ಜೆಪುರ ಪಿಂಕ್ ಪ್ಯಾಂಥರ್ಸ್ ಗೆ ತಲೆಬಾಗಿದ ತಮಿಳ್ ತಲೈವಾಸ್

Update: 2018-12-09 18:19 GMT

ವಿಶಾಖಪಟ್ಟಣ, ಡಿ.9: ದೀಪಕ್ ಹೂಡ ಹಾಗೂ ಆನಂದ್ ಪಾಟೀಲ್ ಅವರ ಅಮೋಘ ಆಟಕ್ಕೆ ಮಣಿದ ತಮಿಳ್ ತಲೈವಾಸ್ ಜೈಪುರ ಪಿಂಕ್ ಪ್ಯಾಂಥರ್ಸ್ ಎದುರು 37-24 ಅಂಕಗಳ ಅಂತರದಲ್ಲಿ ಸೋಲೊಪ್ಪಿಕೊಂಡಿದೆ.

ರವಿವಾರ ಇಲ್ಲಿ ನಡೆದ 6ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ತಂಡದ ದೀಪಕ್ ಹೂಡ 9 ಅಂಕ, ಆನಂದ್ ಪಾಟೀಲ್ 5 ಅಂಕ ಹಾಗೂ ಅಜಿಂಕ್ಯ ಪವಾರ್ 4 ಅಂಕಗಳನ್ನು ಗಳಿಸಿ ತಲೈವಾಸ್‌ಗೆ ಸೋಲಿನ ರುಚಿ ತೋರಿಸಿದರು. ಸುನೀಲ್ ಸಿದ್ಧಗಾವ್ಳಿ ಜೈಪುರ ರಕ್ಷಣಾ ವಿಭಾಗದಲ್ಲಿ 5 ಅಂಕಗಳಿಸಿದರು. ಈ ಗೆಲುವು ಜೈಪುರ ಪ್ಲೇ ಆಫ್ ಹಂತಕ್ಕೇರಲು ಪ್ರಮುಖವಾಗಿತ್ತು. ತಮಿಳ್ ತಲೈವಾಸ್‌ನ ಸುಕೇಶ್ ಹೆಗ್ಡೆ 6 ರೈಡಿಂಗ್ ಅಂಕ ಗಳಿಸಿದರೆ ಅಮಿತ್ ಹೂಡ 3 ಅಂಕಗಳನ್ನು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡ ಹರ್ಯಾಣ ಸ್ಟೀಲರ್ಸ್ ವಿರುದ್ಧ 35-31 ಅಂಕಗಳ ಅಂತರದಿಂದ ಜಯ ಸಾಧಿಸಿತು. ಟೈಟಾನ್ಸ್ ಪರ ರಾಹುಲ್ ಚೌಧರಿ 12 ಅಂಕ ಗಳಿಸಿದರೆ ಹರ್ಯಾಣ ಪರ ಮೋನು ಗೋಯತ್ 12 ಅಂಕಗಳನ್ನು ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News