ಮಹಾರಾಷ್ಟ್ರ ಸಿಎಂ ಫಡ್ನವೀಸ್ ಗೆ ಸುಪ್ರೀಂಕೋರ್ಟ್ ನೋಟಿಸ್

Update: 2018-12-13 07:52 GMT

ಹೊಸದಿಲ್ಲಿ, ಡಿ.13: 2014ರಲ್ಲಿ ಚುನಾವಣಾ ಅಫಿದಾವಿತ್ ನಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎರಡು ಕ್ರಿಮಿನಲ್ ಕೇಸ್‌ಗಳನ್ನು ಘೋಷಿಸದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಸುಪ್ರೀಂಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.

ಫಡ್ನವೀಸ್ ಸಲ್ಲಿಸಿರುವ ತನ್ನ ಅಫಿಡವಿಟ್‌ನಲ್ಲಿ ತನ್ನ ವಿರುದ್ಧ ಬಾಕಿ ಇರುವ ಎರಡು ಕ್ರಿಮಿನಲ್ ಕೇಸ್‌ಗಳ ವಿವರ ನೀಡಿಲ್ಲ. ಈ ಮೂಲಕ ಅವರು 1951ರ ಪೀಪಲ್ಸ್ ಆ್ಯಕ್ಟ್‌ನ ಪ್ರತಿನಿಧಿತ್ವವನ್ನು ಉಲ್ಲಂಘಿಸಿದ್ದಾರೆ. ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆಯೂ  ಅರ್ಜಿದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಸತೀಶ್ ಉಕೆ ನ್ಯಾಯಾಲಯಕ್ಕೆ ವಿನಂತಿಸಿದ್ದರು. ಬಾಂಬೆ ಹೈಕೋರ್ಟ್ ಈ ಮೊದಲು ಸತೀಶ್ ಅವರು ಫಡ್ನವೀಸ್ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ಜಸ್ಟಿಸ್‌ಗಳಾದ ಎಸ್‌ಕೆ ಕೌಲ್ ಹಾಗೂ ಕೆಎಂ ಜೋಸೆಫ್ ಅವರಿದ್ದ ನ್ಯಾಯಪೀಠ, ಬಾಂಬೆ ಹೈಕೋರ್ಟ್ ಆದೇಶ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿ ಬಗ್ಗೆ ಉತ್ತರಿಸುವಂತೆ ಮುಖ್ಯಮಂತ್ರಿ ಫಡ್ನವೀಸ್ ಗೆ ನೋಟಿಸ್ ನೀಡಿದೆ.

ಫಡ್ನವೀಸ್ ವಿರುದ್ಧ ಒಟ್ಟು 22 ಕ್ರಿಮಿನಲ್ ಕೇಸ್‌ಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News