ಕಿರೀಟ

Update: 2018-12-03 18:45 GMT
Editor : -ಮಗು

ಆ ದೇಶದಲ್ಲಿ ಒಬ್ಬ ರಾಜನಿದ್ದ.
ತಾನು ಎಲ್ಲರಿಗಿಂತಲೂ ಶ್ರೇಷ್ಠ ರಾಜನಾಗಬೇಕು. ಅದಕ್ಕಾಗಿ ಚಿನ್ನದಿಂದ ಅತಿ ಭಾರವಾದ ಕಿರೀಟವೊಂದನ್ನು ಮಾಡಿಸಿದ.
ಅವನಷ್ಟೇ ತೂಕದ ಕಿರೀಟ ಧರಿಸಿ ಆಸ್ಥಾನಕ್ಕೆ ಬಂದ. ಎಲ್ಲರೂ ಕಿರೀಟವನ್ನು ಹೊಗಳುವವರೇ. ರಾಜನಿಗಿಂತ ಕಿರೀಟವೇ ಸುದ್ದಿಯಾಯಿತು.
ಆದರೆ ಕಿರೀಟವನ್ನು ಹೊತ್ತು ದೇಹ ಸುಸ್ತಾಗ ತೊಡಗಿತು. ಕಿರೀಟವನ್ನು ಕೆಳಗಿಡುವಂತಿಲ್ಲ. ಬದಲಾಯಿಸುವಂತೆಯೂ ಇಲ್ಲ. ಕಿರೀಟವನ್ನು ಸಂಭಾಳಿಸುತ್ತಲೇ ರಾಜ ಬಡವಾದ. ಒಂದು ದಿನ ಸತ್ತು ಹೋದ. ಬಳಿಕ ಯಾವ ರಾಜರೂ ಕಿರೀಟವನ್ನು ಧರಿಸುವ ಧೈರ್ಯ ಮಾಡಲಿಲ್ಲ.

 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !