ಅಡಿಲೇಡ್ ಟೆಸ್ಟ್: ಗೆಲುವಿನ ಹೊಸ್ತಿಲಲ್ಲಿ ಭಾರತ

Update: 2018-12-10 03:45 GMT

ಅಡಿಲೇಡ್, ಡಿ.10: ಆಸ್ಟ್ರೇಲಿಯಾದಲ್ಲಿ ಮೊಟ್ಟಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲುವಿನ ಕನಸು ಕಾಣುತ್ತಿರುವ ಭಾರತೀಯ ಕ್ರಿಕೆಟ್ ತಂಡ, ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಹಾದಿಯಲ್ಲಿ ಮುನ್ನಡೆದಿದೆ. ಅತಿಥೇಯರ ಏಳು ವಿಕೆಟ್ ಗಳನ್ನು ಕಬಳಿಸಿದ ಭಾರತದ ಗೆಲುವಿಗೆ ಇನ್ನು 3 ವಿಕೆಟ್ ಗಳ ಆಗತ್ಯವಿದೆ. 

ಟೆಸ್ಟ್‌ನ ಕೊನೆಯ ದಿನ ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಟಿಮ್ ಪೈನ್(40) ಹಾಗೂ ಪ್ಯಾಟ್ ಕಮಿನ್ಸ್ (5) ಮುರಿಯದ ಏಳನೇ ವಿಕೆಟ್‌ಗೆ 30 ರನ್ ಸೇರಿಸಿದರು. ಬಳಿಕದ ಆಟದಲ್ಲಿ ಟಿಮ್ ಪೈನ್(41)ರನ್ನು ಜಸ್‌ಪ್ರೀತ್ ಬೂಮ್ರಾ ಪೆವಿಲಿಯನ್ ಗೆ ಅಟ್ಟಿದರು. ಆಸೀಸ್ 226 ರನ್ ಗಳಿಗೆ 7 ಕಳೆದಕೊಂಡು ಆಡುತ್ತಿದೆ.

ಐದನೇ ದಿನದ ಆರಂಭದಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 115ಕ್ಕೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಇನಿಂಗ್ಸ್ ಆಧರಿಸಿದ ಶಾನ್ ಮಾರ್ಶ್ (60), ತಂಡದ ಸ್ಕೋರ್ 156 ಆಗಿದ್ದಾಗ ಜಸ್‌ಪ್ರೀತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರು.

ಭಾರತದ ಪರ ಅಶ್ವಿನ್, ಬೂಮ್ರಾ ಹಾಗೂ ಶಮಿ ತಲಾ ಎರಡು ವಿಕೆಟ್ ಕಬಳಿಸಿದರೆ, ಇಶಾಂತ್ ಶರ್ಮಾ  ಒಂದು ವಿಕೆಟ್ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News