ದಲಿತ ಸೇನೆ: ಬೆಂಗಳೂರು ಜಿಲ್ಲಾ ಮಹಿಳಾ ಅಧ್ಯಕ್ಷೆ ಆಗಿ ತಬಸ್ಸುಮ್ ಆಯ್ಕೆ
Update: 2018-12-08 22:26 IST
ಬೆಂಗಳೂರು, ಡಿ.8: ದಲಿತ ಸೇನೆ ಸಂಘಟನೆಯ ಬೆಂಗಳೂರು ಜಿಲ್ಲಾ ಮಹಿಳಾ ಅಧ್ಯಕ್ಷೆ ಆಗಿ ತಬಸ್ಸುಮ್ ಅವರು ಆಯ್ಕೆ ಆಗಿದ್ದಾರೆ.
ಶನಿವಾರ ದಲಿತ ಸೇನೆ ರಾಜ್ಯ ಸಮಿತಿಯ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದ್ದು, ಬೆಂಗಳೂರು ದಕ್ಷಿಣ ತಾಲೂಕಿನ ಹಿಂದುಳಿದ ವರ್ಗದ ಅಧ್ಯಕ್ಷೆ ಆಗಿ ಶೋಭಾ ಆಯ್ಕೆಯಾಗಿದ್ದಾರೆ. ಅದೇ ರೀತಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.