ಅಡಿಲೇಡ್ ಟೆಸ್ಟ್: ಭಾರತಕ್ಕೆ ಅಲ್ಪ ಮುನ್ನಡೆ

Update: 2018-12-08 03:40 GMT

ಅಡಿಲೇಡ್, ಡಿ.8: ಮಳೆಯಿಂದ ಬಾಧಿತವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 235 ರನ್ನುಗಳಿಗೆ ನಿಯಂತ್ರಿಸಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮುನ್ನಡೆ ಸಾಧಿಸಿದೆ.

ಏಳು ವಿಕೆಟ್ ನಷ್ಟಕ್ಕೆ 191 ರನ್‌ಗಳಿಂದ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯಾ, ಟ್ರಾವಿಸ್ ಹೆಡ್ (72) ಅವರ ಏಕಾಂಗಿ ಸಾಹಸದಿಂದ ಪ್ರತಿಹೋರಾಟ ಸಂಘಟಿಸಿತ್ತು. ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಸ್ಟಾರ್ಕ್- ಹೆಡ್ ಜೋಡಿಯನ್ನು ಬೇರ್ಪಡಿಸುವಲ್ಲಿ ಬೂಮ್ರಾ ಯಶಸ್ವಿಯಾದರು. 15 ರನ್ ಗಳಿಸಿದ ಸ್ಟಾರ್ಕ್, ಕೀಪರ್ ರಿಷಬ್ ಪಂತ್ ಅವರಿಗೆ ಕ್ಯಾಚ್ ನೀಡಿ ವಾಪಸ್ಸಾದರು. ಆಗ ಆಸ್ಟ್ರೇಲಿಯಾ ತಂಡದ ಸ್ಕೋರ್ 204 ಆಗಿತ್ತು.

ನಂತರ ಹೆಡ್ ಜತೆಗೂಡಿದ ನ್ಯಾಥಲ್ ಲಿಯಾನ್ (24) ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಭಾರತದ ಬೌಲರ್‌ಗಳಿಗೆ ಭಯ ಮೂಡಿಸಿದರು. ಈ ಹಂತದಲ್ಲಿ ಅನುಭವಿ ಬೌಲರ್ ಮುಹಮ್ಮದ್ ಶಮಿ ಸತತ ಎರಡು ಎಸೆತಗಳಲ್ಲಿ ಟ್ರಾವಿಸ್ ಹೆಡ್ ಹಾಗೂ ಜೋಶ್ ಹ್ಯಾಸಲ್‌ವುಡ್ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಇನಿಂಗ್ಸ್ ಹೆಚ್ಚು ಬೆಳೆಯದಂತೆ ನೋಡಿಕೊಂಡರು. ಇಬ್ಬರೂ ಆಟಗಾರರು ಪಂತ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಲಿಯಾನ್ 28 ಎಸೆತಗಳಲ್ಲಿ 25 ರನ್ ಗಳಿಸಿ ಔಟಾಗದೇ ಉಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News