ಕುವೈತ್ ಕೇರಳ ಮುಸ್ಲಿಂ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Update: 2018-12-12 17:50 GMT

ಕುವೈತ್, ಡಿ.12: ಕುವೈಟ್ ಕೇರಳ ಮುಸ್ಲಿಂ ಸಂಘ (ಕೆಕೆಎಂಎ)ದ ಕರ್ನಾಟಕ ವಿಭಾಗದ ವಾರ್ಷಿಕ ಸಭೆಯು ಡಿ. 7ರಂದು ಸಲ್ಮಿಯಾ ಇಂಡಿಯನ್ ಮೋಡೆಲ್ ಶಾಲೆಯ ಆಡಿಟೋರಿಯಂನಲ್ಲಿ ಕೆಕೆಎಂಎಯ ಚುನಾವಣಾ ಅಧಿಕಾರಿ ಫಿರೋಝ್ ಸಿ. ನೇತೃತ್ವದಲ್ಲಿ ಈ ಸಭೆ ನಡೆಯಿತು.

ಮೌಲ್ವಿ ಮುನಿಬ್ ಮುಷ್ತಾಕ್ ಅವರು ಕುರ್ ಆನ್ ಸಾಲುಗಳನ್ನು ಪಠಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.

ಕರ್ನಾಟಕ ವಿಭಾಗದ ಹಿರಿಯ ನಾಯಕ ಮತ್ತು ಕೇಂದ್ರ ವಲಯ ಖಜಾಂಚಿ ಅಬ್ದುಲ್ ಹಮೀದ್ ಮುಲ್ಕಿ ಅತಿಥಿಗಳನ್ನು ಸ್ವಾಗತಿಸಿದರು. ಉದ್ಘಾಟನಾ ಭಾಷಣ ಮಾಡಿದ ಕೆಕೆಎಂಎ ಉಪಾಧ್ಯಕ್ಷ ಹಂಝ ಮುಸ್ತಫಾ ಪಯ್ಯನೂರು ಸಂಘದ ಕರ್ನಾಟಕ ವಿಭಾಗದವು ಸಮುದಾಯ ಸೇವೆ ಮತ್ತು ಸಾಮಾಜ ಕಲ್ಯಾಣ ಚಟುವಟಿಕೆಗಳಲ್ಲಿ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಕೆಕೆಎಂಎ ಪ್ರೋತ್ಸಾಹಕ ಸಾಗೀರ್ ತ್ರಿಕರಿಪುರ ಮಾತನಾಡಿ ಕಳೆದ ಹದಿನೇಳು ವರ್ಷಗಳಲ್ಲಿ ಸಂಘವು ಯಶಸ್ವಿಯಾಗಿ ಮುಗಿಸಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ಸುಮಾರು 450 ಅತಿಥಿಗಳು ಭಾಗವಹಿಸಿದ್ದರು. ಸಂಘದ ಕರ್ನಾಟಕ ವಿಭಾಗದ ಉಪಾಧ್ಯಕ್ಷ ನಝೀರ್ ಬೋಳಾರ್ ಸಂಘದ ಎರಡು ವರ್ಷಗಳ ಚಟುವಟಿಕೆಗಳನ್ನು ವಿವರಿಸುವ ವಾರ್ಷಿಕ ವರದಿಯನ್ನು ಓದಿದರು. ಸಂಘದ ವಿತ್ತ ವರದಿಯನ್ನು ವಿಭಾಗದ ಹಿರಿಯ ನಾಯಕ ಮತ್ತು ಕೇಂದ್ರ ಸಮಿತಿಯ ಸಿಎಫ್‌ಸಿ ಸಯ್ಯದ್ ರಫೀಕ್ ಪ್ರಸ್ತುತಪಡಿಸಿದರು. ನಿರ್ಗಮನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ತನ್ನ ಎಲ್ಲ ಚಟುವಟಿಕೆಗಳಲ್ಲೂ ಜೊತೆಯಾಗಿದ್ದ ತನ್ನ ತಂಡವನ್ನು ಶ್ಲಾಘಿಸಿದರು ಮತ್ತು ಧನ್ಯವಾದ ಸೂಚಿಸಿದರು.

2019-2020ರ ಅವಧಿಗೆ ನೇಮಕಗೊಂಡ ಪದಾಧಿಕಾರಿಗಳ ವಿವರ:

ಅಧ್ಯಕ್ಷರಾಗಿ ಎಸ್.ಎಂ. ಅಝರ್ , ಕಾರ್ಯಕಾರಿ ಅಧ್ಯಕ್ಷರಾಗಿ ಯೂಸುಫ್ ರಶೀದ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಯೂಸುಫ್ ಮುನಿಯಮ್, ಖಜಾಂಚಿಯಾಗಿ ಮುಹಮ್ಮದ್ ಅಮಿನ್ ಶೇಕ್, ಸಂಘಟನಾ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಅಬ್ದುಲ್ ಕರೀಂ, ಆಡಳಿತ ಕಾರ್ಯದರ್ಶಿಯಾಗಿ ರಿಯಾಝ್ ಕಾವ, ಐಟಿ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಉಚ್ಚಿಲ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಕಾನ ಮತ್ತು ಪದಾಧಿಕಾರಿಗಳಾಗಿ ಶರೀಫ್ ಅಹ್ಮದ್ ಮುಲ್ಕಿ, ಅಬ್ದುಲ್ ಲತೀಫ್ ಶೆಡಿಯ, ಶಕೀಲ್ ಅಹ್ಮದ್ ಮಹಿನ್, ಅಬೂಬಕ್ಕರ್ ಜಿ.ಶೇಕ್, ಫಯಾಝ್ ಶೇಕ್, ರಶೀದ್ ಇಸ್ಮಾಯಿಲ್ ಬೋಳಾರ್ ಅವರನ್ನು ಆಯ್ಕೆ ಮಾಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News