ಜೊಕೊವಿಕ್, ಹಾಲೆಪ್‌ಗೆ ವಿಶ್ವ ಚಾಂಪಿಯನ್ಸ್ ಗರಿ

Update: 2018-12-13 18:53 GMT

ಲಂಡನ್, ಡಿ.13: ಸರ್ಬಿಯಾದ ನೊವಾಕ್ ಜೊಕೊವಿಕ್ ಹಾಗೂ ರೋಮಾನಿಯಾದ ಸಿಮೊನಾ ಹಾಲೆಪ್ ಅವರನ್ನು 2018ರ ಐಟಿಎಫ್ ವಿಶ್ವ ಚಾಂಪಿಯನ್‌ಗಳು ಎಂದು ವಿಶ್ವ ಟೆನಿಸ್‌ನ ಆಡಳಿತ ಮಂಡಳಿ ಹೆಸರಿಸಿದೆ.

ಅಂತರ್‌ರಾಷ್ಟ್ರೀಯ ಟೆನಿಸ್ ಫೆಡರೇಶನ್‌ನಿಂದ ಜೊಕೊವಿಕ್ 6ನೇ ಬಾರಿ ಈ ಪ್ರಶಸ್ತಿ ಸ್ವೀಕರಿಸುತ್ತಿದ್ದು, ಹಾಲೆಪ್ ಪ್ರಥಮ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಗಾಯದಿಂದ ಹೊಬಂದು ವಿಂಬಲ್ಡನ್ ಹಾಗೂ ಯುಎಸ್ ಓಪನ್ ಜಯಿಸಿದ್ದ ಜೊಕೊವಿಕ್ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಹಾಲೆಪ್ ಕೂಡ 2018ರಲ್ಲಿ ಪ್ರಥಮ ಬಾರಿಗೆ ಫ್ರೆಂಚ್ ಓಪನ್ ಜಯಿಸಿದ್ದರು. ಅಲ್ಲದೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ವರೆಗೂ ಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News