ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಎರಡನೆ ಕಂತು ಬಿಡುಗಡೆ

Update: 2018-12-07 16:46 GMT

ಬೆಂಗಳೂರು, ಡಿ. 7: ಬೆಳಗಾವಿಯಲ್ಲಿ ಡಿ.10ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಎರಡನೆ ಕಂತನ್ನು ಬಿಡುಗಡೆ ಮಾಡಲಾಗಿದೆ.

225 ಮಂದಿ ಶಾಸಕರು ಹಾಗೂ 68 ಮಂದಿ ವಿಧಾನ ಪರಿಷತ್ ಸದಸ್ಯರಿಗೆ ಒಟ್ಟು 147 ಕೋಟಿ ರೂ.ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಮೊದಲ ಕಂತಿನಲ್ಲಿ 143ಕೋಟಿ ರೂ.ಗಳನ್ನು 2018ರ ಆಗಸ್ಟ್ 13ರಂದು ಬಿಡುಗಡೆ ಮಾಡಿದ್ದು, ಇದೀಗ ಎರಡನೆ ಕಂತನ್ನು ಹಣಕಾಸು ಇಲಾಖೆ ಬಿಡುಗಡೆಗೊಳಿಸಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News