ಮನು, ಸೌರಭ್ ಸಹಿತ 16 ಶೂಟರ್‌ಗಳಿಗೆ ಸ್ಥಾನ

Update: 2018-12-13 18:52 GMT

ಚೆನ್ನೈ, ಡಿ.13: ಮನು ಭಾಕರ್ ಹಾಗೂ ಸೌರಭ್ ಚೌಧರಿ ಸಹಿತ 8 ಯುವ ಶೂಟರ್‌ಗಳು, ಇಬ್ಬರು ಟೆನಿಸ್ ಆಟಗಾರರು ಹಾಗೂ ಮೂವರು ಟೇಬಲ್ ಟೆನಿಸ್ ತಾರೆಯರು ಕೇಂದ್ರದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ(ಟಾಪ್ಸ್)ಯೋಜನೆಗೆ ಸೇರ್ಪಡೆಯಾಗಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್ ದೃಷ್ಟಿಯಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ.

ಟಾಪ್ಸ್ ಯೋಜನೆಯಡಿ ಆಯ್ದ ಅಥ್ಲೀಟ್‌ಗಳು ಪ್ರತಿ ತಿಂಗಳು 50,000 ರೂ. ಆರ್ಥಿಕ ನೆರವು ಪಡೆಯಲಿದ್ದಾರೆ.

ಭಾಕರ್(ಮಹಿಳೆಯರ 10 ಮೀ. ಏರ್ ಪಿಸ್ತೂಲ್)ಹಾಗೂ ಚೌಧರಿ(ಪುರುಷರ 10 ಮೀ. ಏರ್ ಪಿಸ್ತೂಲ್)ಇತ್ತೀಚೆಗೆ ಅರ್ಜೆಂಟೀನದ ಬ್ಯುನಸ್‌ಐರಿಸ್‌ನಲ್ಲಿ ನಡೆದಿದ್ದ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

►ಟಾಪ್ ಯೋಜನೆಗೆ ಆಯ್ಕೆಯಾದ ಪ್ರಮುಖ ಶೂಟರ್‌ಗಳು : ಮೆಹುಲಿ ಘೋಷ್(ಮಹಿಳಾ 10 ಮೀ. ಏರ್ ರೈಫಲ್), ಅನಿಶ್ ಭನ್ವಾಲಾ(ಪುರುಷರ 25 ಮೀ.ರ್ಯಾಪಿಡ್ ಪಿಸ್ತೂಲ್), ಇಲವೆನಿಲ್ ವಲವರಿವನ್ (ಮಹಿಳಾ 10 ಮೀ.ಏರ್ ರೈಫಲ್), ಲಕ್ಷ ಶೆರೊನ್(ಪುರುಷರ ಟ್ರಾಪ್)ಹಾಗೂ ಸಂಜೀವ್ ರಾಜ್‌ಪೂತ್(ಪುರುಷರ 50 ಮೀ. ರೈಫಲ್).

 ಏಶ್ಯನ್ ಗೇಮ್ಸ್ ಚಾಂಪಿಯನ್ ಡಿವಿಜ್ ಶರಣ್ ಹಾಗೂ ರೋಹನ್ ಬೋಪಣ್ಣ ಟಾಪ್ ಪಟ್ಟಿಯಲ್ಲಿರುವ ಟೆನಿಸ್ ಆಟಗಾರರು. ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರಾ, ಅಚಂತ ಶರತ್ ಕಮಲ್ ಹಾಗೂ ಸತ್ಯನ್‌ರನ್ನು ಪಟ್ಟಿಗೆ ಸೇರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News