ರಾಷ್ಟ್ರೀಯ ನಾಗರಿಕ ನೋಂದಣಿ ಪರಿಷ್ಕಾರ ಪ್ರಕ್ರಿಯೆ ದೋಷಪೂರ್ಣ: ಮೇಘಾಲಯ ಹೈಕೋರ್ಟ್ ನ್ಯಾಯಾಧೀಶ

Update: 2018-12-12 18:01 GMT

ಹೊಸದಿಲ್ಲಿ, ಡಿ. 12: ಅಸ್ಸಾಂನಲ್ಲಿ ನಡೆದಿರುವ ರಾಷ್ಟ್ರೀಯ ನಾಗರಿಕ ನೋಂದಣಿ ಪರಿಷ್ಕಾರ ಪ್ರಕ್ರಿಯೆಯನ್ನು ದೋಷಪೂರ್ಣ ಎಂದು ಕರೆದಿರುವ ಮೇಘಾಲಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸುದೀಪ್ ರಂಜನ್ ಸೇನ್, ಈ ಪಟ್ಟಿಯಲ್ಲಿ ಹಲವು ವಿದೇಶಿಯರು ಭಾರತೀಯರಾಗಿರುವುದು ಹಾಗೂ ನಿಜವಾದ ಭಾರತೀಯರನ್ನು ಕೈ ಬಿಟ್ಟಿರುವುದು ವಿಷಾದನೀಯ ಎಂದಿದ್ದಾರೆ.

ಭಾರತವನ್ನು ಇನ್ನೊಂದು ಇಸ್ಲಾಮಿಕ್ ದೇಶ ಮಾಡಲು ಪ್ರಯತ್ನಿಸಬೇಡಿ. ಹಾಗೆ ಆದಲ್ಲಿ ದೇಶ ಹಾಗೂ ಜಗತ್ತಿನ ವಿನಾಶವಾಗಲಿದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ಅವರ ನೇತೃತ್ವದ ಸರಕಾರಕ್ಕೆ ಮಾತ್ರ ಅದರ ಪ್ರಾಮುಖ್ಯತೆ ತಿಳಿದಿದೆ. ಅವರು ಉತ್ತಮವಾದುದನ್ನೇ ಮಾಡಲಿದ್ದಾರೆ. ಎಲ್ಲ ವಿಷಯಗಳಲ್ಲೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರೀಯ ಹಿತಾಸಕ್ತಿಗೆ ಬೆಂಬಲ ನೀಡಲಿದ್ದಾರೆ ಎಂದು ಅವರು ಹೇಳಿದರು.

ಭಾರತಕ್ಕೆ ಈಗಾಗಲೇ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಕ್ರಿಶ್ಚಿಯನ್, ಪಾರ್ಸಿ, ಖಾಸಿಸ್, ಜೈಟಿಯಾಸ್, ಗಾರೋಸ್ ಹಾಗೂ ಭಾರತ ಮೂಲದ, ವಿದೇಶದಲ್ಲಿ ವಾಸಿಸುತ್ತಿರುವ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದಿಂದ ಇನ್ನಷ್ಟೇ ಬರಬೇಕಾಗಿರುವರ ವ್ಯಕ್ತಿಗಳ ಸುರಕ್ಷೆಗೆ ಕಾನೂನು ತರಲು ಅತ್ಯಗತ್ಯದ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಪರಿಶೀಲಿಸಲು ತೀರ್ಪಿನ ಪ್ರತಿಯೊಂದನ್ನು ತೆಗೆದುಕೊಂಡು ಪ್ರಧಾನಿ, ಮುಖ್ಯಮಂತ್ರಿ, ಗೃಹ ಸಚಿವರು, ಕಾನೂನು ಸಚಿವರಿಗೆ ನೀಡಿ ಎಂದು ಅವರು ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಎ. ಪೌಲ್ ಅವರಿಗೆ ಸೂಚಿಸಿದರು.

ವಲಸಿಗರ ಪ್ರಮಾಣ ಪತ್ರ ನೀಡುವುದಕ್ಕೆ ಸಂಬಂಧಿಸಿ ಅಮೋನ್ ರಾಣಾ ಸಲ್ಲಿಸಿದ ಮನವಿಯನ್ನು ಸೇನ್ ಮಂಗಳವಾರ ವಿಚಾರಣೆ ನಡೆಸಿ ವಿಲೇವಾರಿ ಮಾಡಿದರು. ವಲಸೆ ಪ್ರಮಾಣಪತ್ರ ವಿಷಯದ ಕುರಿತು ವಿಚಾರಣೆ ನಡೆಸಿದ ಸಂದರ್ಭ ಅವರು ನಿಜವಾದ ಭಾರತ ಹಾಗೂ ಅದರ ವಿಭಜನೆಯನ್ನು ತನಗೆ ಬಿಂಬಿಸಲು ಸಾಧ್ಯವಾಗದೇ ಇದ್ದರೆ, ಕರ್ತವ್ಯದಲ್ಲಿ ವಿಫಲವಾದಂತೆ ಎಂದರು. ಶಿಲ್ಲಾಂಗ್‌ನಲ್ಲಿ ಹುಟ್ಟಿ ಬೆಳೆದ 61 ವರ್ಷದ ಸೇನ್ 2014ರಲ್ಲಿ ಜನವರಿಯಲ್ಲಿ ಮೇಘಾಲಯ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News