ಭಾರತ ತಂಡಕ್ಕೆ ಶುಭಾಶಯಗಳ ಸುರಿಮಳೆ

Update: 2018-12-11 07:31 GMT

ಹೊಸದಿಲ್ಲಿ, ಡಿ.10: ಅಡಿಲೇಡ್‌ನಲ್ಲಿ ಪಂದ್ಯ ಮುಗಿಯುತ್ತಲೇ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ.

ಅಡಿಲೇಡ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸಾಧಿಸಿದ 31 ರನ್‌ಗಳ ಜಯ 2003ರಲ್ಲಿ ಭಾರತ ಗಳಿಸಿದ್ದ ಪ್ರಸಿದ್ಧ ವಿಜಯವನ್ನು ನೆನಪಿಸಿದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸರಣಿಯನ್ನು ಟೀಮ್ ಇಂಡಿಯಾ ಯಾವುದೇ ಒತ್ತಡವನ್ನು ಮೈಮೇಲೆಳೆದುಕೊಳ್ಳದೆ ಉತ್ತಮವಾಗಿ ಆರಂಭಿಸಿದೆ. ಎರಡೂ ಇನಿಂಗ್ಸ್‌ಗಳಲ್ಲಿ ಪೂಜಾರ ಅತ್ಯುತ್ತಮ ಬ್ಯಾಟಿಂಗ್ ವೈಭವ ತೋರಿದ್ದು, ದ್ವಿತೀಯ ಇನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಗಳಿಸಿದ 88 ರನ್ ಹಾಗೂ ನಮ್ಮ ನಾಲ್ವರು ಬೌಲರ್‌ಗಳು ನೀಡಿದ ಕಾಣಿಕೆ ಅತ್ಯುತ್ತಮ. ಇದು 2003ರಲ್ಲಿ ದ್ರಾವಿಡ್ ಹಾಗೂ ಅಗರ್ಕರ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಗೆದ್ದ ಟೆಸ್ಟ್ ಪಂದ್ಯವನ್ನು ನೆನಪಿಸಿದೆ ಎಂದಿದ್ದಾರೆ.

ಆಸ್ಟ್ರೇಲಿಯ ಮಾಜಿ, ಹಾಲಿ ಕ್ರಿಕೆಟಿಗರೂ ಟ್ವೀಟ್‌ನಲ್ಲಿ ಹಿಂದೆ ಬಿದ್ದಿಲ್ಲ. ಮೈಕೆಲ್ ಕ್ಲಾರ್ಕ್, ಮಿಚೆಲ್ ಜಾನ್ಸನ್ ಹಾಗೂ ಶೇನ್ ವಾರ್ನ್ ಆಸ್ಟ್ರೇಲಿಯ ತಂಡದ ಹೋರಾಟವನ್ನೂ ಹೊಗಳುತ್ತಲೇ ಟೀಮ್ ಇಂಡಿಯಾ ಜಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

2003ರ ಜಯ ನೆನಪಿಸಿದೆ: ಸಚಿನ್

ಅಡಿಲೇಡ್ ಟೆಸ್ಟ್‌ನ ಪಂದ್ಯ ಪುರುಷೋತ್ತಮ ಚೇತೇಶ್ವರ ಪೂಜಾರ ಟ್ವೀಟ್ ಮಾಡಿ, ಅಡಿಲೇಡ್ ಓವಲ್‌ನಲ್ಲಿ ನಡೆದ ಪಂದ್ಯ ಮಹತ್ವದ್ದಾಗಿದೆ. ಒಂದು ತಂಡವಾಗಿ ಆಡಿ ಭಾರೀ ಪೈಪೋಟಿಯನ್ನು ನೀಡಿದ್ದಕ್ಕೆ ಸಂತಸವಾಗಿದೆ.

ಚೇತೇಶ್ವರ ಪೂಜಾರ

ಟೆಸ್ಟ್ ಅತ್ಯುತ್ತಮ ಕ್ರಿಕೆಟ್. ಪಂದ್ಯದ ಕೊನೆಯಲ್ಲಿ ಆಸ್ಟ್ರೇಲಿಯ ಉತ್ತಮ ಪೈಪೋಟಿ ನೀಡಿದರೂ ಭಾರತೀಯರು ಚೆನ್ನಾಗಿ ಆಡಿದರು. ಪೂಜಾರಗೆ ಇದೊಂದು ಮಹೋನ್ನತ ಪಂದ್ಯ. ಇದೊಂದು ಉತ್ತಮ ಸರಣಿಯಾಗಲಿ’

ವೀರೇಂದ್ರ ಸೆಹ್ವಾಗ್

ಭಾರತಕ್ಕೆ ಇದೊಂದು ಬಹಳ ದಿನಗಳ ವರೆಗೆ ಮೆಲುಕು ಹಾಕುವ ಪಂದ್ಯ. ಬೌಲರ್‌ಗಳ ಸಾಹಸದಿಂದ ಜಯ ಸಾಧ್ಯವಾಗಿದೆ.

ವಿವಿಎಸ್ ಲಕ್ಷ್ಮಣ್

ಚೇತೇಶ್ವರ ಪೂಜಾರ ಜಯದ ಮೂಲ ಪುರುಷ ಹಾಗೂ ಎಲ್ಲ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದರು

ಹರ್ಭಜನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News