ಬೆಂಗಳೂರು: ಆ್ಯಂಬಿಡೆಂಟ್ ರೀತಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ

Update: 2018-12-14 17:13 GMT

ಬೆಂಗಳೂರು, ಡಿ.14: ನಗರದಲ್ಲಿ ಒಂದರ ನಂತರ ಮತ್ತೊಂದು ಚೀಟಿಂಗ್ ಪ್ರಕರಣಗಳು ಹೊರಬರುತ್ತಿವೆ. ಆದರೆ, ಇದೀಗ ಆ್ಯಂಬಿಡೆಂಟ್ ಪ್ರಕರಣದ ರೀತಿಯಲ್ಲಿಯೇ ಮತ್ತೊಂದು ಕಂಪನಿ ನೂರಾರು ಜನರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಿವೇಶನ ಕೊಡಿಸುತ್ತೇವೆ ಮತ್ತು ನಿಮ್ಮ ಹಣವನ್ನು ಎರಡರಷ್ಟು ಮಾಡಿಸುತ್ತೇವೆ ಎಂದು ಜನರನ್ನು ನಂಬಿಸಿ ಒಬ್ಬರಿಂದ ಒಂದು ಸಾವಿರ ಸದಸ್ಯತ್ವ ಶುಲ್ಕ ಪಾವತಿಸಿಕೊಂಡು 40 ಸಾವಿರದಿಂದ 1 ಲಕ್ಷ ರೂ.ವರೆಗೂ ಹಣ ಠೇವಣಿ ಇರಿಸಿಕೊಂಡಿದ್ದು, ಇದೀಗ ಹಣ ನೀಡದೆ ವಂಚಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜಾಜಿನಗರದ ವಿಶ್ವಜ್ಯೋತಿ ಚ್ಯಾರಿಟೇಬಲ್ ಟಸ್ಟ್ ಅಧ್ಯಕ್ಷ ಮಾಧವಗೌಡ, ಉಪಾಧ್ಯಕ್ಷ ಬಸವನಗೌಡ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ವಂಚನೆ ನಡೆಸಿದ್ದು, ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಮಾಧವಗೌಡನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು.

ಜಾಮೀನಿನ ಮೇಲೆ ಹೊರಬಂದ ಈತ ಗ್ರಾಹಕರಿಗೆ ಮುಂಗಡವಾಗಿ ಚೆಕ್ ನೀಡಿದ್ದ. ಅದರೆ ಚೆಕ್ ಬೌನ್ಸ್ ಆದುದರಿಂದ ಗ್ರಾಹಕರು ಮಾಧವಗೌಡನನ್ನು ಪ್ರಶ್ನಿಸಿದರೆ, ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಮೋಸಕ್ಕೊಳಗಾದವರು ದೂರಿದ್ದಾರೆ. ಈ ಕುರಿತು ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News