ಉನ್ನತ ಸ್ಥಾನಗಳಲ್ಲಿರುವವರು ಅಷ್ಟೇನೂ ಬುದ್ಧಿವಂತರಲ್ಲ: ಮಿಶೆಲ್ ಒಬಾಮ

Update: 2018-12-04 16:03 GMT

ಲಂಡನ್, ಡಿ. 4: ಉನ್ನತ ಸ್ಥಾನಗಳಲ್ಲಿರುವ ಜನರು ಅಷ್ಟೇನೂ ಬುದ್ಧಿವಂತರಲ್ಲ ಎಂದು ಅಮೆರಿಕದ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮ ಹೇಳಿದ್ದಾರೆ.

ತನ್ನ ಆತ್ಮಚರಿತ್ರೆ ‘ಬಿಕಮಿಂಗ್’ನ್ನು ಬ್ರಿಟನ್‌ನಲ್ಲಿ ಬಿಡುಗಡೆಗೊಳಿಸುವುದಕ್ಕಾಗಿ ಲಂಡನ್‌ನ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ಸೋಮವಾರ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘‘ಪ್ರಭಾವಿ ಜನರು ಭಾಗವಹಿಸುವ ಪ್ರತಿಯೊಂದು ಮೇಜಿನಲ್ಲಿ ನಾನು ಭಾಗವಹಿಸಿದ್ದೇನೆ. ನಾನು ಲಾಭ-ರಹಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರತಿಷ್ಠಾನಗಳು, ಕಾರ್ಪೊರೇಶನ್‌ಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಕಾರ್ಪೊರೇಟ್ ಆಡಳಿತ ಮಂಡಳಿಗಳಲ್ಲಿ ಕೆಲಸ ಮಾಡಿದ್ದೇನೆ. ಶೃಂಗ ಸಮ್ಮೇಳನಗಳಿಗೆ ಹೋಗಿದ್ದೇನೆ. ವಿಶ್ವಸಂಸ್ಥೆಯಲ್ಲಿ ಕುಳಿತಿದ್ದೇನೆ. ಅವರು ಅಷ್ಟೇನೂ ಬುದ್ಧಿವಂತರಲ್ಲ’’ ಎಂದು ಮಿಶೆಲ್ ಹೇಳಿದರು.

‘‘ಅವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಕಸರತ್ತುಗಳನ್ನು ಮಾಡುತ್ತಾರೆ. ಅವರು ತಮ್ಮ ಅಧಿಕಾರವನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಆಗ ನಾವು ಇಲ್ಲಿಗೆ ಸೇರಿದವರಲ್ಲ ಎಂಬ ಭಾವನೆ ನಮಗೆ ಬರುತ್ತದೆ. ಅಲ್ಲಿರುವವರು ಪ್ರತಿಭಾವಂತರಲ್ಲ ಎಂದು ನಾನು ಇಲ್ಲಿ ಹೇಳುತ್ತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News