ಯುಎಇ: ನೂರುಲ್ ಹುದಾ ಇಷ್ಕ್-ಇ-ರಸೂಲ್ ಕಾರ್ಯಕ್ರಮ

Update: 2018-12-08 06:18 GMT

ಯುಎಇ, ಡಿ.8: ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ಉತ್ತಮ ವಿದ್ಯಾರ್ಥಿಯಾಗಿ, ಉತ್ತಮ ಅಧ್ಯಾಪಕರಾಗಿ, ಉತ್ತಮ ಪತಿಯಾಗಿ, ಉತ್ತಮ ಸ್ನೇಹಿತನಾಗಿ, ಉತ್ತಮ ಆಡಳಿತ ಅಧಿಕಾರಿಯಾಗಿ, ಉತ್ತಮ ನಾಯಕನಾಗಿ ಹೀಗೆ ತಮ್ಮ ಜೀವನದ ಎಲ್ಲಾ ಘಟ್ಟಗಳಲ್ಲಿ  ಅಳವಡಿಸಿಕೊಂಡಿದ್ದ ಅತ್ಯುತ್ತಮ ಮಾದರಿ ಜೀವನ ಮಾನವ ಕುಲಕ್ಕೇ ಶ್ರೇಷ್ಠ ಮಾದರಿಯಾಗಿದೆ. ಅವರ ಜೀವನ ಚರಿತ್ರೆಯನ್ನು ನಾವು ಅಭ್ಯಸಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಇಹ ಪರ ವಿಜಯಿಗಳಾಗಲು ಸಾಧ್ಯ ಎಂದು ಅಡ್ವೊಕೇಟ್ ಹನೀಫ್ ಹುದವಿ ಹೇಳಿದರು.

ನೂರುಲ್ ಯುಎಇ ಸಮಿತಿಯ ಅದೀನದಲ್ಲಿ ಇತ್ತೀಚೆಗೆ ನಗರದ ಪರ್ಲ್ ಕ್ರೀಕ್ ಹೋಟೆಲ್ ಸಭಾಂಗಣದಲ್ಲಿ ನಡೆದ ಇಷ್ಕ್-ಇ-ರಸೂಲ್ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಸೈಯದ್ ರಜೀಹ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕಿರಾಅತ್ ಪಠಿಸುವುದರೊಂದಿಗೆ ಉದ್ಘಾಟಿಸಿದರು 

ಸೈಯದ್ ಅಸ್ಗರ್ ಅಲಿ ತಂಙಳ್ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷ ಶರೀಫ್ ಕಾವು ವಹಿಸಿದ್ದರು. 

ಅತಿಥಿಯಾಗಿ ಭಾಗವಹಿಸಿದ್ದ ಅಹ್ಮದ್ ನಯೀಂ ಮುಕ್ವೆ ಪ್ರವಾದಿ ಸಂದೇಶ ಭಾಷಣ ಮಾಡಿದರು. ನೂರುಲ್ ಹುದಾ ಯುಎಇ ಸಮಿತಿಯ ರಕ್ಷಾಧಿಕಾರಿ ಹಾಜಿ ಮೊಯ್ದಿನ್ ಕುಟ್ಟಿ ಹಾಜಿ ದಿಬ್ಬ, ಅಶ್ರಫ್ ಶಾ ಮಾಂತೂರು,  ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ವ್ಯವಸ್ಥಾಪಕ ಇಸಾಕ್ ಹಾಜಿ ತೋಡಾರು, ದಾರುನ್ನೂರ್ ಯುಎಇ ಸಮಿತಿಯ ಅಧ್ಯಕ್ಷ ಅಲ್ತಾಫ್ ಫರಂಗಿಪೇಟೆ, ನೂರುಲ್ ಹುದಾ ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೇಗ, ಅಬುಧಾಬಿ ಸಮಿತಿಯ ಗೌರವಾಧ್ಯಕ್ಷ ಅಝೀಝ್ ಪೆರ್ಮುದೆ, ಅಧ್ಯಕ್ಷ ಅಶ್ರಫ್ ಪಿ.ಕೆ., ಉಪಾಧ್ಯಕ್ಷ ಅಶ್ರಫ್ ಪೂಚಕ್ಕಾಡ್, ಪ್ರಮುಖರಾದ ಅಶ್ರಫ್ ಮೊವ್ವಲ್ ಮೊದಲಾದವರು ಮಾತನಾಡಿದರು.

ಇದೇ ಸಂದರ್ಭ ಸೈಯದ್ ರಜೀಹ್ ಅಲಿ ಶಿಹಾಬ್ ತಂಙಳ್, ಉಸ್ತಾದ್ ಅಹ್ಮದ್ ನಯೀಂ ಮುಕ್ವೆ ಮತ್ತು ಫೈಝ್ ಬರಾಮಿ ಅವರನ್ನು ನೂರುಲ್ ಹುದಾ ಯುಎಇ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ನೂರುಲ್ ಹುದಾ ಯುಎಇ ಸಮಿತಿಯ ಉಪದೇಶಕರಾದ ಶಂಸುದ್ದೀನ್ ಸೂರಲ್ಪಾಡಿ, ಯೂಸುಫ್ ಹಾಜಿ ಬೇರಿಕೆ, ಅಬ್ದುಲ್ ಖಾದರ್ ಬೈತಡ್ಕ, ಕೋಶಾದಿಕಾರಿ ಅಶ್ರಫ್ ಯಾಕೂತ್, ದುಬೈ ಸಮಿತಿಯ ಕೋಶಾದಿಕಾರಿ ಯೂಸುಫ್ ಈಶ್ವರಮಂಗಿಲ, ಇಂದಾದ್ ಪಳ್ಳಿಪುಝ, ಶಮೀಮ್ ಬೇಕಲ್, ಅಶ್ರಫ್ ಮೇನಪಾಝ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೆಐಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ, ನೂರುಲ್ ದುಬೈ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಸಲಾಮ್ ಬಪ್ಪಲಿಗೆ, ಕಾರ್ಯಾಧ್ಯಕ್ಷ ಅನ್ವರ್ ಮಾಣಿಲ, ಕೆಐಸಿ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೀಫ್ ಕೊಡಿನೀರು, ದಾರುನ್ನೂರ್ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಕೆಮ್ಮಿಂಜೆ, ಯುಎಇ ಕನ್ನಡಿಗರು ಸಮಿತಿಯ ಪ್ರಮುಖ ರಫೀಕ್ ಕೊಡಗು, ಯೂತ್ ವಿಂಗ್ ಅಧ್ಯಕ್ಷ ರಝಾಕ್ ಕಾವು, ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಕೊಚ್ಚಿ, ಕೋಶಾಧಿಕಾರಿ ರಿಫಾಯಿ ಗೂನಡ್ಕ, ಕ್ಲಸ್ಟರ್ ಸಮಿತಿಯ ಪ್ರಮುಖರಾದ ಉಸ್ಮಾನ್ ಮರೀಲ್, ಮೂಸ ಕುಂಞಿ ಕಾವು, ಶಂಶೀರ್ ಅಡ್ಡೂರು, ರಫೀಕ್ ಸಂಪ್ಯ, ಮುಹಮ್ಮದ್ ಪಳ್ಳತ್ತೂರು, ಅಬ್ದುಲ್ ಖಾದರ್ ಹಾಜಿ ಸಂಪ್ಯ ಮತ್ತು ನೂರುಲ್ ಹುದಾ ಯುಎಇ, ದುಬೈ, ಕ್ಲಸ್ಟರ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಮತ್ತು ಎಸ್ಕೆ ಎಸ್ಸೆಸ್ಸೆಫ್ ಕರ್ನಾಟಕ ದುಬೈ, ಕೆಐಸಿ, ದಾರುನ್ನೂರ್, ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ ಯುಎಇ ಸಮಿತಿ, ದಾರುಸ್ಸಲಾಮ್ ಬೆಳ್ತಂಗಡಿ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಕೌಡಿಚ್ಚಾರ್  ಸ್ವಾಗತಿಸಿದರು. ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸೋಂಪಾಡಿ ವಂದಿಸಿದರು. ಯುಎಇ ಸಮಿತಿಯ ಕಾರ್ಯಾಧ್ಯಕ್ಷ ಅಶ್ರಫ್ ಪರ್ಲಡ್ಕ ಮತ್ತು ದೇಲಂಪಾಡಿ ದುಬೈ ಸಮಿತಿಯ ಪ್ರಭಾರ ಕಾರ್ಯದರ್ಶಿ ಸಿದ್ದೀಕ್ ಅಡ್ಡೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News