ನೂರುಲ್ ಹುದಾ ದುಬೈ ಸಮಿತಿ: ವಾರ್ಷಿಕ ಸಭೆ

Update: 2018-12-12 18:06 GMT

ದುಬೈ, ಡಿ. 12: ನೂರುಲ್ ಹುದಾ ದುಬೈ ಸಮಿತಿಯ ದ್ವಿತೀಯ ವಾರ್ಷಿಕ ಸಭೆ, ಸಮಿತಿ ನವೀಕರಣವು ಇತ್ತೀಚೆಗೆ ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಅವರ ಅಧ್ಯಕ್ಷತೆಯಲ್ಲಿ ರೋಯಲ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ನೂರುಲ್ ಹುದಾ ಅಬುಧಾಬಿ ಸಮಿತಿಯ ಅಧ್ಯಕ್ಷ ಉದ್ಘಾಟಿಸಿದರು.

ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಉಸ್ತಾದರ ದುವಾದೊಂದಿಗೆ ಆರಂಭವಾದ ಸಭೆಯಲ್ಲಿ  ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಮಾತನಾಡಿ ಕಳೆದ ಒಂದು ವರ್ಷದಲ್ಲಿ ನಡೆದ ಕೆಲಸ ಕಾರ್ಯಗಳನ್ನು ನೆನಪಿಸಿ ಸಹಕರಿಸಿದ ಎಲ್ಲರನ್ನು ಅಭಿನಂದಿಸಿದರು. ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ವರದಿ ವಾಚಿಸಿದರು.

ಸಭೆಯ ಮುಖ್ಯ ಅತಿಥಿ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಇದರ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ಮಾತನಾಡಿ ಧಾರ್ಮಿಕ ಸೇವೆಗಳನ್ನು ಸಲ್ಲಿಸುವ ವ್ಯಕ್ತಿಗಳ ಉದ್ದೇಶ ಅದು ಪಾರತ್ರಿಕ ಲೋಕದ ಪ್ರತಿಫಲ ಆಗ್ರಹಿಸಿ ಆಗಿರಬೇಕು  ನಮ್ಮ ಗುಣ ನಡತೆ, ಉತ್ತಮ ಕೆಲಸ ಕಾರ್ಯಗಳನ್ನು ಜನರು ಗುರುತಿಸಿ ನಮ್ಮೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಾರೆ ಮತ್ತು ಸಂಬಂಧಗಳು ಹುಟ್ಟಿಕೊಳ್ಳುತ್ತವೆ ಇಂತಹ ಸಂಬಂಧಗಳಿಂದ ಸಿಗುವ ಮನಶ್ಶಾಂತಿ ಮತ್ತು ಸಂತೋಷಗಳು ಶ್ರೇಷ್ಟವಾದುದು ಎಂಬ ಉಪದೇಶಗಳನ್ನು ನೀಡಿದರು ಮತ್ತು ವಿದ್ಯಾ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಬೆನ್ನೆಲುಬಾಗಿ ಸಹಕರಿಸುವ ಸಮಿತಿಯ ಪದಾಧಿಕರಿಗಳನ್ನು ಪ್ರಶಂಸಿಸಿದರು.

ದುಬೈ ಸಮಿತಿಯ ಅಧ್ಯಕ್ಷ ಸುಲೈಮಾನ್ ಮೌಲವಿ ಕಲ್ಲೆಗ ಮಾತನಾಡಿದರು. ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಚುಣಾವಣಾ ಅಧಿಕಾರಿಯಾಗಿ ಸಮಿತಿ ನವೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದರು.

ನೂರುಲ್ ಹುದಾ ದುಬೈ ಸಮಿತಿಯ ನೂತನ ಪದಾಧಿಕಾರಿಗಳ ವಿವರ:

ಉಪದೇಶಕರು: ಶೆರೀಫ್ ಕಾವು, ಅಬ್ದುಲ್ ಲತೀಫ್ ಕೌಡಿಚ್ಚಾರ್, ನೂರ್ ಮುಹಮ್ಮದ್ ನೀರ್ಕಜೆ, ಬದ್ರುದ್ದೀನ್ ಹೆಂತಾರ್, ಅಶ್ರಫ್ ಶಾ ಮಾಂತೂರು, ಅಶ್ರಫ್ ಆರ್ತಿಗೆರೆ, ಮುಹಮ್ಮದ್ ರಫೀಕ್ ಆತೂರು, ಅಬ್ದುಲ್ ಖಾದರ್ ಹಾಜಿ ಸಂಪ್ಯ, ಆದಂ ಮುಕ್ರಂಪಾಡಿ, ಅಬ್ಬಾಸ್ ಕೇಕುಡೆ. ಗೌರವಾಧ್ಯಕ್ಷರಾಗಿ ಅಬ್ದುಲ್ ಸಲಾಮ್ ಬಪ್ಪಲಿಗೆ, ಅಧ್ಯಕ್ಷರಾಗಿ ಸುಲೈಮಾನ್ ಮೌಲವಿ ಕಲ್ಲೆಗ, ಕಾರ್ಯಾಧ್ಯಕ್ಷರಾಗಿ ಅನ್ವರ್ ಮಾಣಿಲ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸೋಂಪಾಡಿ, ಪ್ರಭಾರ ಕಾರ್ಯದರ್ಶಿಯಾಗಿ ಅಶ್ರಫ್ ಪರ್ಲಡ್ಕ, ಕೋಶಾಧಿಕಾರಿಯಾಗಿ ಯೂಸುಫ್ ಈಶ್ವರಮಂಗಿಳ, ಉಪಾಧ್ಯಕ್ಷರಾಗಿ ಮಹಮ್ಮದ್ ಪಳ್ಳತ್ತೂರು, ಉಸ್ಮಾನ್ ಮರೀಲ್, ಮೂಸ ಕುಂಞಿ ಕಾವು, ಶಂಸೀರ್ ಅಡ್ಡೂರು, ಹಂಝ ಹಾಜಿ ಕೆ.ಕೆ., ಜೊತೆ ಕಾರ್ಯದರ್ಶಿಗಳಾಗಿ ಲತೀಫ್ ಆರ್ತಿಗೆರೆ, ನಾಸಿರ್ ಬಪ್ಪಲಿಗೆ, ಶಾಹುಲ್ ಬಿ.ಸಿ ರೋಡ್. ಲೆಕ್ಕ  ಪರಿಶೋಧಕರಾಗಿ ರಿಫಾಯಿ ಗೂನಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ತಿಂಗಳಾಡಿ, ರಫೀಕ್ ಸಂಪ್ಯ, ಸಂಚಾಲಕರಾಗಿ ಶೆರೀಫ್ ಕಟ್ಟತ್ತಾರ್, ರಫೀಕ್ ಕೊಡಗು, ಉಸ್ಮಾನ್ ಕೆಮ್ಮಿಂಜೆ, ಶೆರೀಫ್ ಕೊಡಿನೀರು, ಹಾರಿಸ್ ಪಾಪೆತಡ್ಕ, ಅಬ್ದುಲ್ ರಹ್ಮಾನ್ ಪೆರಾಜೆ,ಶಂಸುದ್ದೀನ್ ಇಂದುಮೂಲೆ,ಹೈದರ್ ಕೆ.ಎಚ್,  ಅಶ್ರಫ್ ಎಂ.ಎ, ಸಿದ್ದೀಕ್ ಅಡ್ಡೂರು, ಜಾಬಿರ್ ಬಪ್ಪಲಿಗೆ, ಅಬ್ದುಲ್ಲಾ ಕೊಚ್ಚಿ, ಇಫ್ತಿಕಾರ್ ಕಣ್ಣೂರು, ಶಬೀರ್ ಪಡುಬಿದ್ರೆ, ಸಿದ್ದೀಕ್ ಡಿ.ಐ.ಪಿ ದೇಲಂಪಾಡಿ, ಧಾರ್ಮಿಕ ಸಲಹೆಗಾರರಾಗಿ ಹಮೀದ್ ಮುಸ್ಲಿಯಾರ್ ಅನ್ಸಾರ್ ಹುದವಿ, ಅಬ್ದುಲ್ ಖಾದರ್ ಅಸ್ಸಅದಿ, ಫೈಝಲ್ ರಹ್ಮಾನಿ ಬಾಯಾರ್, ಇಕ್ಬಾಲ್ ಅರ್ಶದಿ ಮಾಧ್ಯಮ ಸಂಯೋಜಕರಾಗಿ ಆಸಿಫ್ ಮರೀಲ್, ಜಾಬಿರ್ ಬೆಟ್ಟಂಪಾಡಿ, ತಾಜುದ್ದೀನ್ ಕೊಚ್ಚಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಿದ್ದೀಕ್ ಪಳ್ಳಂಗೊಡು, ನವಾಝ್ ಬಿ.ಸಿ ರೋಡ್, ಜಾಬಿರ್ ಬಪ್ಪಲಿಗೆ, ಆಸಿಫ್ ಕಾವು, ಸಿದ್ದೀಕ್ ಪಾನೆಮಂಗಳೂರು, ಮನೀರ್ ಸಾಲ್ಮರ, ಲತೀಫ್ ದೇಲಂಪಾಡಿ, ಸಿನಾನ್ ಪೆರ್ಲಂಪಾಡಿ, ಮೊಯಿದೀನ್ ದೇಲಂಪಾಡಿ, , ಉಮ್ಮರ್ ಮಾಣಿ, ಮೂಸ ಅಲ್ ಕರೀಂ ಕಟ್ಟತ್ತಾರ್, ಅಬ್ದುಲ್ ಬಾರಿ ಕೊಳ್ತಿಗೆ, ಅಶ್ರಫ್ ಸಿ.ಎ ದೇಲಂಪಾಡಿ, ಅಬೂಬಕ್ಕರ್ ಮುಂಡೊಳೆ, ಅಬೂಬಕ್ಕರ್ ಬಜಾಲ್, ಶಾಫಿ ಅಜ್ಜಾವರ, ಅಶ್ರಫ್ ಕಾರ್ಜಲ್, ಅನ್ಸಾಪ್ ಪಾತೂರು, ಇಲ್ಯಾಸ್ ಕಡಬ, ಮಜೀದ್ ಮುಕ್ರಂಪಾಡಿ, ರಫೀಕ್ ಮುಕ್ವೆ, ರಾಝಿಕ್ ಪೊಲಾಜೆ, ಖಾದರ್ ಸಂಪ್ಯ, ಯಾಸಿರ್ ಕರಿಮಜಲ್, ಇಶಾಕ್ ಸಾಲೆತ್ತೂರು, ಸಿರಾಜ್ ಬಂಟ್ವಾಳ,  ರಫೀಕ್ ಎದಿರ್ತೋಡು,  ಬಾತಿಷ್ ಪರ್ಲಡ್ಕ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಪ್ರಭಾರ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News