×
Ad

ಬುದ್ಧಿವಾದ ಹೇಳಿದ ತಾಯಿಗೆ ಹಲ್ಲೆ ನಡೆಸಿದ ಪುತ್ರ: ವಿಡಿಯೋ ವೈರಲ್

Update: 2018-12-08 22:15 IST

ಬೆಂಗಳೂರು, ಡಿ.8: ಬುದ್ಧಿವಾದ ಹೇಳಿದ್ದಕ್ಕೆ ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ಕಿರುಕುಳ ನೀಡಿದ ಮಗನ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿ, ಕ್ರಮ ಕೈಗೊಳ್ಳಲು ಜೆಪಿನಗರ ಪೊಲೀಸರು ಮುಂದಾಗಿದ್ದಾರೆ.

ಹೆತ್ತಮ್ಮನಿಗೆ ಹೊಡೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲಿ ಹರಿದಾಡುತ್ತಿರುವ ಬಗ್ಗೆ ಪರಿಶೀಲಿಸಿದಾಗ ಜೆ.ಪಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಕಂಡುಬಂದಿದೆ.

ಮಗ ಪೊರಕೆಯಿಂದ ಹೊಡೆದಿರುವ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ವಿಡಿಯೋ ವೈರಲ್ ಆಗಿರುವುದನ್ನು ತಿಳಿದು ಪುತ್ರ ಜೀವನ್ ಎಂಬಾತನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ ಎಂದು ಡಿಸಿಪಿ ಅಣ್ಣಾಮಲೈ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏನಿದು ಪ್ರಕರಣ?: ಬುದ್ಧಿವಾದ ಹೇಳಿದ್ದಕ್ಕೆ ಜೀವನ್ ತನ್ನ ತಾಯಿಗೆ ಪೊರಕೆಯಿಂದ ಹೊಡೆದು ಕಿರುಕುಳ ನೀಡಿದ್ದಾನೆ. ಅಲ್ಲದೇ ಹೊರಗಡೆ ನನ್ನ ವಿಚಾರ ಮಾತಾಡಿದರೆ, ಇದೇ ರೀತಿ ಕಿರುಕುಳ ನೀಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.

ತಾಯಿ ತನ್ನ ಮಗನ ಮುಂದೆ ಕೈ ಮುಗಿದರೂ ಜೀವನ್ ಕರುಣೆ ತೋರಲಿಲ್ಲ. ಅಲ್ಲದೆ, ತಾಯಿ ಎದುರಲ್ಲೇ ಸಿಗರೇಟ್ ಸೇದಿ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗಾಗಿ ತಾಯಿ ಮಗನಿಗೆ ಬುದ್ಧಿವಾದ ಹೇಳುವಂತೆ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News