ಆ್ಯಂಬಿಡೆಂಟ್ ವಂಚನೆ ಪ್ರಕರಣ: ಅಲಿಖಾನ್ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
Update: 2018-12-01 22:34 IST
ಬೆಂಗಳೂರು, ಡಿ.1: ಆ್ಯಂಬಿಡೆಂಟ್ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಎನ್ನಲಾದ ಅಲಿಖಾನ್ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು 1ನೆ ಎಸಿಎಂಎಂ ನ್ಯಾಯಾಲಯವು ಡಿ. 4ಕ್ಕೆ ಮುಂದೂಡಿದೆ.
ಇನ್ನು ಪ್ರಕರಣದ ಬಗ್ಗೆ ಸಿಸಿಬಿ ಪರ ವಾದಿಸಿದ ವಕೀಲ ವೆಂಕಟಗಿರಿ ಅವರು, ಅಲಿಖಾನ್ ತನಿಖೆ ಸಂಪೂರ್ಣವಾಗಿಲ್ಲ. ನವೆಂಬರ್ 29ರ ನಂತರ ತನಿಖೆ ನಡೆಸದಂತೆ ಹೈಕೋರ್ಟ್ ಆದೇಶವಿದೆ. ಪೊಲೀಸರು ನವೆಂಬರ್ 22ರಿಂದ 29ರವರೆಗೆ ವಶಕ್ಕೆ ಪಡೆದಿದ್ದರು. ಆದರೆ, ಅಲಿಖಾನ್ ವಿಚಾರಣೆ ವೇಳೆ ನಗದು, ಹಣದ ವಿಚಾರ ಬಾಯಿ ಬಿಟ್ಟಿಲ್ಲ. ಹಾಗೆಯೇ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಮೂಲಕ 18 ಕೋಟಿ ಕೊಡುತ್ತೇನೆಂದು ಹೇಳಿದ್ದ. ಆದರೆ, ಇಲ್ಲಿಯವರೆಗೆ ಯಾವುದೇ ಹಣ ಕೊಟ್ಟಿಲ್ಲ. ಹೀಗಾಗಿ, ಜಾಮೀನು ನೀಡಬಾರದೆಂದು ಮನವಿ ಮಾಡಿದರು. ಇನ್ನು ವಾದ ಅಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿಕೆ ಮಾಡಿದೆ.