ಜಾತಿ ಪ್ರಭುತ್ವ ಮತ್ತು ರಾಜ್ಯ ಪ್ರಭುತ್ವ ಶಕ್ತಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ

Update: 2018-12-16 12:07 GMT

ಮಾಧ್ಯಮ ಪ್ರಜಾತಂತ್ರ ವ್ಯವಸ್ಥೆ ಕಾಪಾಡುವ ಒಂದು ಪ್ರಬಲ ಅಸ್ತ್ರ ಮತ್ತು ಅಂಗ. ಸಂವಿಧಾನದತ್ತ ಮೂಲಭೂತ ಮತ್ತು ನಾಗರಿಕ ಹಕ್ಕುಗಳನ್ನು ಸಾರಾಸಗಟಾಗಿ ಹರಣ ಮಾಡುತ್ತಿರುವ / ಉಲ್ಲಂಘಿಸುತ್ತಿರುವ ಈ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸಬೇಕಾದುದು ಅದರ ಪಾಲಿನ ಕರ್ತವ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ಪಕ್ಷಪಾತಿಗಳಾಗಿರುವುದು ಮತ್ತು ಅವಕಾಶವಾದಿಗಳ ವಶದಲ್ಲಿದ್ದು ತನ್ನ ಪಾತ್ರ ನಿರ್ವಹಿಸುವಲ್ಲಿ ವಿಫಲವಾಗಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿ.

ನಾವು ಪ್ರತಿ ವರ್ಷ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸುವುದನ್ನು ಸಂಪ್ರದಾಯವನ್ನಾಗಿ ಮಾಡಿಕೊಂಡಿದ್ದೇವೆ. ಆದರೆ ಮಾನವ ಹಕ್ಕುಗಳ ರಕ್ಷಣೆಯಲ್ಲಿ ನಮ್ಮ ಪಾತ್ರವೇನು ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ಈ ದೇಶದ ಪ್ರಜೆ ಗಳಾಗಿ, ಅಧಿಕಾರಿಗಳಾಗಿ, ರಾಜಕಾರಣಿಗಳಾಗಿ ಹಾಗೂ ನಾಗರಿಕರಾಗಿ ಸಮಾಜದಲ್ಲಿ ನಾವು ಯಾವುದೇ ಉದ್ಯೋಗ ವನ್ನು ಮಾಡುತ್ತಿದ್ದರೂ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ನಮ್ಮ ಜವಾಬ್ದಾರಿಗಳೇನು? ಅದನ್ನು ಹೇಗೆ ನಿಭಾಯಿಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಬಳಿ ಉತ್ತರವಿಲ್ಲ. ಅದೊಂದು ಆಚರಣೆ ಮಾತ್ರವಾಗಿಬಿಟ್ಟಿದೆ. ಮಾನವ ಹಕ್ಕುಗಳ ರಕ್ಷಣೆಗಾಗಿ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಘೋಷಣೆ ಮತ್ತು ಭಾರತ ಸಂವಿಧಾನದ ಮಾನವ ಹಕ್ಕುಗಳ ಆಶಯವನ್ನು ಅನುಷ್ಠಾನಕ್ಕೆ ತರುವ ಯಾವ ಕಾರ್ಯದಲ್ಲೂ ನಾವು ತೊಡಗಿಕೊಂಡಿಲ್ಲ.

ಸ್ವಾತಂತ್ರ ಬಂದಾಗಿನಿಂದ ಇಲ್ಲಿಯವರೆಗೆ ಆಗಿರುವ ಅಭಿವೃದ್ಧಿ ಮತ್ತು ಬದಲಾವಣೆಗಳನ್ನು ಗಮನಿಸಿದರೆ ನಾವು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದ್ದೇವೆ. ಆದರೆ ಮಾನವ ಹಕ್ಕುಗಳ ರಕ್ಷಣೆಯನ್ನು ಗಮನಿಸಿದರೆ ಅಂದಿಗಿಂತ ಇಂದು ಹೆಚ್ಚು ಮಾನವ ಹಕ್ಕುಗಳು ಹರಣವಾಗುತ್ತಿರುವುದು ಕಂಡುಬರುತ್ತದೆ. ಶಿಕ್ಷಣ ಹೆಚ್ಚಾದಂತೆ ಮಾನವ ಹಕ್ಕುಗಳು ಬಲಗೊಳ್ಳುತ್ತವೆ ಎಂಬುದು ಸಾಮಾನ್ಯ ಗ್ರಹಿಕೆ. ಮಾನವ ಹಕ್ಕುಗಳನ್ನು ರಕ್ಷಿಸಬೇಕಾದಂತಹ ಸರಕಾರ, ನ್ಯಾಯಾಲಯಗಳು, ಆಯೋಗ ಗಳು ಮತ್ತು ಮಾನವ ಹಕ್ಕು ಸಂಘಟನೆಗಳು ಪ್ರತಿಬಾರಿ ಮಾನವ ಹಕ್ಕುಗಳ ಉಲ್ಲಂಘನೆಯಾದ ನಂತರ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಗಳಿಗೆ ಪ್ರತಿಕ್ರಿಯಿಸುತ್ತಿವೆ. ಆದರೆ ಮೂಲ ಮಾನವ ಹಕ್ಕುಗಳ ಪ್ರಶ್ನೆಯ ಪ್ರಸ್ತಾಪವನ್ನು ಮಾಡುವುದಿಲ್ಲ.

ಹಿಂದೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಾಗ ಅಧಿಕಾರದಲ್ಲಿದ್ದ ವ್ಯಕ್ತಿಗಳನ್ನು ಪ್ರಶ್ನಿಸಬಹುದಿತ್ತು. ಅವರಿಗೆ ಶಿಕ್ಷೆ ನೀಡಬಹುದಿತ್ತು. ಆದರೆ ಇಂದು ದೇಶ ಆಳುವ ಶಕ್ತಿಗಳು ಚುನಾವಣೆಗೆ ನಿಲ್ಲುವುದಿಲ್ಲ. ಹಾಗೆಯೇ ಅವರು ದೇಶವಾಳುತ್ತಾರೆ. ಅದಕ್ಕಾಗಿ ಅನೇಕ ಸಂಘ ಸಂಸ್ಥೆಗಳನ್ನು ರೂಪಿಸಿಕೊಂಡು ಅದರ ಮೂಲಕ ದೇಶ ಮತ್ತು ರಾಜ್ಯವನ್ನು ಆಳುತ್ತಿರುವುದು ಕಂಡುಬರುತ್ತದೆ. ಇಲ್ಲಿ ಯಾರು ಯಾವ ಸ್ಥಾನಕ್ಕೆ ಏರಬೇಕು ಅಥವಾ ಯಾವ ಕಾನೂನುಗಳನ್ನು ರೂಪಿಸಬೇಕೆಂದು ಅವರೇ ತೀರ್ಮಾನಿಸುತ್ತಾರೆ. ಅದಕ್ಕೆ ಸಂಪ್ರದಾಯ ಮತ್ತು ಧರ್ಮದ ಒಂದು ಮುಖವಾಡವಿರುತ್ತದೆ. ಮತ್ತೊಂದು ತುದಿಯಿಂದ ಅಭಿವೃದ್ಧಿಯ ಮುಖವಾಡವನ್ನು ತೊಟ್ಟುಕೊಂಡಿರುವ ಬಂಡವಾಳಶಾಹಿಗಳು ಇತರರು ಅವರನ್ನು ನೇರವಾಗಿ ಪ್ರಶ್ನಿಸಲು ಮತ್ತು ಶಿಕ್ಷಿಸಲು ಸಾಧ್ಯವಿಲ್ಲದ ವಾತಾವರಣವನ್ನು ರೂಪಿಸಿಕೊಂಡಿದ್ದಾರೆ. ಸಾಮಾನ್ಯ ಜನರ ಹಕ್ಕುಗಳನ್ನು ಹರಣ ಮಾಡುತ್ತಿದ್ದಾರೆ. ಯಾರನ್ನೂ ಶಿಕ್ಷಿಸಲು ಸಾಧ್ಯವಾಗುವುದಿಲ್ಲ. ಎಲ್ಲದಕ್ಕೂ ಅವರ ಸಾಂವಿಧಾನಿಕವಾದ ಕೇಂದ್ರಗಳನ್ನು ರೂಪಿಸಿಕೊಂಡಿರುವುದರಿಂದ ಹಿಂದೆ ಸರಕಾರಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದವು.

ಮಾನವ ಹಕ್ಕುಗಳ ಸಂಘಟನೆಗಳು ಸಹ ಇಲ್ಲಿಯವರೆಗೆ ಸಮೂಹ ಮಾಧ್ಯಮಗಳಲ್ಲಿ ಪ್ರಕಟವಾಗುವ ಅಥವಾ ಅವುಗಳು ನಿರ್ದೇಶಿಸುವ ಘಟನೆಗಳನ್ನು ಮಾತ್ರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪ್ರಶ್ನಿಸುತ್ತಿವೆ. ಮಾನವೀಯ ವೌಲ್ಯಗಳ ಮೂಲಕ್ಕೆ ನಾವು ಇಲ್ಲಿಯವರೆಗೆ ತಲುಪಿಲ್ಲ. ಕ್ರಿಯೆಗೆ ಪ್ರತಿಕ್ರಿಯೆಯನ್ನು ಮಾತ್ರ ನೀಡುತ್ತಿದ್ದೇವೆ. ಒಬ್ಬ ಪತ್ರಕರ್ತನ ಮೇಲಿನ ದೌರ್ಜನ್ಯ ನಮ್ಮೆಲ್ಲರ ಗಮನ ಸೆಳೆಯುತ್ತದೆ. ಆದರೆ ಒಬ್ಬ ಬಡಕೂಲಿ ಕಾರ್ಮಿಕರ ಅಥವಾ ದಲಿತರ ಮೇಲಿನ ಆಗುವ ದೌರ್ಜನ್ಯಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಇಲ್ಲೂ ಜಾತಿ ಮತ್ತು ವರ್ಗಗಳ ಆಧಾರದಲ್ಲಿ ಪ್ರಾಮುಖ್ಯತೆ ಪಡೆಯುವುದನ್ನು ಉಲ್ಲೇಖಿಸಬಹುದು.

ಕರ್ನಾಟಕದಲ್ಲಿ 29 ಸಾವಿರ ಹಳ್ಳಿಗಳಿವೆ. ಒಂದಲ್ಲಾ ಒಂದು ಕಾರಣಕ್ಕಾಗಿ ಇಂದಿಗೂ ದಲಿತರು ವಾಸ ಮಾಡುವುದು ಕಷ್ಟವಾಗಿದೆ. ಅವರನ್ನು ಊರಿನ ಹೊರಗಿಟ್ಟು. ಹೊಲಗೇರಿ, ಮಾದಿಗರ ಹಟ್ಟಿ, ಲಂಬಾಣಿತಾಂಡ, ಗೊಲ್ಲರಹಟ್ಟಿ ಮತ್ತು ಕಾಲನಿಗಳು ಹಾಗೂ ಸ್ಲಂಗಳೆಂದು ಊರಿಂದ ಹೊರಗಿಟ್ಟಿ ರುವುದು ವಾಸ್ತವ. ಆದರೆ ಸಮಾಜದಲ್ಲಿರುವ ಯಾರಿಗೂ ಇದು ಶೋಷಣೆ, ಅಸ್ಪಶ್ಯತೆ, ಭೇದ ಅನ್ನಿಸುವುದಿಲ್ಲ ಏಕೆ?. ಅದನ್ನು ಪ್ರಶ್ನಿಸುವವರ ಮೇಲೆ ನಡೆಯುವ ದೌರ್ಜನ್ಯ ಕಾಣುವುದಿಲ್ಲ.

ಸರಕಾರಗಳು ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯ ಅನುಷ್ಠಾನದಲ್ಲಿ ನಿರ್ಲಕ್ಷ ಹೊಂದಿರುವುದು ಸ್ಪಷ್ಟವಾಗುತ್ತದೆ. ಸರಕಾರದ ವಿವಿಧ ಇಲಾಖೆಗಳು ಇಂದು ನೇರವಾಗಿ ಮಾನವ ಹಕ್ಕುಗಳ ದಮನ ಮಾಡುತ್ತಿರುವ ಉದಾಹರಣೆಗಳೇ ಹೆಚ್ಚು. ರೈತರು ತಮ್ಮ ಹಕ್ಕುಗಳನ್ನು ಕೇಳಲು ಬಂದರೆ ಅವರ ಮೇಲೆ ಲಾಠಿಚಾರ್ಜ್ ಮತ್ತು ಗುಂಡಿನ ದಾಳಿ ನಡೆಸಿ ದೌರ್ಜನ್ಯ ಮಾಡುತ್ತಾರೆ. ದಲಿತರ ಮೇಲಿನ ದೌರ್ಜನ್ಯಗಳನ್ನು ಪ್ರಶ್ನಿಸಿದರೆ ಅವರನ್ನು ರಾಷ್ಟ್ರೀಯತೆಯ ವಿರೋಧಿಗಳು ಎಂದು ಬಿಂಬಿಸುತ್ತಾರೆ.; ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಸರಕಾರದ ನೀತಿಗಳನ್ನು ಪ್ರಶ್ನಿಸಿದರೆ ಅವರ ಮೇಲೆ ಲಾಠಿ ಪ್ರಹಾರ ಮಾಡಿ ಕೇಸುಗಳನ್ನು ಹಾಕುತ್ತಾರೆ. ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಿದರೆ ಧರ್ಮ ಮತ್ತು ಸಂಸ್ಕೃತಿ ವಿರೋಧಿಗಳು ಎನ್ನುತ್ತಾರೆ. ಆದಿವಾಸಿ ಬುಡಕಟ್ಟು ಸಮುದಾಯಗಳು ಬದುಕುವ ಹಕ್ಕಿಗಾಗಿ ಬದುಕಲು ಬಿಡಿ ಎಂದರೆ ಅವರನ್ನು ಎತ್ತಂಗಡಿ ಮಾಡುತ್ತಾರೆ. ಅವರ ಬದುಕುವ ಹಕ್ಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ನಕ್ಸಲೈಟ್‌ಗಳೆಂದು ಬಿಂಬಿಸುತ್ತಾರೆ. ವಿದ್ಯಾರ್ಥಿಗಳು ಹಕ್ಕನ್ನು ಕೇಳಿದರೆ ಅವರನ್ನು ದೇಶದ್ರೋಹಿಗಳು ಎನ್ನುತ್ತಾರೆ. ಅವರಿಗೆ ಮಾನಸಿಕವಾದ ಹಿಂಸೆ ನೀಡಿ ಆತ್ಮಹತ್ಯೆಗಳನ್ನು ಮಾಡಿಕೊಳ್ಳಲು ಪ್ರಚೋದಿಸುತ್ತಾರೆ. ಜನ ಚಳವಳಿಗಳು ಜನರ ಹಕ್ಕುಗಳನ್ನು ಕೇಳಿದರೆ ಅವರ ವಿರುದ್ಧ ಕ್ರಮ ಜರುಗಿಸುತ್ತಾರೆ. ಬೀದಿ ವ್ಯಾಪಾರಿಗಳು ಸ್ವಾವಲಂಬಿಗಳಾಗಿ ಬದುಕುತ್ತಿದ್ದರೆ ನಗರ ಸೌಂದರ್ಯದ ಹೆಸರಿನಲ್ಲಿ ಅವರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಾರೆ. ನಗರದ ಬಡಜನರು ವಾಸಿಸುವ ಸ್ಲಂಗಳಿಂದ ನಗರಕ್ಕೆ ಕೆಟ್ಟ ಹೆಸರು ಎಂದು ಅವರನ್ನು ಸ್ಥಳಾಂತರ ಮಾಡಿ ಅವರ ಬದುಕುವ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಭಾರತದಾದ್ಯಂತ ಪ್ರತಿ ದಿನ ಒಂದಲ್ಲಾ ಒಂದು ಕಾರಣಕ್ಕಾಗಿ ಪೌರಕಾರ್ಮಿಕರು ಮತ್ತು ಮಲ ಬಾಚುವ ಕಾರ್ಮಿಕರು ಮಲದಗುಂಡಿಗೆ ಬಿದ್ದು ಅಥವಾ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ. ಅವರಿಗಾಗಿ ಸಂವಿಧಾನ ಬದ್ಧವಾದ ಅನೇಕ ಕಾಯ್ದೆಗಳು ಇವೆ. ಆದರೆ ಅವುಗಳನ್ನು ಅನುಷ್ಠಾನ ಮಾಡದೆ ನಿರ್ಲಕ್ಷಿಸಿರುವುದರಿಂದ ಅವರಿಗೆ ಸಿಗಬೇಕಾದ ಸೌಲಭ್ಯ ಸಿಗದೆ ಅವರ ಮಕ್ಕಳ ಭವಿಷ್ಯದ ಬದುಕುಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ವ್ಯವಸ್ಥೆ ಅಸ್ತಿತ್ವದಲ್ಲಿದೆ.

ಸರಕಾರಗಳು ಮಾಡುವ ಜನವಿರೋಧಿ ಯೋಜನೆ ಮತ್ತು ನೀತಿಗಳನ್ನು ಪ್ರಶ್ನಿಸುವವರನ್ನು ನಕ್ಸಲೈಟ್‌ಗಳು, ಟೆರರಿಸ್ಟ್‌ಗಳು, ದೇಶದ್ರೋಹಿಗಳು ಎಂಬುದಾಗಿ ಬಿಂಬಿಸುತ್ತಾರೆ. ದೇಶದಾದ್ಯಂತ ಬೇರೆ ಬೇರೆ ಮುಖದಲ್ಲಿ ಜಾತಿ, ಧರ್ಮ, ಪ್ರಾದೇಶಿಕ, ಆಹಾರದ ಹಾಗೂ ಸಂಸ್ಕೃತಿಗಳ ಹೆಸರಿನಲ್ಲಿ ವ್ಯಾಪಕವಾದ ಕೋಮುವಾದವನ್ನು ಹರಡುತ್ತಾ ಕೋಮುದೌರ್ಜನ್ಯಗಳನ್ನು ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸಲು ಸರಕಾರಗಳು ವಿಫಲವಾಗಿವೆ. ಸರಕಾರವೇ ಅವರನ್ನು ಬೆಂಬಲಿಸುತ್ತಿರುವುದು ಕಂಡುಬರುತ್ತದೆ.

ಹೊಸ ಶಿಕ್ಷಣ ನೀತಿಗಳ ಮೂಲಕ ಶಿಕ್ಷಣವನ್ನು ಕೋಮುವಾದೀ ಕರಣಗೊಳಿಸುತ್ತಿದ್ದಾರೆ. ಪಠ್ಯಕ್ರಮಗಳಲ್ಲಿ ಕೋಮುವಾದಗಳನ್ನು ಹರಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ಶಿಕ್ಷಣ ನೀತಿಗಳಲ್ಲಿ ಆಗಬೇಕಾಗಿರುವುದು ಎಲ್ಲರಿಗೂ ಒಂದೇ ರೀತಿಯ ಶಾಲೆ ಮತ್ತು ಒಂದೇ ರೀತಿಯ ಶಿಕ್ಷಣವನ್ನು ನೀಡಬೇಕು. ಇಲ್ಲವಾದರೆ ಹೊಸ ರೀತಿಯ ಸಾಮಾಜಿಕ ಅಸಮಾನತೆ ಮುಂದಿನ ದಿನಗಳಲ್ಲಿ ರೂಪುಗೊಳ್ಳುವ ಆತಂಕವಿದೆ. ಎಲ್ಲಾ ವರ್ಗದ ಜನರಿಗೆ ಸಮಾನವಾದ ಶಿಕ್ಷಣವನ್ನು ಒದಗಿಸಬೇಕು. ಮಾನವ ಹಕ್ಕುಗಳು ಉಳಿದು ಮತ್ತು ಬೆಳೆಯಬೇಕಾದರೆ ಎಲ್ಲರಿಗೂ ಸಮಾನ ವ್ಯವಸ್ಥೆಯಲ್ಲಿ ಸಮಾನ ಶಿಕ್ಷಣ ಪದ್ಧತಿ ಜಾರಿಯಾಗಬೇಕು.

ಹೆಣ್ಣು ಮಕ್ಕಳ ಮೇಲೆ ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿ ರುವ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸಾಂಪ್ರದಾಯಿಕ ಆಚರಣೆಗಳು ಮತ್ತು ನಂಬಿಕೆಗಳು ಮಹಿಳೆ ಯರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಅದರಲ್ಲೂ ಶೋಷಿತ ಸಮುದಾಯದ ಹೆಣ್ಣು ಮಕ್ಕಳಿಗೆ ಶೋಷಣೆಯ ಪ್ರಮಾಣ ದ್ವಿಗುಣಗೊಂಡಿದೆ. ಜಾತಿಯ ಕಾರಣಕ್ಕಾಗಿ ಹಕ್ಕುಗಳ ಹರಣ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯಾಗಿರುವುದರಿಂದ ಕುಟುಂಬದ ಒಳಗೆ ಸಮಾಜದಲ್ಲಿ ಶೋಷಣೆಗಳು ನಡೆಯುತ್ತಿವೆ. ಹಿಂದೆ ಕಪ್ಪು ಹೆಣ್ಣು ಮಕ್ಕಳು ಅಮೆರಿಕದಲ್ಲಿ ಆಸ್ಪತ್ರೆಗಳಿಗೆ ಹೋದರೆ ಅವರ ಗರ್ಭಕೋಶವನ್ನು ತೆಗೆದುಹಾಕುತ್ತಿದ್ದರಂತೆ. ಮುಂದೆ ಕಪ್ಪು ಮಕ್ಕಳು ಆಗಬಾರದೆಂದು ಹೀಗೆ ಮಾಡಲಾಗುತ್ತಿತ್ತೆಂಬ ಉಲ್ಲೇಖಗಳು ಇವೆ. ಆದರೆ ಇಂದು ಭಾರತದಲ್ಲಿ ಗೊಲ್ಲ ಮತ್ತು ಲಂಬಾಣಿ ಹೆಣ್ಣು ಮಕ್ಕಳ ಗರ್ಭಕೋಶಗಳನ್ನು ತೆಗೆದುಹಾಕುತ್ತಿರುವ ವರದಿಗಳು ಮಾನವ ಕುಲಕ್ಕೆ ಅವಮಾನವಾಗುವಂತಹ ಘಟನೆಗಳು ಅಸ್ತಿತ್ವದಲ್ಲಿವೆ. ಇವುಗಳನ್ನು ಇಲ್ಲಿನ ಮಹಿಳಾ ಚಳವಳಿಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಪ್ರಮುಖ ವಿಷಯವೆಂದು ಅಥವಾ ತಾರತಮ್ಯವೆಂದು ಪರಿಗಣಿಸಿರುವುದು ತೀರ ವಿರಳವಾಗಿ ಕಾಣುತ್ತದೆ. ಪ್ರತಿದಿನ ನಡೆಯುವ ಘಟನೆಗಳು ಹೇಗೋ ಹಾಗೆ ದಲಿತರ ಮೇಲಿನ ದೌರ್ಜನ್ಯಗಳು ಸಾಮಾನ್ಯ ಎನ್ನುವಂತೆ ನಡೆಯುತ್ತಿವೆ. ಸಹಜ ಎನ್ನುವಂತಾಗಿದೆ. ದೌರ್ಜನ್ಯಗಳ ವಿರುದ್ಧ ತೀವ್ರವಾದ ಹೋರಾಟಗಳು ಆಗಿದ್ದರೂ ದೌರ್ಜನ್ಯಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ದೌರ್ಜನ್ಯ ಮಾಡುತ್ತಿರುವವರು ಮತ್ತು ಅವರನ್ನು ಬೆಂಬಲಿಸುತ್ತಿರುವ ಇತಿಹಾಸವನ್ನು ಗಮನಿಸಿದರೆ ದೌರ್ಜನ್ಯಗಳಿಗೆ ಪ್ರಚೋದನೆ ನೀಡುತ್ತಿದ್ದಾರೆಯೇ ಹೊರತು ಅದನ್ನು ನಿಷೇಧಿಸುತ್ತಿಲ್ಲ. ಇತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ನಡೆಯುವ ಹೋರಾಟಗಳು ದಲಿತರ ಮೇಲೆ ದೌರ್ಜನ್ಯ ನಡೆದಾಗ ಹೆಚ್ಚು ಪ್ರಾಮುಖ್ಯತೆ ಪಡೆಯುವುದಿಲ್ಲ. ಅವರ ಸಮಸ್ಯೆಗಳಿಗೆ ಮಾನವ ಹಕ್ಕುಗಳ ಹೆಸರಿನಲ್ಲಿ ಹೋರಾಟ ಮಾಡುವವರು ದಲಿತರ ಮೇಲಿನ ದೌರ್ಜನ್ಯಗಳು ನಡೆದಾಗ ಅದರ ವಿರುದ್ಧ ಹೋರಾಟ ಮಾಡುವವರು ಮತ್ತು ಭಾಗವಹಿಸುವವರು ಕಡಿಮೆಯಾಗಿದ್ದಾರೆ. ದೌರ್ಜನ್ಯಗಳು ಹೇಗೆ ಮತ್ತು ಎಷ್ಟು ನಡೆಯುತ್ತವೆ ಎಂಬ ಬಗ್ಗೆ ರಾಷ್ಟ್ರೀಯ ಅಪರಾಧ ಸಂಸ್ಥೆ ಅನೇಕ ವರದಿಗಳನ್ನು ನೀಡಿದೆೆ. ಈ ದೇಶದಲ್ಲಿ 30 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದಲಿತರ ಮೇಲೆ ಪ್ರತಿದಿನ ಒಂದಲ್ಲೊಂದು ಕಾರಣಕ್ಕೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ದಲಿತರ ಬದುಕೇ ಒಂದು ಪ್ರತಿಭಟನೆಯಾಗಿದೆ. ಇಲ್ಲಿ ಎರಡು ರೀತಿಯ ಪ್ರಭುತ್ವಗಳು ಇವೆ. 1.ಜಾತಿಪ್ರಭುತ್ವ 2. ಪ್ರಜಾಪ್ರಭುತ್ವದ-ರಾಜಪ್ರಭುತ್ವ ಇವೆರಡು ಏಕಕಾಲದಲ್ಲಿ ಅಸ್ತಿತ್ವದಲ್ಲಿದೆ. ಜಾತಿಪ್ರಭುತ್ವ ಅಂಕಿ-ಅಂಶಗಳ ಮೂಲಕ ಜನರನ್ನು ದಿಕ್ಕುತಪ್ಪಿಸುತ್ತದೆ. ದಲಿತರ ಬದುಕುಗಳನ್ನು ಬಂಧಿಸಿರುವುದು ಕಾಣುತ್ತದೆ. ಅಂಕಿ-ಅಂಶಗಳು ಮತ್ತು ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣವನ್ನು ಗಮನಿಸಿದರೆ ಒಂದಕ್ಕೊಂದು ಹೋಲಿಕೆಯಾಗುವುದಿಲ್ಲ. ಅಲ್ಲಿ ನೀಡಿರುವ ಅಂಕಿ-ಸಂಖ್ಯೆಗಳು ಮರೆಮಾಚಿತ ಅಂಕಿಗಳು. ಅದಕ್ಕಾಗಿ ನಾವು ಪ್ರತ್ಯೇಕವಾದ ವ್ಯವಸ್ಥೆಯನ್ನು ಕಟ್ಟಿಕೊಂಡು ವಾಸ್ತವದ ಅಂಕಿ-ಅಂಶಗಳನ್ನು ರೂಪಿಸಿ ಗಮನಿಸಬೇಕಾಗುತ್ತದೆ.

ಈ ಎಲ್ಲಾ ದೌರ್ಜನ್ಯಗಳನ್ನು ಮಾನವ ಹಕ್ಕುಗಳ ದೃಷ್ಟಿಕೋನದಲ್ಲಿ ನೋಡುವುದರ ಮೂಲಕ ಹೊಸ ಆಲೋಚನಾ ಕ್ರಮವನ್ನು ಪ್ರಾರಂಭಿಸಿ ದೌರ್ಜನ್ಯಗಳನ್ನು ಹೋಗಲಾಡಿಸಲು ದಾರಿಗಳನ್ನು ರೂಪಿಸಬೇಕು.

ಇದುವರೆಗೆ ಜಾತಿ ಸಂಘಟನೆಗಳು ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡುತ್ತಿರುವಾಗ ಬೇರೆ ಜನರು ಭಾಗವಹಿಸುತ್ತಿರಲಿಲ್ಲ. ಸಂಘಟನೆಗಳು ಹರಿದು ಹಂಚಿ ಹೋಗಿವೆ. ಪ್ರತಿ ಸಂಘಟನೆಗೂ ಅದರದ್ದೇ ಆದ ಪ್ರಾಮುಖ್ಯತೆ ಮತ್ತು ಪ್ರಾತಿನಿಧ್ಯತೆ ಇದೆ. ಆದ್ದರಿಂದ ಇವುಗಳನ್ನು ಮಾನವ ಹಕ್ಕುಗಳ ದೃಷ್ಟಿಕೋನದಿಂದ ಎಲ್ಲರನ್ನೂ ಒಳಗೊಳ್ಳುವ ಹಾಗೆ ಹೋರಾಟಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಅಸ್ಪಶ್ಯತೆ ಮತ್ತು ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡುವುದರ ಮೂಲಕ ಜಾತಿಪ್ರಭುತ್ವ ಮತ್ತು ರಾಜಪ್ರಭುತ್ವದ ದೌರ್ಜನ್ಯಗಳನ್ನು ಮಾನವ ಹಕ್ಕುಗಳ ಹೋರಾಟದ ಮೂಲಕ ಎದುರಿಸಬಹುದು. ರಾಜಪ್ರಭುತ್ವ ಇದು ಕೇವಲ ದಲಿತರ ಮೇಲೆ ಮಾತ್ರವಲ್ಲ ಸಮಾಜದಲ್ಲಿರುವ ಶೇ.80ರಷ್ಟು ಸಮುದಾಯ ಗಳ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿವೆ. ಒಂದೇ ಸ್ಥಿತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಎಲ್ಲಾ ಬಡವರು ಏಕೆ ಮಾತನಾಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅವರನ್ನು ಒಳಗೊಳ್ಳಬೇಕು.

ಬಡವರಿಗೆ ಆಹಾರ ಭದ್ರತೆಗಾಗಿ ನೀಡುತ್ತಿದ್ದ ಪಡಿತರ ವ್ಯವಸ್ಥೆಯನ್ನು ದಿನದಿಂದ ದಿನಕ್ಕೆ ಕಡಿತಗೊಳಿಸುತ್ತಾ ಜನರ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಸಂಘರ್ಷದಲ್ಲಿ ಬಡಜನರ ಆಹಾರ ಪದ್ಧತಿಗಳನ್ನು ನಾಶಮಾಡುತ್ತಿದ್ದಾರೆ. ಪೌಷ್ಠಿಕಾಂಶ ಕೊರತೆ ಇರುವ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಹಾಲು ನೀಡುತ್ತಿದ್ದರು. ಅದನ್ನು ಜಾತಿಪ್ರಭುತ್ವದ ಮನಸ್ಸುಗಳು ಮೊಟ್ಟೆಗೆ ಬದಲು ಮಾತ್ರೆಗಳನ್ನು ನೀಡಲು ಸದ್ದಿಲ್ಲದೆ ಪ್ರಾರಂಭಿಸಿವೆ. ಈ ಎಲ್ಲಾ ಬೆಳವಣಿಗೆಗಳು ಜನರ ಆಹಾರ ಹಕ್ಕನ್ನು ಕಸಿದುಕೊಳ್ಳುತ್ತಿರುವುದಕ್ಕೆ ಉದಾಹರಣೆ.

ನಿರ್ಭೀತ ಸಹನೀಯ ಬದುಕು ದೂರವಾಗುತ್ತಿದೆ. ಭಯ ಮತ್ತು ಆತಂಕ ದಿನನಿತ್ಯ ಸಾಮಾನ್ಯ ಜನರನ್ನು ಕಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಗಳು ಸಂಭವಿಸಿದಾಗ ಸಾಮಾನ್ಯ ಜನ ದೌರ್ಜನ್ಯಕ್ಕೊಳಗಾದವರ ನೆರವಿಗೆ ಬರಲು ಭಯಬೀಳುತ್ತಾರೆ. ಪ್ರತಿಕ್ರಿಯೆ ನೀಡಲೂ ಹಿಂಜರಿಯುವ ವಾತಾವರಣ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಮೂಖ ಪ್ರೇಕ್ಷಕರಾಗಿ ನಿಲ್ಲುತ್ತಾರೆ ಅಥವ ಕಂಡೂ ಕಾಣದಂತೆ ಮುಂದೆ ಹೋಗುತ್ತಾರೆ. ಮುಂಜಾನೆ ಮನೆಯಿಂದ ಹೊರ ಹೋದ ಮಹಿಳೆಯರು ಮಕ್ಕಳು ಸಂಜೆ ಸುರಕ್ಷಿತವಾಗಿ ಮನೆಗೆ ಬರುತ್ತಾರೆ ಎಂಬ ಖಾತ್ರಿ ಇಂದಿಲ್ಲ. ತಾವು ವಾಸಿಸುವ ಮನೆಗೆ ಭದ್ರತೆ ಇಲ್ಲ. ಬಡಜನ ಸಂಜೆ ತಾವು ಬರುವ ವೇಳೆಗೆ ತಾವಿದ್ದ ಮನೆ ಅದೇ ಜಾಗದಲ್ಲಿ ಇರುವುದು ಎಂಬ ಖಾತ್ರಿ ಇರುವುದಿಲ್ಲ. ಯಾರದೋ ಜಾಗವನ್ನು ಯಾರೋ ಖರೀದಿಸಿದಂತೆ ದಾಖಲೆ ಸೃಷ್ಟಿಸಿ, ಆರಕ್ಷಕರ ರಕ್ಷಣೆಯೊಂದಿಗೆ ಮನೆಗಳನ್ನು ಏಕಾಏಕಿ ಧ್ವಂಸಗೊಳಿಸುತ್ತಿರುವ ಪ್ರಕರಣಗಳು ಘಟಿಸುತ್ತಿವೆ. ಬೀದಿ ವ್ಯಾಪಾರಿಗಳು ಗೂಂಡಾ ಮತ್ತು ಪೊಲೀಸರ ಮರ್ಜಿಯಲ್ಲಿ ವ್ಯವಹಾರ ನಡೆಸಬೇಕಿದೆ. ಆರಕ್ಷಕರು ಮಾಸಿದ ಬಟ್ಟೆತೊಟ್ಟ ಮಹಿಳೆಯರು ಸೂಳೆಯರೆಂದು ತೀರ್ಮಾನಿಸುತ್ತಾರೆ, ಹಿಡಿದು ಥಳಿಸುತ್ತಾರೆ, ಲೈಂಗಿಕ ಕಾರ್ಯಕರ್ತೆಯರಿಂದ ಹಣದೋಚುತ್ತಾರೆ ಚಟ ತೀರಿಸಿಕೊಳ್ಳುತ್ತಾರೆ. ಕಾಡುತ್ತಾರೆ, ಇವೆಲ್ಲವೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳ ಆಡಳಿತದಲ್ಲಿ ನಡೆಯುತ್ತಿದೆ ಎನ್ನುವುದನ್ನು ಮರೆಯಲಾಗದು. ಸಾಮಾನ್ಯ ಜನರ ಪರ ನಿಲ್ಲಬೇಕಾದ ಪ್ರಜಾಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿ ಹಣ ಆಸ್ತಿಗಳಿಕೆಂುಲ್ಲಿ ನಿರತರಾಗಿದ್ದಾರೆ. ಆರಕ್ಷಕರು ಇಂತಹ ಭ್ರಷ್ಟಚಾರಿಗಳಿಗೆ ರಕ್ಷಣೆ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಸಾಮಾನ್ಯ ಜನರಿಗೆ ರಕ್ಷಣೆ ನೀಡಬೇಕಾದ ಆರಕ್ಷಕರು ಜನರ ಪಾಲಿಗೆ ರಕ್ಕಸರಾಗಿ ಕಂಟಕ ಪ್ರಾಯರಾಗಿ ಪರಿಣಮಿಸಿದ್ದಾರೆ. ತಮಗಿಷ್ಟ ಬಂದಂತೆ ವರ್ತಿಸುತ್ತಾರೆ, ಗೂಂಡಾಗಿರಿ ಮಾಡುತ್ತಾರೆ, ಮನಬಂದಂತೆ ಥಳಿಸುತ್ತಾರೆ, ಬಂಧಿಸಿ ತಮಗಿಷ್ಟಬಂದ ಸೆಕ್ಷನ್‌ಗಳನ್ನು ಹಾಕಿ ಜೈಲಿಗೆ ಕಳಿಸುವ ಯಾರ ನಿಯಂತ್ರಣಕ್ಕೂ ಸಿಲುಕದ ಮಟ್ಟಿಗೆ ಪಟಿಂಗರಾಗಿ ಹೋಗಿದ್ದಾರೆ. ನಾಗರಿಕ ಹಕ್ಕುಗಳನ್ನು ಜಾರಿಗೆ ತರುವ ಜವಾಬ್ದಾರಿ ಹೊತ್ತ ವ್ಯವಸ್ಥೆಯ ಮೇಲೆ ನಿಗಾವಿರಿಸಿ ಸರಿದಾರಿಗೆ ತರ ಬೇಕಾದ ಆಯೋಗಗಳು ಮತ್ತವುಗಳ ಸದಸ್ಯರುಗಳು ಅವಕಾಶವಾದಿಗಳಾಗಿ ಪರಿಣಮಿಸಿವೆ. ಸರಕಾರದ ಕೈಗೊಂಬೆಯಂತೆ ವರ್ತಿಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ದೂರು ನೀಡಿದರೆ ಮಾತ್ರ ಕ್ರಮಕೈಗೊಳ್ಳುವ ಪರಿಪಾಠವಿಟ್ಟುಕೊಂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಪ್ರಜಾತಂತ್ರ ರಕ್ಷಿಸುವ ಅಂಗ. ಮೇಲಿನ ಎಲ್ಲಾ ಅನ್ಯಾಯಗಳು ಅಸಾಂವಿಧಾನಿಕ ವಿದ್ಯಮಾನಗಳು ಸಂಭವಿಸುತ್ತಿರುವುದು ತನ್ನ ಕಣ್ಮಂದೆ ನಡೆಯುತ್ತಿರುವುದರ ಅರಿವಿದೆ. ಆದರೆ ತಂತಾನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಇರುವ ಅಧಿಕಾರವನ್ನು ಚಲಾಯಿಸುತ್ತಿಲ್ಲ. ಬೇರೆ ಯಾರಾದರೂ ದೂರು ದಾಖಲಿಸಿದಾಗ ಮಾತ್ರ ಪರಿಶೀಲಿಸುವ ಹಂತ ತಲುಪಿದೆ. ಇಂತಹ ನ್ಯಾಯಾಂಗ ವ್ಯವಸ್ಥೆಯನ್ನು ಯಾರು ರಕ್ಷಿಸಬೇಕು? ಮಾಧ್ಯಮ ಪ್ರಜಾತಂತ್ರ ವ್ಯವಸ್ಥೆ ಕಾಪಾಡುವ ಒಂದು ಪ್ರಭಲ ಅಸ್ತ್ರ ಮತ್ತು ಅಂಗ. ಸಂವಿಧಾನದತ್ತ ಮೂಲಭೂತ ಮತ್ತು ನಾಗರಿಕ ಹಕ್ಕುಗಳನ್ನು ಸಾರಾಸಗಟಾಗಿ ಹರಣ ಮಾಡುತ್ತಿರುವ / ಉಲ್ಲಂಘಿಸುತ್ತಿರುವ ಈ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸಬೇಕಾದುದು ಅದರ ಪಾಲಿನ ಕರ್ತವ್ಯ. ಪ್ರಸ್ತುತ ಪರಿಸ್ಥಿತಿಯಲ್ಲಿ ಪಕ್ಷಪಾತಿಗಳಾಗಿರುವುದು ಮತ್ತು ಅವಕಾಶವಾದಿಗಳ ವಶದಲ್ಲಿದ್ದು ತನ್ನ ಪಾತ್ರ ನಿರ್ವಹಿಸುವಲ್ಲಿ ವಿಫಲವಾಗಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿ.

ಇವೆಲ್ಲವೂ ಎಲ್ಲರಿಗೂ ತಿಳಿದ ವಿಷಯ ಎಂದು ಕಡೆಗಣಿಸಲು ಸಾಧ್ಯವಿಲ್ಲ. ಭಾರತ್ ಮಾತಾಕಿ ಜೈ ಎಂದು ಹೇಳುವ ಜನ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಾರೆ, ಹಿಡಿದು ಥಳಿಸುತ್ತಾರೆ, ಸಂಜೆ ವೇಳೆ ಒಂಟಿಯಾಗಿ ಸುಳಿದಾಡಲು ಬಿಡದಿರುವ, ಶ್ರೇಣೀಕೃತ ಜಾತಿವ್ಯವಸ್ಥೆಯನ್ನು ಪ್ರತಿಪಾದಿಸುವ, ಅಂತರ್-ಜಾತಿ ವಿವಾಹ ವಿರೋಧಿಸುವ, ಧರ್ಮಶ್ರೇಷ್ಠತೆಯನ್ನು ಪ್ರಧಾನವಾಗಿರಿಸಿ ಅಧರ್ಮ ಎಸಗುತ್ತಿರುವ, ಶಾಸ್ತ್ರ ಸಂಪ್ರದಾ ಯದ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುತ್ತಿರುವ, ಜಾತಿಗಳ ಧರ್ಮಗಳ ಮಧ್ಯೆ ದ್ವೇಷ ಸೃಷ್ಟಿಸುವ, ದಲಿತ ಕಾರ್ಮಿಕ ರನ್ನು ಮಲದ ಗುಂಡಿಗೆ ಇಳಿಸಿ ಕೊಲೆ ಮಾಡುತ್ತಿರುವ, ದೇವರ ಹೆಸರಿನಲ್ಲಿ ದಾಸಿ ಬಿಟ್ಟು ಲೈಂಗಿಕವಾಗಿ ಶೋಷಣೆ ಮಾಡುತ್ತಿರುವ, ಉತ್ತಮ ಶಿಕ್ಷ�

Writer - ಡಾ. ಆರ್.ವಿ. ಚಂದ್ರಶೇಖರ್

contributor

Editor - ಡಾ. ಆರ್.ವಿ. ಚಂದ್ರಶೇಖರ್

contributor

Similar News