ವಿಶ್ವ ದಾಖಲೆ ಸರಿಗಟ್ಟಿದ ರಿಷಭ್ ಪಂತ್

Update: 2018-12-10 05:01 GMT

  ಅಡಿಲೇಡ್, ಡಿ.10: ಭಾರತದ ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಆಸ್ಟೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ವಿಕೆಟ್ ಹಿಂದುಗಡೆ ಮೊದಲ ಇನಿಂಗ್ಸ್‌ನಲ್ಲಿ ಆರು ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಐದು ಕ್ಯಾಚ್‌ಗಳ ಸಹಿತ ಪಂದ್ಯವೊಂದರಲ್ಲಿ ಒಟ್ಟು 11 ಕ್ಯಾಚ್ ಪಡೆದ ಪಂತ್ ಈ ಸಾಧನೆ ಮಾಡಿದ ಭಾರತದ ಮೊದಲ ವಿಕೆಟ್‌ಕೀಪರ್ ಎನಿಸಿಕೊಂಡರು. ವಿಶ್ವದ ಇಬ್ಬರು ವಿಕೆಟ್‌ಕೀಪರ್‌ಗಳ ವಿಶ್ವ ದಾಖಲೆಯ ಸಾಧನೆಯನ್ನು ಪಂತ್ ಸರಿಗಟ್ಟಿದರು.

 ಭಾರತದ ವೃದ್ಧಿಮಾನ್ ಸಹಾ(2018,ಕೇಪ್‌ಟೌನ್, ದ.ಆಫ್ರಿಕ ವಿರುದ್ಧ್ದ) ಹಾಗೂ ಎಂಎಸ್ ಧೋನಿ(2014, ಎಂಸಿಜಿ, ಆಸ್ಟ್ರೇಲಿಯ ವಿರುದ್ಧ)ಪಂದ್ಯವೊಂದರಲ್ಲಿ ಕ್ರಮವಾಗಿ 10 ಹಾಗೂ 9 ಕ್ಯಾಚ್ ಪಡೆದಿದ್ದಾರೆ. ಪಂತ್ ಈ ಇಬ್ಬರ ಸಾಧನೆಯನ್ನು ಮೀರಿಸಿದ್ದಾರೆ.

  ಜಾಕ್ ರಸ್ಸಲ್ ಹಾಗೂ ಎಬಿ ಡಿವಿಲಿಯರ್ಸ್ ಪಂದ್ಯವೊಂದರಲ್ಲಿ ಒಟ್ಟು 11 ಕ್ಯಾಚ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಪಂತ್ ಕೂಡ 11 ಕ್ಯಾಚ್ ಪಡೆದು ಈ ಇಬ್ಬರ ಸಾಲಿಗೆ ಸೇರಿದ್ದಾರೆ.

ರಸ್ಸಲ್ 1995ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಈ ಸಾಧನೆ ಮಾಡಿದ್ದರೆ, ಡಿವಿಲಿಯರ್ಸ್ 2013ರಲ್ಲಿ ಪಾಕ್ ವಿರುದ್ದ ಜೋಹಾನ್ಸ್‌ಬರ್ಗ್‌ನಲ್ಲಿ ಒಟ್ಟು 11 ಕ್ಯಾಚ್‌ಗಳನ್ನು ಪಡೆದ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News