ಬೆಂಗಳೂರು: ಡಿ.3ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ಡಿ.1: ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತ 2ನೇ ಘಟ್ಟದ ಯೋಜನೆಯಡಿ ಎನ್‌ಬಿಆರ್‌ನಿಂದ ತೊರೆಕಾಡನಹಳ್ಳಿಯವರೆಗೆ ಅಳವಡಿಸಿರುವ ಕಚ್ಚಾ ನೀರಿನ ಕೊಳವೆ ಮಾರ್ಗವು ಸೋರಿಕೆಯಾಗುತ್ತಿದ್ದು, ಈ ಮಾರ್ಗದ ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಡಿ.2ರ ರವಿವಾರ ಮಧ್ಯರಾತ್ರಿ 12 ಗಂಟೆಯಿಂದ ಡಿ.3ರ ಸೋಮವಾರ ಮಧ್ಯಾಹ್ನ 12 ಗಂಟೆಯವರೆಗೆ ನೀರು ಪೂರೈಕೆಯು ಸ್ಥಗಿತಗೊಳ್ಳುತ್ತದೆ.
ಇದರಿಂದಾಗಿ, ಹೆಗ್ಗನಹಳ್ಳಿ, ಲಗ್ಗೆರೆ, ದಾಸರಹಳ್ಳಿ, ಶ್ರೀಗಂಧ ಕಾವಲ್, ಪೀಣ್ಯ, ಟೆಲಿಕಾಂ ಲೇಔಟ್, ಕೆಬ್ಬಾಳು, ರಾಜಗೋಪಾಲನಗರ, ಶ್ರೀನಿವಾಸ ನಗರ, ಆರ್.ಆರ್.ನಗರ, ನಂದಿನಿ ಲೇಔಟ್, ಸಂಜಯನಗರ, ಬಾಹುಬಲಿ ನಗರ, ಜಾಲಹಳ್ಳಿ, ಜಿಕೆವಿಕೆ, ಹೂಡಿ, ಏರೋ ಇಂಜಿನ್, ಕೂಡ್ಲು, ನಾರಾಯಣಪುರ, ಓಎಂಬಿಆರ್, ರಾಮಮೂರ್ತಿನಗರ, ಕೆ.ಆರ್.ಪುರ, ಮಾರತ್‌ಹಳ್ಳಿ, ಬೊಮ್ಮನಹಳ್ಳಿ, ಅಂಜನಾಪುರ, ಕೊತ್ತನೂರು, ಅರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಈ ಅವಧಿಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.