ಅನಧಿಕೃತವಾಗಿ ರಸ್ತೆ ಅಗೆದರೆ 25 ಲಕ್ಷದವರೆಗೆ ದಂಡ: ಬಿಬಿಎಂಪಿಗೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಸೂಚನೆ

Update: 2018-12-13 16:47 GMT

ಬೆಂಗಳೂರು, ಡಿ.13: ಸಾರ್ವಜನಿಕರು ಹಾಗೂ ಖಾಸಗಿ ಕಂಪೆನಿಗಳು ತಮ್ಮ ಅನುಕೂಲಕ್ಕಾಗಿ ಅನಧಿಕೃತವಾಗಿ ರಸ್ತೆಗಳನ್ನು ಅಗೆದರೆ ಅಂಥವರಿಗೆ 10 ರಿಂದ 25 ಲಕ್ಷ ರೂ.ವರೆಗೆ ದಂಡ ವಿಧಿಸಲು ರಾಜ್ಯ ಸರಕಾರ ಬಿಬಿಎಂಪಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಸಾರ್ವಜನಿಕರು ಓಡಾಡುವ, ವಾಹನಗಳು ಸಂಚರಿಸುವ ರಸ್ತೆಗಳನ್ನು ಅಗೆದದ್ದೇ ಆದಲ್ಲಿ ಸಾರ್ವಜನಿಕರು ಭಾರಿ ಮೊತ್ತವನ್ನು ತೆರಬೇಕಾಗುತ್ತದೆ.

ಈವರೆಗೆ ಅನಧಿಕೃತವಾಗಿ ರಸ್ತೆ ಅಗೆದರೆ 50 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ಈಗ ದಂಡದ ಪ್ರಮಾಣವನ್ನು ಯಾವುದೆ ಅನುಮತಿ ಇಲ್ಲದೆ ರಸ್ತೆಗಳನ್ನು ಅಗೆದರೆ ವೈಯಕ್ತಿಕವಾಗಿ ಮನೆಗಳಿಗೆ 10 ಲಕ್ಷರೂ.ಗಳಿಗೆ ಹೆಚ್ಚಿಸಲಾಗಿದೆ. ಯಾವುದೇ ಸಂಸ್ಥೆ ಅಥವಾ ಖಾಸಗಿ ಕಂಪೆನಿಗಳು ಕಾಮಗಾರಿಗಳನ್ನು ಅನುಮತಿ ಇಲ್ಲದೆ ನಡೆಸಿದ್ದಲ್ಲಿ 25 ಲಕ್ಷ ರೂ.ಗಳ ದಂವನ್ನು ವಿಧಿಸಲು ಪಾಲಿಕೆ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News