ನಮ್ಮ ನಿರೀಕ್ಷೆ ಉದ್ಯೋಗ, ಬೆಲೆ ನಿಯಂತ್ರಣ, ಬದುಕುವ ಹಕ್ಕು!

Update: 2018-12-06 05:41 GMT

ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಎಂ.ಬಿ.ನಾಗಣ್ಣಗೌಡ ವಿದ್ಯಾರ್ಥಿ ದಿಶೆಯಲ್ಲೇ ಪ್ರಗತಿ ಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ವಿದ್ಯಾರ್ಥಿ ಚಳವಳಿ ಸೇರಿದಂತೆ ಕಾಲೇಜು ದಿನಗಳಲ್ಲಿ ಪ್ರಗತಿ ಪರ ಹೋರಾಟಗಳಲ್ಲಿ ಭಾಗವ ಹಿಸುತ್ತಾ ಬಂದರು.

 ಗುತ್ತಿಗೆ ಪೌರ ಕಾರ್ಮಿ ಕರ ಸಂಘ, ನಾನ್ ಕ್ಲಿನಿಕಲ್ ನೌಕರರ ಸಂಘ, ರಸ್ತೆಬದಿ ವ್ಯಾಪಾರಿಗಳ ಸಂಘ, ನಿವೇಶನ ರಹಿತರ ಸಂಘಟನೆ ಗಳನ್ನು ನಡೆಸುತ್ತಿರುವ ಗೌಡರು, ಕಾವೇರಿ ಕಣಿವೆ ರೈತ ಒಕ್ಕೂಟದ ಸಂಚಾಲಕರೂ ಆಗಿದ್ದಾರೆ. ಜತೆಗೆ ಹಲವಾರು ಪತ್ರಿಕೆಗಳಲ್ಲಿ ಜನಪರ ಲೇಖನಗಳನ್ನು ಬರೆಯುತ್ತಿರುವುದಲ್ಲದೆ, ಸ್ವತಃ ಸ್ಥಳೀಯಮಟ್ಟದಲ್ಲಿ ಪತ್ರಿಕೆಯೊಂದನ್ನು ನಡೆಸುತ್ತಿದ್ದಾರೆ. ಬಾಬರಿ ಮಸೀಸಿ ಧ್ವಂಸ, ರಾಮಮಂದಿರ ನಿರ್ಮಾಣ ವಿಚಾರ ಕುರಿತಂತೆ ಅವರ ಅನಿಸಿಕೆ ಯನ್ನು ಇಲ್ಲಿ ನೀಡಲಾಗಿದೆ.

1992ರ ಬಾಬರಿ ಮಸೀದಿ ಧ್ವಂಸ ಘಟನೆ ನಡೆದಾಗ ನಾನು ವಿದ್ಯಾರ್ಥಿಯಾಗಿದ್ದೆ. ಆಗ ನನಗೆ 14 ವರ್ಷ ವಯಸ್ಸು. ಈ ಘಟನೆ ದೇಶದಲ್ಲಿ ಆವರೆಗೆ ತೆರೆಮರೆಯಲ್ಲಿದ್ದ ಕೋಮುವಾದಿ ರಾಜಕಾರಣವನ್ನು ಮುನ್ನೆಲೆಗೆ ತಂದಿತು. ಕೋಮುವಾದಿ ರಾಜಕಾರಣ ಪ್ರಧಾನ ರಾಜಕಾರಣವಾಗಿ ರೂಪುಗೊಳ್ಳಲು ಕಾರಣವಾಯಿತು. ಸದ್ಯ ನಡೆಯುತ್ತಿರುವ ರಾಮ ಮಂದಿರ ಹೋರಾಟ 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡಿದೆ. ಆಡಳಿತದ ಎಲ್ಲ ರಂಗಗಳಲ್ಲಿ ವಿಫಲವಾಗಿರುವ ಬಿಜೆಪಿಗೆ ಓಟು ತಂದುಕೊಡಲು ರಾಮನನ್ನು ಮುನ್ನೆಲೆಗೆ ತರಲಾಗಿದೆ. ಯುವಜನರು ಇಂದು ಉದ್ಯೋಗ. ಅಗತ್ಯವಸ್ತುಗಳ ಬೆಲೆ ನಿಯಂತ್ರಣ. ಎಲ್ಲರಿಗೂ ಬದುಕುವ ಹಕ್ಕಿನ ಖಾತ್ರಿಯನ್ನು ನಿರೀಕ್ಷಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೋಮುವಾದಿ ರಾಜಕಾರಣ ವನ್ನು ನಡೆಸುವ ಬಿಜೆಪಿ, ಕಾಂಗ್ರೆಸ್, ಮುಸ್ಲಿಂ ಲೀಗ್ ಅಥವಾ ಯಾವುದೇ ಗುಂಪಾಗಿರಲಿ ಅದನ್ನು ಖಡಾ ಖಂಡಿತವಾಗಿ ವಿರೋಧಿಸಬೇಕು. ಸಮಾಜದಲ್ಲಿನ ಸಹಜ ಭಿನ್ನಾಭಿಪ್ರಾಯಗಳನ್ನು ಮುನ್ನೆಲೆಗೆ ತರುವ ಬದಲು ದೇಶದ ಏಕತೆಯನ್ನು ಕಟ್ಟುವ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

Writer - ಎಂ.ಬಿ. ನಾಗಣ್ಣಗೌಡ, ಮಂಡ್ಯ

contributor

Editor - ಎಂ.ಬಿ. ನಾಗಣ್ಣಗೌಡ, ಮಂಡ್ಯ

contributor

Similar News