ದುಬೈ ಆರೋಗ್ಯ ಪ್ರಾಧಿಕಾರ-ಹೆಲ್ತ್ ಮ್ಯಾಗಝೀನ್ ಸಹಯೋಗದ ವಾರ್ಷಿಕ ಆರೋಗ್ಯ ಪ್ರಶಸ್ತಿಗೆ ಕ್ಷಣಗಣನೆ

Update: 2018-12-12 18:08 GMT

ದುಬೈ, ಡಿ.12 : ದುಬೈ ಆರೋಗ್ಯ ಪ್ರಾಧಿಕಾರ (ಡಿಎಚ್‌ಎ) ಮತ್ತು ಹೆಲ್ತ್ ಮ್ಯಾಗಝೀನ್ ಜಂಟಿಯಾಗಿ ಆಯೋಜಿಸುವ ವಾರ್ಷಿಕ ಆರೋಗ್ಯ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 18, 2019ರಂದು ದುಬೈಯ ಗ್ರಾಂಡ್ ಹಯಾತ್‌ನ ಬನಿಯಸ್ ಬಾಲ್‌ರೂಮ್‌ನಲ್ಲಿ ನಡೆಯಲಿದೆ ಎಂದು ಡಿಎಚ್‌ಎಯ ಪ್ರಧಾನ ನಿರ್ದೇಶಕ ಎಚ್.ಇ ಹುಮೈದ್ ಅಲ್ ಕುತಮಿ ಘೋಷಿಸಿದ್ದಾರೆ.

ಈ ಪ್ರಶಸ್ತಿಯನ್ನು ಆರೋಗ್ಯ ಸೇವೆ ಕ್ಷೇತ್ರದಲ್ಲಿ ನವೀನ ಆವಿಷ್ಕಾರ ಮಾಡಿರುವವರು, ಅಭೂತಪೂರ್ವ ನಾಯಕರು ಮತ್ತು ವೃತ್ತಿಪರರನ್ನು ಗೌರವಿಸುವ ಉದ್ದೇಶದಿಂದ ನೀಡಲಾಗುತ್ತದೆ.

ಇದು ವಾರ್ಷಿಕ ಆರೋಗ್ಯ ಪ್ರಶಸ್ತಿಯ ಮೂರನೇ ಆವೃತಿಯಾಗಿದ್ದು ಈ ಪ್ರದೇಶದಲ್ಲಿ ಆರೋಗ್ಯ ಕ್ಷೇತ್ರದ ಅತ್ಯಂತ ದೊಡ್ಡ ಮತ್ತು ಸಮಗ್ರ ವಾರ್ಷಿಕ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿದೆ. ಈ ಸಮಾರಂಭವು ಯುಎಇಯ ಆರೋಗ್ಯ ಕ್ಷೇತ್ರದ ಗಣ್ಯಾತಿಗಣ್ಯರನ್ನು ಒಂದೇ ವೇದಿಕೆಗೆ ತರಲಿದೆ.

ಅರಬ್, ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನೆಮಾ ನಟ-ನಟಿಯರು, ದಿಗ್ಗಜರು ಈ ಕಾರ್ಯಕ್ರಮಕ್ಕೆ ಹೊಳಪು ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಎರಡು ಆವೃತಿಗಳು ಅಭೂತಪೂರ್ವ ಯಶಸ್ಸು ಗಳಿಸಿರುವುದರಿಂದ ಈ ಬಾರಿ ಸಮಾರಂಭವನ್ನು ಇನ್ನಷ್ಟು ವೈಭವಪೂರ್ಣವಾಗಿ ನಡೆಸಲು ಡಿಎಚ್‌ಎ ನಿರ್ಧರಿಸಿದೆ ಎಂದು ಹುಮೈದ್ ಅಲ್ ಕುತಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News