ಬೆಂಗಳೂರು: ಗಾಂಜಾ ಮತ್ತಿನಲ್ಲಿ ಮಹಿಳೆಯ ಬಟ್ಟೆ ಎಳೆದ ವ್ಯಕ್ತಿಯ ಬಂಧನ

Update: 2018-12-14 17:27 GMT

ಬೆಂಗಳೂರು,ಡಿ.14: ಗಾಂಜಾ ಮತ್ತಿನಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಎಳೆಯಲು ಯತ್ನಿಸಿದ ಕಾಮುಕನೊಬ್ಬನನ್ನು ಹೆಣ್ಣೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕಲ್ಯಾಣನಗರಯ ಚಲ್ಲಕೆರೆ ಬಳಿ ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಆತನಿಂದ ಬಿಡಿಸಿಕೊಂಡು ಮಹಿಳೆ ರಕ್ಷಣೆಗಾಗಿ ಕಿರುಚಾಡಿದ್ದಾರೆ. ತಕ್ಷಣ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ವಿಚಾರಣೆ ಮಾಡುವ ವೇಳೆ ಗಾಂಜಾ ಮತ್ತಿನಲ್ಲಿದ್ದ ಎಂದು ತಿಳಿದುಬಂದಿದ್ದು, ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News