1.50 ಲಕ್ಷ ವಾಹನಗಳನ್ನು ಹಿಂದಕ್ಕೆ ಪಡೆದುಕೊಂಡ ನಿಸಾನ್

Update: 2018-12-07 16:33 GMT

ಟೋಕಿಯೊ, ಡಿ. 7: ಸರಿಯಾದ ತಪಾಸಣೆ ನಡೆಸದೆ ಮಾರಾಟ ಮಾಡಲಾದ ಸುಮಾರು 1.50 ಲಕ್ಷ ವಾಹನಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಜಪಾನ್‌ನ ವಾಹನ ತಯಾರಿಕಾ ಸಂಸ್ಥೆ ನಿಸಾನ್ ಶುಕ್ರವಾರ ಪ್ರಕಟಿಸಿದೆ.

‘‘ವಿಧಿವಿಧಾನಗಳ ಅನುಸರಣೆಯಲ್ಲಿ ವ್ಯತ್ಯಯವಾಗಿರುವುದನ್ನು ನಿಸಾನ್ ಇತ್ತೀಚೆಗೆ ಪತ್ತೆಹಚ್ಚಿದೆ. ಇದರಿಂದಾಗಿ ತಪಾಸಣೆ ಹಂತದಲ್ಲಿ ನಿಖರವಲ್ಲದ ‘ಉತ್ತೀರ್ಣ/ಅನುತ್ತೀರ್ಣ’ ನಿರ್ಧಾರಗಳನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ’’ ಎಂದು ಕಂಪೆನಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹಾಗಾಗಿ, ಜಪಾನ್‌ನಲ್ಲಿ 1.50 ಲಕ್ಷದಷ್ಟು ವಾಹನಗಳನ್ನು ಕಂಪೆನಿಯು ಪ್ರಾಮಾಣಿಕವಾಗಿ ಹಿಂದಕ್ಕೆ ಪಡೆದುಕೊಳ್ಳುತ್ತಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News