ಡಿ.20ಕ್ಕೆ ದಲಿತ ಹಕ್ಕುಗಳ ರಕ್ಷಣೆಗಾಗಿ ‘ಪಾರ್ಲಿಮೆಂಟ್ ಚಲೋ’

Update: 2018-12-15 13:40 GMT

ಬೆಂಗಳೂರು, ಡಿ.15: ದಲಿತ ಶೋಷಣಾ ಮುಕ್ತಿ ಮಂಚ್ ನೇತೃತ್ವದಲ್ಲಿ ‘ಪಾರ್ಲಿಮೆಂಟ್ ಚಲೋ’ವನ್ನು ಡಿ.20ರಂದು ಹೊಸದಿಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಉಳಿವಿಗಾಗಿ ಹಾಗೂ ದಲಿತರ ಹಕ್ಕುಗಳನ್ನು ರಕ್ಷಿಸಲು ಪಾರ್ಲಿಮೆಂಟ್ ಚಲೋವನ್ನು ಆಯೋಜನೆ ಮಾಡಲಾಗಿದ್ದು, ಸುಮಾರು 10ಸಾವಿರ ಜನರು 20 ರಾಜ್ಯಗಳಿಂದ ಆಗಮಿಸಲಿದ್ದಾರೆ. ರಾಜ್ಯದಿಂದ 150 ದಲಿತ ಮುಖಂಡರು ಪಾಲ್ಗೊಳ್ಳಲಿದ್ದೇವೆ ಎಂದು ಹೇಳಿದರು.

ದೇಶದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವ ಸರಕಾರದ ಸಂಸ್ಥೆಗಳನ್ನು ಕೋಮುವಾದೀಕರಿಸುವ ಕುಕೃತ್ಯದಲ್ಲಿ ಕೇಂದ್ರ ಸರಕಾರ ತೊಡಗಿದ್ದು, ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಈ ಸಂಸ್ಥೆಗಳಲ್ಲಿ ತುರುಕುವ ಮೂಲಕ ಕೋಮುವಾದಿ ಸಿದ್ಧಾಂತಗಳನ್ನು ಜಾರಿಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News