ಪರ್ತ್‌ನಲ್ಲಿ ಭಾರತದ ಅಗ್ರ 5 ಬೌಲಿಂಗ್ ಪ್ರದರ್ಶನ

Update: 2018-12-13 18:47 GMT

ಪರ್ತ್, ಡಿ.13: ಭಾರತ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ತಂಡಗಳ ಮಧ್ಯೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 2ನೇ ಪಂದ್ಯ ಶುಕ್ರವಾರ ನಡೆಯಲಿದೆ. ಈ ಹಿಂದೆ ಪರ್ತ್‌ನ ವಾಕಾ ಪಿಚ್‌ನಲ್ಲಿ ಭಾರತದ ಅಗ್ರ 5 ಬೌಲಿಂಗ್ ಪ್ರದರ್ಶನದ ಅವಲೋಕನ ಇಂತಿದೆ.

1.ಬಿಷನ್‌ಸಿಂಗ್ ಬೇಡಿ

 ಎಡಗೈ ಸ್ಪಿನ್ನರ್ ಬಿಷನ್‌ಸಿಂಗ್ ಬೇಡಿ 1977ರಲ್ಲಿ ಪರ್ತ್‌ನಲ್ಲಿ ನಡೆದ 2ನೇ ಟೆಸ್ಟ್ ನ ಎರಡೂ ಇನಿಂಗ್ಸ್‌ಗಳಲ್ಲಿ ತಲಾ 5 ವಿಕೆಟ್‌ಗಳನ್ನು ಪಡೆದಿದ್ದರು. ಆಗ ತಂಡದ ನಾಯಕತ್ವ ವಹಿಸಿದ್ದ ಅವರು, 61 ಓವರ್‌ಗಳಲ್ಲಿ ( ಆಗ ಓವರ್‌ಗೆ 8 ಎಸೆತಗಳು) 12 ಮೇಡನ್ ಮಾಡಿ 10 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೂ ಭಾರತ ಪಂದ್ಯವನ್ನು ಕೈಚೆಲ್ಲಿತ್ತು.

2.ಆರ್.ಪಿ.ಸಿಂಗ್

 2007-08ರ ಸಾಲಿನಲ್ಲಿ ನಡೆದ ಸರಣಿಯ 3ನೇ ಪಂದ್ಯದಲ್ಲಿ ಎಡಗೈ ಮಧ್ಯಮ ವೇಗಿ ರುದ್ರಪ್ರತಾಪ್ ಸಿಂಗ್ ಕಾಂಗರೂ ಪಡೆಯನ್ನು ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಕಾಡಿದ್ದರು. ಎರಡೂ ಇನಿಂಗ್ಸ್‌ಗಳಲ್ಲಿ ಒಟ್ಟು 6 ವಿಕೆಟ್‌ಗಳನ್ನು ಉರುಳಿಸಿದ್ದರು. ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯವನ್ನು 72 ರನ್‌ಗಳಿಂದ ಮಣಿಸಿತ್ತು.

3.ಮನೋಜ್ ಪ್ರಭಾಕರ್

 90ರ ದಶಕದಲ್ಲಿ ಭಾರತದ ಪ್ರಮುಖ ಬೌಲರ್ ಆಗಿದ್ದ ಮನೋಜ್ ಪ್ರಭಾಕರ್ 1992ರಲ್ಲಿ ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದಿದ್ದರು. ಆದಾಗ್ಯೂ ಭಾರತ ಪಂದ್ಯವನ್ನು 300 ರನ್‌ಗಳಿಂದ ಹೀನಾಯವಾಗಿ ಸೋತಿತ್ತು. ಸರಣಿಯನ್ನು ಆತಿಥೇಯರು 4-0 ಯಿಂದ ಗೆದ್ದಿದ್ದರು.

4.ಉಮೇಶ್ ಯಾದವ್

2011-12ರ ಸಾಲಿನಲ್ಲಿ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ ಸರಣಿಯ 3ನೇ ಟೆಸ್ಟ್‌ನಲ್ಲಿ ವೇಗಿ ಉಮೇಶ್ ಯಾದವ್ 5 ವಿಕೆಟ್ ಕಬಳಿಸುವ ಮೂಲಕ ದೀರ್ಘ ಅವಧಿಯ ಪಂದ್ಯದಲ್ಲಿ ಮೊದಲ ಬಾರಿಗೆ 5 ವಿಕೆಟ್ ಗೊಂಚಲು ಪಡೆದಿದ್ದರು. ಭಾರತ ಈ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 37 ರನ್‌ಗಳಿಂದ ಹೀನಾಯವಾಗಿ ಸೋಲು ಅನುಭವಿಸಿತ್ತು.

5.ಇರ್ಫಾನ್ ಪಠಾಣ್

ಬರೋಡಾ ವೇಗಿ ಇರ್ಫಾನ್ ಪಠಾಣ್ 2008ರಲ್ಲಿ ವಾಕಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದ್ದರು. ಭಾರತ ಈ ಪಂದ್ಯವನ್ನು 72 ರನ್‌ಗಳಿಂದ ಗೆದ್ದು ಬೀಗಿತ್ತು. ಆಗ ಅನಿಲ್ ಕುಂಬ್ಳೆ ತಂಡದ ನಾಯಕತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News