ಅಭಿಯೋಜಕರ ಹುದ್ದೆಗೆ ನೇಮಕಗೊಳಿಸಲು ವಕೀಲರ ಪರಿಷತ್ತು ಸರಕಾರಕ್ಕೆ ಆಗ್ರಹ

Update: 2018-12-09 18:20 GMT

ಬೆಂಗಳೂರು, ಡಿ.9: ರಾಜ್ಯದಲ್ಲಿ ಖಾಲಿ ಇರುವ ಅಭಿಯೋಜಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ವಕೀಲರನ್ನು ನೇಮಕ ಮಾಡಬೇಕೆಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸರಕಾರವನ್ನು ಒತ್ತಾಯಿಸಿದೆ.

ರಾಜ್ಯದಲ್ಲಿ ಒಟ್ಟು 774 ಅಭಿಯೋಜಕರ ಹುದ್ದೆಗಳಿದ್ದು, ಅವುಗಳಲ್ಲಿ 480 ಹುದ್ದೆಗಳಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದು, 294 ಹುದ್ದೆಗಳು ರಾಜ್ಯಾದ್ಯಂತ ಖಾಲಿಯಿರುತ್ತದೆ. ಈ ಹಿಂದೆ 2009ರಲ್ಲಿ ಅಭಿಯೋಜಕ ಇಲಾಖೆಯಲ್ಲಿ ಇದೇ ತರಹದ ಸನ್ನಿವೇಶ ಬಂದಾಗ ಆಗಿನ ಸರಕಾರವು ಕೋರ್ಟ್ ಕಲಾಪಗಳು, ಕೆಲಸಗಳು ನಡೆಯಲು ಮತ್ತು ಕಕ್ಷಿದಾರರಿಗೆ ಯಾವುದೇ ತೊಂದರೆಯಾಗದಂತೆ ವಕೀಲರನ್ನು ಅರ್ಹತಾ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅವಶ್ಯವಾದ ಸುತ್ತೋಲೆ ಹೊರಡಿಸಿ ಅರ್ಹ ವಕೀಲರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕೆಂದು ಪರಿಷತ್ ಅಧ್ಯಕ್ಷ ಕೆ.ಬಿ.ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News