ಗ್ರಂಥಾಲಯ ಇಲಾಖೆಯಿಂದ 2016ನೆ ಸಾಲಿನ ಪುಸ್ತಕಗಳ ಆಯ್ಕೆ

Update: 2018-12-01 17:01 GMT

ಬೆಂಗಳೂರು, ಡಿ.1: ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ 2016ರಲ್ಲಿ ಪ್ರಕಟಿತಗೊಂಡ ಪುಸ್ತಕಗಳ ಮಾಹಿತಿಯನ್ನು ಗ್ರಂಥಾಲಯ ಇಲಾಖೆಯ ಅಂತರ್ಜಾಲದಲ್ಲಿ www.karnatakapubliclibrary.gov.in ಪ್ರಕಟಿಸಲಾಗಿದೆ.

ಪುಸ್ತಕ ಆಯ್ಕೆ ಸಮಿತಿಯು ಕನ್ನಡ, ಆಂಗ್ಲ, ಹಿಂದಿ ಮತ್ತು ಭಾರತೀಯ ಇತರೆ ಭಾಷಾ ಪುಸ್ತಕಗಳನ್ನು ಆಯ್ಕೆ ಮಾಡಿದ್ದು, ಲೇಖಕರು, ಲೇಖಕ-ಪ್ರಕಾಶಕರು, ವಿತರಕರು ಮತ್ತು ಪುಸ್ತಕ ಮಾರಾಟಗಾರರು ಆಯ್ಕೆಗಾಗಿ ಸಲ್ಲಿಸಿದ ಪುಸ್ತಕಗಳ ಶೀರ್ಷಿಕೆ, ಪ್ರಕಾಶಕರ ಹೆಸರು, ಸರಬರಾಜುದಾರರ ಹೆಸರು, ಪುಟ ಸಂಖ್ಯೆ, ಮುಖ ಬೆಲೆ, ನಿಗದಿತ ಬೆಲೆ, ಪುಸ್ತಕಗಳ ಅಳತೆ ಹಾಗೂ ಇತರೆ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ ಡಿ.10 ರ ಒಳಗಾಗಿ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ 4ನೆ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂ.01 ಇಲ್ಲಿಗೆ ಲಿಖಿತವಾಗಿ ಮನವಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News