ದರೋಡೆ ಆರೋಪ: ಮೂವರ ಬಂಧನ

Update: 2018-12-15 16:17 GMT

ಬೆಂಗಳೂರು, ಡಿ.15: ತಡರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಶ್ರೀರಾಂಪುರ ನಿವಾಸಿಗಳಾದ ಸರವಣ(21), ಮಂಜುನಾಥ(23) ಹಾಗೂ ಪ್ರೇಮ್‌ಕಿರಣ್(21) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಮುಹಮ್ಮದ್ ಇರ್ಫಾನ್ ಎಂಬುವರು ಡಿ.10ರಂದು ತಡರಾತ್ರಿಯಲ್ಲಿ ಮರಿಯಪ್ಪನಪಾಳ್ಯದ, 12ನೆ ಕ್ರಾಸ್ ರಸ್ತೆನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂರು ಜನ ಅಪರಿಚಿತರು ಬೆದರಿಸಿ ಹಣವನ್ನು ಸುಲಿಗೆ ಮಾಡಿದಲ್ಲದೆ, ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ರಾಜಾಜಿನಗರ ಠಾಣೆ ಸುಲಿಗೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೊಮ್ಮನಹಳ್ಳಿ, ಮಾಗಡಿ ರಸ್ತೆ, ಶ್ರೀರಾಂಪುರ, ಸುಬ್ರಮಣ್ಯನಗರ ರಾಜಾಜಿನಗರ ಪೊಲೀಸ್ ಠಾಣೆಯ ಡಕಾಯಿತಿ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆಳಕಿಗೆ ಬಂದಿದೆ. ದುಶ್ಚಟಗಳ ಖರ್ಚಿನ ಹಣಕ್ಕಾಗಿ ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರುತಿಸಿ ಸುಲಿಗೆ ಮಾಡುತ್ತಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News