ಪಾಕಿಸ್ತಾನವನ್ನು ಕೆಡವಿದ ಭಾರತ ಫೈನಲ್‌ಗೆ ಲಗ್ಗೆ

Update: 2018-12-13 18:56 GMT

ಕೊಲಂಬೊ, ಡಿ.13: ಮಾಯಾಂಕ್ ಮರ್ಕಂಡೆ ಅವರ ನಾಲ್ಕು ವಿಕೆಟ್ ಗೊಂಚಲು ಮತ್ತು ನಿತೀಶ್ ರಾಣಾ ಹಾಗೂ ಹಿಮ್ಮತ್‌ಸಿಂಗ್ ಅವರ ಅಜೇಯ ಅರ್ಧಶತಕಗಳ ಕೊಡುಗೆ ನೆರವಿನಿಂದ ಎಮರ್ಜಿಂಗ್ ಏಶ್ಯಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದ ಭಾರತ ಫೈನಲ್ ತಲುಪಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಯಲ್ಪಟ್ಟ ಪಾಕಿಸ್ತಾನ 44.4 ಓವರ್‌ಗಳಲ್ಲಿ 172 ರನ್‌ಗೆ ಸರ್ವಪತನ ಕಂಡಿತು.ಪಾಕ್‌ನ ವಿಕೆಟ್ ಕೀಪರ್ ಹಾಗೂ ನಾಯಕ ಮುಹಮ್ಮದ್ ರಿಝ್ವಾನ್ 67 ರನ್ ಬಾರಿಸಿದರೆ, ಸೌದ್ ಶಕೀಲ್ 62 ರನ್‌ಗಳ ಕಾಣಿಕೆ ನೀಡಿದರು. ಭಾರತದ ಪರ ಲೆಗ್‌ಸ್ಪಿನ್ನರ್ ಮಾಯಾಂಕ್ ಮರ್ಕಂಡೆ 39 ರನ್ ನೀಡಿ 4 ವಿಕೆಟ್ ಕಬಳಿಸುವುದರ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.

173 ರನ್‌ಗಳ ಗೆಲುವಿನ ಗುರಿ ಪಡೆದ ಭಾರತ ತಂಡಕ್ಕೆ ನಿತೀಶ್ ರಾಣಾ 60 ಹಾಗೂ ಹಿಮ್ಮತ್‌ಸಿಂಗ್ 59 ರನ್ ಗಳಿಸಿ ಆಧಾರವಾದರು. 27.3 ಓವರ್‌ಗಳಲ್ಲಿ ಭಾರತ ಗೆಲುವಿನ ಗುರಿ ತಲುಪಿತು. ಮರ್ಕಂಡೆ ಪಂದ್ಯ ಪುರುಷೋತ್ತಮ ಗೌರವ ಪಡೆದರು.

ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಶನಿವಾರ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್

►ಪಾಕಿಸ್ತಾನ: 44.4 ಓವರ್‌ಗಳಲ್ಲಿ 172 ರನ್ ಆಲೌಟ್(ರಿಝ್ವಾನ್ 67, ಶಕೀಲ್ 62. ಮರ್ಕಂಡೆ 39ಕ್ಕೆ 4)

►ಭಾರತ: 27.3 ಓವರ್‌ಗಳಲ್ಲಿ 3 ವಿಕೆಟ್‌ಗೆ 178(ರಾಣಾ 60, ಹಿಮ್ಮತ್‌ಸಿಂಗ್ 59)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News