘ಡಾ.ಬಂಜಗೆರೆ ಜಯಪ್ರಕಾಶ್ ಅವರ ಕಾವ್ಯ ವಿಮರ್ಶೆ’ ನಾಗೇಂದ್ರಪ್ಪ ಶಿವಶರಣಪ್ಪಮೈಲಾರಿ-ಕಲಬುರಗಿ ಸೇರಿದಂತೆ ಒಟ್ಟು 53 ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದಲಿತ ಸಾಹಿತಿಗಳ ಕೃತಿಗೆ ನೆರವು: ಮೊದಲ ಬಾರಿಗೆ ದಲಿತ ಸಾಹಿತ್ಯ ಕೃತಿ ಪ್ರಕಟಣೆ ಧನಸಹಾಯ ಕೋರಿ 104 ಹಸ್ತಪ್ರತಿಗಳು ಬಂದಿದ್ದು, ಆ ಪೈಕಿ ‘ತಳ ಸಮುದಾಯದ ಸಾಂಸ್ಕೃತಿಕ ಪದಕೋಶ’ ಎಸ್.ಚಂದ್ರಕಿರಣ್-ಕುಳವಾಡಿ, ಬಾಬಾ ಸಾಹೇಬರ ಬೆಳಕಿನಲ್ಲಿ.. -ರಘೋತ್ತಮ ಹೊ.ಬ., ಸಾಮಾಜಿಕ ಒಳನೋಟ-ಗುಂಡಪ್ಪ ದೇ.ಕಾಮತ-ಬಾಗಲಕೋಟ, ಗವಿಗಂಧ-ಡಾ. ಶರಣಪ್ಪಕವಡೆ-ಕಲಬುರಗಿ, ನೀಲಿ ಮಿಂಚು-ಪರಶುರಾಮ ಶಿವಶರಣ, ಚಾಕಣದ ಸುಭದ್ರೆ-ಸಿ.ಸುವರ್ಣ ಶಿವಪ್ರಸಾದ್, ಆಡಾಡ್ತ ಆಕಾಶ-ಡಾ.ಗಿರೀಶ್ ಮೂಗ್ತಿಹಳ್ಳಿ ಇವರು ಸೇರಿದಂತೆ 51 ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News