ಪೊಲಿಟಿಕಲ್ ಅಡ್ವೈಸರ್ ವಿಶೇಷ ಸಂಚಿಕೆ ಬಿಡುಗಡೆ

Update: 2018-12-15 16:57 GMT

ಬೆಂಗಳೂರು, ಡಿ.15: ಪೊಲಿಟಿಕಲ್ ಅಡ್ವೈಸರ್ ಪಾಕ್ಷಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಶನಿವಾರ ನಗರದ ಪೆಸ್‌ಕ್ಲಬ್‌ನಲ್ಲಿ ಜೆಡಿಎಸ್‌ನ ಉಪಾಧ್ಯಕ್ಷ ಕೆ.ಎ.ಆನಂದ್ ಬಿಡುಗಡೆ ಮಾಡಿದ್ದಾರೆ.

ಪತ್ರಿಕೆಯ ಸಂಪಾದಕರಾದ ಎಂ.ಶಾಂತರಾಜು ವಿಶೇಷ ಸಂಚಿಕೆಯಲ್ಲಿ ಸೋನಿಯಾ ಗಾಂಧಿಯವರ 72ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅವರ ರಾಜಕೀಯ ಜೀವನದ ಸಾಧನೆಯನ್ನು ಬರೆದಿದ್ದು, ಇದರ ಜೊತೆಯಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರ 60ನೇ ಹುಟ್ಟು ಹಬ್ಬದ ಸಂಭ್ರಮ ಹಾಗೂ 62ನೇ ವರ್ಷಕ್ಕೆ ಕಾಲಿಟ್ಟ ಎಚ್.ಡಿ.ರೇವಣ್ಣರ ರಾಜಕೀಯದ ಏಳು-ಬೀಳಿನ ಕುರಿತು ಬರೆದಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಖಿಲ ಭಾರತ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಾನಾಯಕ್, ಕರ್ನಾಟಕ ಜರ್ನಲಿಸ್ಟ್ ಅಸೋಸಿಯೇಷನ್‌ನ ಅಧ್ಯಕ್ಷ ಬಿ.ನಾರಾಯಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News