ಯುವಜನತೆಗೆ ಸಿರಿಧಾನ್ಯದ ಅರಿವು ಮೂಡಿಸಬೇಕು: ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್

Update: 2018-12-07 16:45 GMT

ಬೆಂಗಳೂರು, ಡಿ.7: ನೂರಾರು ವರ್ಷಗಳ ಹಿಂದೆ ಪೂರ್ವಜರು ಬೆಳೆಯುತ್ತಿದ್ದ ಸಾವಯವ ಮತ್ತು ಸಿರಿಧಾನ್ಯಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್‌ರವರು ಅಭಿಪ್ರಾಯಪಟ್ಟರು. 

ಶುಕ್ರವಾರ ನಗರದಲ್ಲಿ ಏರ್ಪಡಿಸಲಾಗಿದ್ದ, ಜ.18ರಿಂದ ನಡೆಯಲಿರುವ ಅಂತರರ್‌ರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಪೂರಕವಾಗಿ, ಸಾವಯವ ಮತ್ತು ಸಿರಿಧಾನ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಬಳಸುತ್ತಿರುವ ರಾಸಾಯನಿಕ ಮಿಶ್ರಿತ ಆಹಾರ ಧಾನ್ಯಗಳ ಬದಲಾಗಿ ಸಾವಯವ ಸಿರಿಧಾನ್ಯಗಳನ್ನು ಬಳಸುವ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕಿದೆ ಎಂದು ಅವರು ತಿಳಿಸಿದರು.

ಕೃಷಿ ಬಳಕೆಯಲ್ಲಿ ಕಡಿಮೆ ನೀರು, ರಾಸಾಯನಿಕ ಹೊರತು ಪಡಿಸಿ, ಬೆಳೆಯಬಹುದಾದ ಸಾವಯವ ಸಿರಿಧಾನ್ಯಗಳಲ್ಲಿ ಹೆಚ್ಚು ಪೌಷ್ಟಿಕಾಂಶವಿದ್ದು, ಇದರ ಸೇವನೆಯಿಂದ ಜನರ ಆರೋಗ್ಯವು ಸುಧಾರಿಸಲಿದೆ ಹಾಗೂ ರೈತರಿಗೂ ಹೆಚ್ಚು ಲಾಭ ತರುವಂತಹ ಸಿರಿಧಾನ್ಯಗಳನ್ನು ಬೆಳೆಯಲು ಉತ್ತಮ ಅವಕಾಶಗಳು ಹೆಚ್ಚಲಿವೆ. ಇದರ ಸದುಪಯೋಗ ಪಡಿಸಿಕೊಳ್ಳಲು ಇಂತಹ ಸಂವಾದ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆ ಆಯುಕ್ತ ಕೆ.ಜೆ.ಜಗದೀಶ್, ಮಧುಮೇಹ ರೋಗಕ್ಕೆ ಇಂದು ಬೆಳೆಯುತ್ತಿರುವ ರಾಸಾಯನಿಕ ಮಿಶ್ರಿತ ಆಹಾರ ಧಾನ್ಯಗಳು ಕಾರಣವಾಗಿದೆ. ಸಾವಯವ ಸಿರಿಧಾನ್ಯಗಳು ನಾಗರಿಕತೆ ಬೆಳೆದಂತೆ ಕಣ್ಮರೆಯಾಗಿದೆ. ಇದರಿಂದ ಜನರ ಆರೋಗ್ಯ ಶೈಲಿಯ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News