ಪಾಟ್ನಾ ಗೆ ಸೋಲುಣಿಸಿದ ತೆಲುಗು ಟೈಟಾನ್ಸ್

Update: 2018-12-13 18:55 GMT

ವಿಶಾಖಪಟ್ಟಣ, ಡಿ.13: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು 41-36 ಅಂಕಗಳ ಅಂತರದಿಂದ ಮಣಿಸಿದ ತೆಲುಗು ಟೈಟಾನ್ಸ್ ತವರಿನಲ್ಲಿ ನಡೆದ ಲೀಗ್ ಪಂದ್ಯಗಳನ್ನು ಗುರುವಾರ ಯಶಸ್ವಿಯಾಗಿ ಕೊನೆಗೊಳಿಸಿದೆ.

ಟೈಟಾನ್ಸ್ ನಾಯಕ ರಾಹುಲ್ ಚೌಧರಿ ಪಂದ್ಯದಲ್ಲಿ ಅತ್ಯಧಿಕ 13 ಅಂಕಗಳನ್ನು ಗಳಿಸಿದರು. ಈ ಮೂಲಕ ಅವರು ಪ್ರೊ ಕಬಡ್ಡಿ ಟೂರ್ನಿಯಲ್ಲಿ 800 ಅಂಕಗಳ ಗಡಿ ದಾಟಿದ ಎರಡನೇ ಆಟಗಾರ ಎನಿಸಿದರು. ಪಂದ್ಯದಲ್ಲಿ ಟೈಟಾನ್ಸ್ ನ ನೀಲೇಶ್ ಸಾಳುಂಕೆ 9 ಅಂಕ ಗಳಿಸಿ ನಾಯಕನಿಗೆ ಸಾಥ್ ನೀಡಿದರು. ಪಾಟ್ನಾ ಪೈರೇಟ್ಸ್‌ನ ಪರ್ದೀಪ್ ನರ್ವಾಲ್ ಅತ್ಯಧಿಕ 12 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News