ಚೌಕಿದಾರರ ನಾಯಿ ಕೂಡ ಕಳ್ಳರ ಪರವಾಗಿದೆ: ಮೋದಿಯನ್ನು ಕುಟುಕಿದ ಸಿಧು

Update: 2018-12-02 09:13 GMT

ಹೊಸದಿಲ್ಲಿ, ಡಿ.2: ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ಪಂಜಾಬ್ ಸಚಿವ ನವಜ್ಯೋತ್ ಸಿಂಗ್ ಸಿಧು, ಮೋದಿ ವಿರುದ್ಧ ಹೊಸ ಬಾಣ ಬಿಟ್ಟಿದ್ದಾರೆ.

ಮೋದಿ ವಿರುದ್ಧ "ಚೌಕಿದಾರ್ ಚೋರ್ ಹೈ" ಎಂಬ ಹೇಳಿಕೆ ಪುನರುಚ್ಚರಿಸಿದ ಸಿಧು, "500 ಕೋಟಿಯ ವಿಮಾನಕ್ಕೆ 1,600 ಕೋಟಿ? 1,100 ಕೋಟಿ ರೂಪಾಯಿ ಯಾರ ಜೇಬು ಸೇರಿದೆ?, ಈ ಒಪ್ಪಂದದಿಂದ ಲಾಭವಾದದ್ದು ಯಾರಿಗೆ?" ಎಂದು ಪ್ರಶ್ನಿಸಿದರು. ರಾಜಸ್ಥಾನದ ಅಲ್ವಾರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, "ಚೌಕಿದಾರರ ನಾಯಿ ಕೂಡ ಕಳ್ಳರ ಪರವಾಗಿದೆ” ಎಂದು ಬಣ್ಣಿಸಿದರು.

ಕೆಲ ದಿನಗಳ ಹಿಂದಷ್ಟೇ ಪ್ರಧಾನಿಯನ್ನು ಬಂಡವಾಳಶಾಹಿಗಳ ಕೈಗೊಂಬೆ ಎಂದು ಸಿಧು ಲೇವಡಿ ಮಾಡಿದ್ದರು.

ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಅಣಕಿಸಿದ ಸಿಧು, "ರಫೇಲ್ ಜೆಟ್‍ಗಳು ಫ್ರಾನ್ಸ್‍ನಿಂದ ಬರುತ್ತವೆ. ಬುಲೆಟ್ ರೈಲು ಜಪಾನ್‍ನಿಂದ ಬರುತ್ತಿದೆ. ಇಲ್ಲಿ ಜನ ಏನು ಮಾಡುತ್ತಾರೆ?, ಅವರು ಪಕೋಡಾ ಕರಿಯುತ್ತಾರೆ" ಎಂದು ಚುಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News