​ಅತ್ಯಾಚಾರ ಆರೋಪಿ ಪರಾರಿ: ಮೂವರು ಪೊಲೀಸರ ಅಮಾನತು

Update: 2018-12-11 14:35 GMT

ಪಣಜಿ,ಡಿ.11: ಸಾಮೂಹಿಕ ಅತ್ಯಾಚಾರ ಪ್ರಕರಣದಲಿ ಗೋವಾ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಆರೋಪಿಯೋರ್ವ ಸೋಮವಾರ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು,ಈ ಸಂಬಂಧ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಮೇ 24ರಂದು ದಕ್ಷಿಣ ಗೋವಾ ಜಿಲ್ಲೆಯ ಬೀಚ್ವೊಂದರಲ್ಲಿ 20ರ ಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ,ಬಳಿಕ ಆಕೆಯನ್ನು ದೋಚಿದ್ದ ಆರೋಪದಲ್ಲಿ ಮಧ್ಯಪ್ರದೇಶದ ಇಂದೋರ ನಿವಾಸಿ ಈಶ್ವರ ಮಕ್ವಾನಾ(24) ಮತ್ತು ರಾಮ ಭರಿಯಾ ಹಾಗೂ ಸಂಜೀವ ಪಾಲ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದರು. ಮೂವರನ್ನೂ ಉತ್ತರ ಗೋವಾ ಜಿಲ್ಲೆಯ ಕೋಲ್ವಾಲೆ ಜೈಲಿನಲ್ಲಿರಿಸಲಾಗಿತ್ತು. ಸೋಮವಾರ ಮಕ್ವಾನಾನನ್ನು ಚಿಕಿತ್ಸೆಗಾಗಿ ಇಲ್ಲಿಯ ಎದೆರೋಗಗಳು ಮತ್ತು ಕ್ಷಯರೋಗ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಬೆಂಗಾವಲು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪಕ್ಕಾಗಿ ಹೆಡ್ ಕಾನ್ಸ್ಟೇಬಲ್ ರಾಜೇಂದ್ರ ತಾಮ್ಸೆ,ಕಾನ್ಸ್ಟೇಬಲ್ಗಳಾದ ಲಾಡು ರಾವುಲ್ ಮತ್ತು ಸಂಜಯ ಖಂಡೇಪಾರ್ಕರ್ ಎನ್ನುವವರನ್ನು ಅಮಾನತುಗೊಳಿಸಲಾಗಿದೆ.
ಇಂದೋರನಲ್ಲಿ ದಂಪತಿ ಹತ್ಯೆ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಮಕ್ವಾನಾ ವಿರುದ್ಧ ಈ ಹಿಂದೆ ಮಧ್ಯಪ್ರದೇಶದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಈತನನ್ನು ಪತ್ತೆ ಹಚ್ಚಿದಲ್ಲಿ 20,000 ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News