ಅತಿಯಾದ ಅಯೊಡಿನ್ ಸೇವನೆ ಹೈಪೊಥೈರಾಯ್ಡಿಸಂಗೆ ಕಾರಣವಾಗುತ್ತದೆಯೇ?

Update: 2018-12-04 09:20 GMT

ನಮ್ಮ ಶರೀರಕ್ಕೆ ಅಯೊಡಿನ್ ಅತ್ಯಗತ್ಯವಾಗಿದೆ. ಆದರೆ ಅದು ತಾನಾಗಿಯೇ ಅಯೊಡಿನ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ, ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ಅಯೊಡಿನ್ ಸೇರಿರಬೇಕಾಗುತ್ತದೆ. ಅತ್ಯಂತ ನೇರ ಮತ್ತು ಸಾಮಾನ್ಯ ರೂಪದಲ್ಲಿ ಅಯೊಡಿನ್ ಉಪ್ಪಿನ ಮೂಲಕ ನಮ್ಮ ಶರೀರನ್ನು ಸೇರುತ್ತದೆ.

ಯಾವುದೂ ಅತಿಯಾದರೆ ನಮ್ಮ ಶರೀರಕ್ಕೆ ಒಳ್ಳೆಯದಲ್ಲ. ಹೀಗಾಗಿ ಅಯೊಡಿನ್ ಸೇವನೆಯು ನಿಯಂತ್ರಣದಲ್ಲಿರಬೇಕು. ಸುದೀರ್ಘ ಕಾಲ ಅತಿಯಾದ ಅಯೊಡಿನ್ ಸೇವನೆಯು ಕೆಲವರಲ್ಲಿ ವಿವಿಧ ಅಡ್ಡಪರಿಣಾಮಗಳಿಗೆ ಕಾರಣವಾಗಬಲ್ಲದು. ವಾಕರಿಕೆ, ಹೊಟ್ಟೆನೋವು, ಮೂಗು ಸೋರಿಕೆ, ತಲೆನೋವು, ಬಾಯಿಗೆ ಲೋಹದ ರುಚಿ ಮತ್ತು ಅತಿಸಾರ ಇಂತಹ ಸಾಮಾನ್ಯ ಅಡ್ಡಪರಿಣಾಮಗಳಾಗಿವೆ. ಗಂಭೀರ ಪ್ರಕರಣಗಳಲ್ಲಿ ಇದು ಆ್ಯಂಜಿಯೊಡೆಮಾಕ್ಕೂ ಕಾರಣವಾಗಬಲ್ಲದು.

ಆರು ತಿಂಗಳವರೆಗಿನ ಪ್ರಾಯದ ನವಜಾತ ಶಿಶುಗಳಿಗೆ 110 ಮೈಕ್ರೋಗ್ರಾಂ,7 ತಿಂಗಳಿನಿಂದ 1 ವರ್ಷ ಪ್ರಾಯದ ಮಕ್ಕಳಿಗೆ 130 ಎಂಸಿಜಿ,1ರಿಂದ 8 ವರ್ಷ ಪ್ರಾಯದ ಮಕ್ಕಳಿಗೆ 90 ಎಂಸಿಜಿ,9ರಿಂದ 13 ವರ್ಷ ಪ್ರಾಯದ ಮಕ್ಕಳಿಗೆ 120 ಎಂಸಿಜಿ,ಹದಿಹರೆಯದವರು ಮತ್ತು ವಯಸ್ಕರಿಗೆ 150 ಎಂಸಿಜಿ,ಗರ್ಭಿಣಿಯರಿಗೆ 220 ಎಂಸಿಜಿ ಮತ್ತು ಮಕ್ಕಳಿಗೆ ಹಾಲೂಡಿಸುವ ಮಹಿಳೆಯರಿಗೆ 290 ಎಂಸಿಜಿ ಅಯೊಡಿನ್ ಸೇವನೆ ಪ್ರತಿದಿನದ ಕನಿಷ್ಠ ಅಗತ್ಯವಾಗಿದೆ.

ಅತಿಯಾದ ಅಯೊಡಿನ್ ಸೇವನೆ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ತಲೆನೋವು, ಲೋಹದ ರುಚಿ ಇತ್ಯಾದಿಗಳು ಸಾಮಾನ್ಯ ಅಡ್ಡಪರಿಣಾಮಗಳಾಗಿದ್ದು, ತುಟಿಗಳು ಮತ್ತು ಮುಖದಲ್ಲಿ ಊತ(ಆ್ಯಂಜಿಯೊಡೆಮಾ, ಜ್ವರ, ಸಂದುನೋವು,ತೀವ್ರ ರಕ್ತಸ್ರಾವ ಮತ್ತು ತರಚಿದಂಥ ಗಾಯಗಳು, ದುಗ್ಧರಸ ಗ್ರಂಥಿಯ ಹಿಗ್ಗುವಿಕೆಯಂತಹ ತೀವ್ರ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ಕೆಲವು ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಸಾವು ಕೂಡ ಸಂಭವಿಸಬಹುದು.

ಲಕ್ಷಣಗಳು:

ಅಯೊಡಿನ್ ಸೇವನೆಯ ಪ್ರಮಾಣ ಅತಿಯಾದಾಗ ವ್ಯಕ್ತಿಯಲ್ಲಿ ಸನ್ನಿ ಮತ್ತು ಮಂಪರು ಉಂಟಾಗುತ್ತದೆ. ಅಯೊಡಿನ್ ರುಚಿ ಸಂವೇದನೆಗಳೊಂದಿಗೆ ಪ್ರತಿವರ್ತಿಸುವುದರಿಂದ ಬಾಯಿಯಲ್ಲಿ ಲೋಹದ ರುಚಿ ಉಂಟಾಗುತ್ತದೆ. ಹೊಟ್ಟೆನೋವು, ವಾಂತಿ ಮತ್ತು ಅತಿಸಾರ ಕಾಣಿಸಿಕೊಳ್ಳಬಹುದು. ಹೈಪೋಥೈರಾಯ್ಡಿಸಂ ಅನ್ನೂ ಅದು ಉಂಟು ಮಾಡುತ್ತದೆ, ಈ ಸ್ಥಿತಿಯಲ್ಲಿ ಅಯೊಡಿನ್ ಥೈರಾಯ್ಡಿ ಹಾರ್ಮೋನ್‌ಗಳ ಉತ್ಪಾದನೆಗೆ ವ್ಯತ್ಯಯವನ್ನುಂಟು ಮಾಡುವ ಮೂಲಕ ಕಡಿಮೆ ಥೈರಾಯ್ಡಾ ಹಾರ್ಮೋನ್ ಮಟ್ಟಕ್ಕೆ ಕಾರಣವಾಗುತ್ತದೆ. ಅಲ್ಲದೆ ಅತಿಯಾದ ಅಯೊಡಿನ್ ಸೇವನೆಯು ಶರೀರದಲ್ಲಿ ನಿರ್ಜಲೀಕರಣವನ್ನೂ ಉಂಟು ಮಾಡುತ್ತದೆ.

ಅತಿಯಾದ ಅಯೊಡಿನ್ ಸೇವನೆಯು ಗ್ರೀವ್ಸ್ ಡಿಸೀಸ್, ಹಾಷಿಮೊಟೋಸ್ ಥೈರಾಯ್ಡಿಟಿಸ್ ಮತ್ತು ಗಳಗಂಡಗಳ ಅಪಾಯವನ್ನುಂಟು ಮಾಡುತ್ತದೆ. ಅಯೊಡಿನ್ ಪೂರಕಗಳು ಆ್ಯಂಟಿ ಥೈರಾಯ್ಡಿ ಔಷಧಿಗಳ ಜೊತೆಗೆ ಸೇರಿ ಶರೀರವು ಸೀಮಿತ ಮತ್ತು ನಿರ್ಬಂಧಿತ ಪ್ರಮಾಣದಲ್ಲಿ ಥೈರಾಯ್ಡಿ ಹಾರ್ಮೋನ್ ಉತ್ಪತ್ತಿ ಮಾಡಲು ಕಾರಣವಾಗುತ್ತವೆ. ಪೊಟ್ಯಾಷಿಯಂ ಅಯೊಡೈಡ್‌ನಂತಹ ಪೂರಕಗಳು ಅಧಿಕ ರಕ್ತದೊತ್ತಡ ಔಷಧಿಗಳೊಂದಿಗೆ ಪ್ರತಿವರ್ತಿಸಿ ರಕ್ತದಲ್ಲಿಯ ಪೊಟ್ಯಾಷಿಯಂ ಪ್ರಮಾಣ ಅಪಾಯಕಾರಿ ಮಟ್ಟಕ್ಕೇರಲು ಕಾರಣವಾಗುತ್ತವೆ.

ಅತಿಯಾದ ಅಯೊಡಿನ್ ಸೇವನೆಯ ಯಾವುದೇ ಲಕ್ಷಣ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ನಿಮ್ಮಲ್ಲಿ ಕಂಡುಬಂದಿರುವ ಲಕ್ಷಣಗಳ ತೀವ್ರತೆಯನ್ನು ಅವಲಂಬಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಅತಿಯಾದ ಅಯೊಡಿನ್ ಸೇವನೆ ಹೈಪೊಥೈರಾಯ್ಡಿಸಂ ಉಂಟು ಮಾಡುವಲ್ಲಿ ನೇರವಾದ ಪಾತ್ರವನ್ನು ಹೊಂದಿಲ್ಲ ಎನ್ನುವುದನ್ನು ವಿವಿಧ ಅಧ್ಯಯನಗಳು ತೋರಿಸಿವೆ. ಈಗಾಗಲೇ ಥೈರಾಯ್ಡಿ ಸಂಬಂಧಿ ಸಮಸ್ಯೆಗಳು ಮತ್ತು ಅಪಾಯಗಳಿಂದ ಬಳಲುತ್ತಿರುವವರು ಅತಿಯಾಗಿ ಅಯೊಡಿನ್ ಸೇವಿಸಿದರೆ ಅವರ ಸ್ಥಿತಿ ಇನ್ನಷ್ಟು ಹದಗೆಡಬಹುದು,ಇದನ್ನು ಆಯೊಡಿನ್ ಪ್ರೇರಿತ ಥೈರಾಯ್ಡಿ ಅಸಮರ್ಪಕ ಕಾರ್ಯನಿರ್ವಹಣೆ (ಥೈರಾಯ್ಡಿ ಡಿಸ್‌ಫಂಕ್ಷನ್) ಎನ್ನುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News