ರಫೇಲ್ ಒಪ್ಪಂದ: ಸುಪ್ರೀಂ ತೀರ್ಪು ಉತ್ತರಿಸದೇ ಇರುವ ಪ್ರಮುಖ 9 ಪ್ರಶ್ನೆಗಳು

Update: 2018-12-15 17:10 GMT

ವಿವಾದಾತ್ಮಕ ರಫೇಲ್ ಒಪ್ಪಂದದ ತನಿಖೆಗೆ ಸೂಚನೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಾಂಗದ ಪರಾಮರ್ಶೆ ವ್ಯಾಪ್ತಿ ಸೀಮಿತವಾಗಿದ್ದು, ನಿರ್ಧಾರ ಕೈಗೊಂಡ ಪ್ರಕ್ರಿಯೆಯ ಬಗ್ಗೆ ಸಂದೇಹಪಡುವ ಪರಿಸ್ಥಿತಿ ಇಲ್ಲ ಎಂಬ ಕಾರಣ ನೀಡಿದೆ. ಇದು ದೇಶದ ಅತ್ಯುನ್ನತ ಕೋರ್ಟ್ ತೀರ್ಪಿನ ವೈರುಧ್ಯ ಹಾಗೂ ದೋಷಪೂರ್ಣ ಸ್ವರೂಪ ಎಂದು ಸಂಕ್ಷಿಪ್ತವಾಗಿ ಹೇಳಬಹುದು.

ಉದಾಹರಣೆಗೆ ಪ್ರಸ್ತುತ ಪ್ರಕರಣಗಳಲ್ಲಿ ಭಾರತದ ಸಂವಿಧಾನದ 32ನೇ ವಿಧಿ ಅನ್ವಯ ಕಾರ್ಯವ್ಯಾಪ್ತಿಯ ಹಿನ್ನೆಲೆಯಲ್ಲಿ ಮೂಲಭೂತವಾಗಿ ತನಿಖೆಗೆ ನಿರಾಕರಿಸಲಾಗಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಇನ್ನೊಂದೆಡೆ ತೀರ್ಪು, ಒಪ್ಪಂದದ ಮೂರು ಪ್ರಮುಖ ಆಯಾಮಗಳ ಪೈಕಿ ಎರಡು ಆಯಾಮಗಳ ಬಗ್ಗೆ ಅಂದರೆ ಖರೀದಿ ಪ್ರಕ್ರಿಯೆ ಹಾಗೂ ಅನಿಲ್ ಅಂಬಾನಿಯವರ ರಿಲಯನ್ಸ್ ಸಮೂಹವನ್ನು ಆಫ್‍ಸೆಟ್ ಪಾಲುದಾರ ಕಂಪನಿಯಾಗಿ ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ನಿರ್ದಿಷ್ಟವಾದ ಮೌಲಿಕ ತೀರ್ಪು ನೀಡಿದೆ. ಈ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಕೋರ್ಟಿನ ನಿರ್ಣಯ, ಒಪ್ಪಂದ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ. ಆದರೆ ವಿವರವಾದ ಪರಿಶೀಲನೆ ಮಾಡುವಷ್ಟು ದೊಡ್ಡ ಅಂಶಗಳಲ್ಲ  ಎಂಬ ಭಾವನೆ ಮೂಡಿಸಿದೆ. ಜತೆಗೆ ಡಸಾಲ್ಟ್ ಏವಿಯೇಷನ್, ಭಾರತದ ಆಫ್‍ ಸೆಟ್ ಪಾಲುದಾರ ಕಂಪನಿಯಾಗಿ ರಿಲಯನ್ಸ್ ಡಿಫೆನ್ಸ್ ಆಯ್ಕೆ ಮಾಡಿಕೊಳ್ಳುವಲ್ಲಿ ತಾನು ಮಧ್ಯಪ್ರವೇಶ ಮಾಡಿಲ್ಲ ಎಂಬ ಸರ್ಕಾರದ ಪ್ರತಿಪಾದನೆಯನ್ನು ಯಥಾವತ್ತಾಗಿ ನ್ಯಾಯಾಲಯ ಪರಿಗಣಿಸಿದೆ.

ಆದರೆ ಮೋದಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ವ್ಯಾಪಕ ಹಗ್ಗಜಗ್ಗಾಟಕ್ಕೆ ಕಾರಣವಾದ ಬೆಲೆ ನಿಗದಿ ವಿಚಾರವನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿಲ್ಲ. ಹಿಂದಿನ ಒಪ್ಪಂದದ ವೇಳೆ ನಿಗದಿಪಡಿಸಿದ್ದ ಬೆಲೆಗಿಂತ ಅಧಿಕ ಬೆಲೆಗೆ 36 ವಿಮಾನಗಳನ್ನು ಖರೀದಿಸಲಾಗಿದೆಯೇ ಎಂಬ ಬಗ್ಗೆ ಕೋರ್ಟ್ ಪರಿಶೀಲಿಸಿಲ್ಲ. "ಪ್ರಸ್ತುತ ಸಂದರ್ಭದಲ್ಲಿ ಇಂಥ ವಿಚಾರಗಳಲ್ಲಿ ಬೆಲೆಗಳ ತುಲನೆ ಮಾಡುವುದು ನ್ಯಾಯಾಲಯದ ಕೆಲಸವಲ್ಲ" ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

ಮೋದಿ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಮತ್ತು ಕಳೆದ ತಿಂಗಳು ಪ್ರಕರಣದ ವಿಚಾರಣೆ ನಡೆಸುವ ಸಂದರ್ಭದಲ್ಲಿ ಮಂಡಿಸಿದ ವಾದ ಸರಣಿಯನ್ನು ಪರಿಗಣಿಸಿ ನ್ಯಾಯಾಲಯ ಈ ನಿಲುವು ತೆಗೆದುಕೊಂಡಂತಿದೆ. ಆದಾಗ್ಯೂ ಅಂತಿಮ ತೀರ್ಪಿನಲ್ಲಿ, ಕೋರ್ಟ್ ಹಲವು ವಿವರಗಳನ್ನು ಮತ್ತು ವಾದಗಳನ್ನು ನಿರ್ಲಕ್ಷಿಸಿರುವುದು ಅಥವಾ ಕಡೆಗಣಿಸಿರುವುದು ಇಲ್ಲವೇ ಮರು ಪ್ರಶ್ನೆ ಇಲ್ಲದೇ ಯಥಾವತ್ತಾಗಿ ಸ್ವೀಕರಿಸಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.

ರಫೇಲ್ ಒಪ್ಪಂದ ಪ್ರಕ್ರಿಯೆ, ಬೆಲೆನಿಗದಿ ಮತ್ತು ಆಫ್‍ಸೆಟ್ ಪಾಲುದಾರ ಕಂಪನಿ ಆಯ್ಕೆ ಹೀಗೆ ಮೂರು ವಿಷಯಗಳಲ್ಲಿ ಯಾವುದೇ ತನಿಖೆ ನಡೆಸಲು ನಿರಾಕರಿಸಿರುವ ತೀರ್ಪಿನ ಅಂಶಗಳನ್ನು "ದ ವೈರ್" ಪ್ರತ್ಯೇಕಿಸಿ ವಿಶ್ಲೇಷಿಸಿದೆ.

1. ಬೆಲೆನಿಗದಿ ವಿವಾದವನ್ನು ಏಕೆ ನಿರ್ಲಕ್ಷಿಸಲಾಗಿದೆ?

ರಫೇಲ್ ಒಪ್ಪಂದ ಮಾಡಿಕೊಳ್ಳುವ ಕೊನೆ ಕ್ಷಣದಲ್ಲಿ 36 ಯುದ್ಧ ವಿಮಾನಗಳ ಬೆಲೆಯನ್ನು ನಿಗದಿಪಡಿಸಿರುವ ವಿಧಾನ ಕಳೆದ ಕೆಲ ತಿಂಗಳುಗಳಿಂದ ವಿವಾದದ ಮೂಲವಾಗಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ರಕ್ಷಣಾ ಸಚಿವಾಲಯದ ಅಧಿಕಾರಿಗಳ ಆಕ್ಷೇಪಗಳನ್ನು ಹೇಗೆ ಕಡೆಗಣಿಸಲಾಗಿದೆ ಎನ್ನುವುದನ್ನು ಆಧರಿಸಿ ಚರ್ಚೆ ನಡೆಯುತ್ತಿದೆ. ಅಂತಿಮವಾಗಿ ಅಧಿಕ ಮೂಲ ಬೆಲೆಯನ್ನು ನಿಗದಿಪಡಿಸುವ ಸೂತ್ರವನ್ನು ಆಯ್ಕೆ ಮಾಡಿಕೊಂಡಿರುವ ನಿರ್ಧಾರವನ್ನು ರಕ್ಷಣಾ ಸಚಿವಾಲಯ ಅಥವಾ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರ ಬದಲಾಗಿ ಮೇಲ್ತನಿಖೆಯ ಸಂಪುಟ ಸಮಿತಿ ಕೈಗೊಂಡಿರುವುದು ವಿವಾದದ ಕೇಂದ್ರಬಿಂದು.

ಕಳೆದ ತಿಂಗಳು ಎಕನಾಮಿಕ್ ಟೈಮ್ಸ್ ಜತೆ ಅಭಿಪ್ರಾಯ ಹಂಚಿಕೊಂಡ ರಕ್ಷಣಾ ಸಚಿವಾಲಯದ ಅಧಿಕಾರಿ ಸುಧಾಂಶು ಮೊಹಾಂತಿ, ಈ ಬದಲಾವಣೆಯನ್ನು ಅನುಮೋದಿಸಿರುವ ಕ್ರಮವನ್ನು ‘ವಿಚಿತ್ರ’ ಹಾಗೂ ‘ಸಂಶಯಾಸ್ಪದ’ ಎಂದು ಬಣ್ಣಿಸಿದ್ದರು.

ಇದಲ್ಲದೇ ಸಾರ್ವಜನಿಕ ಜಾಲತಾಣದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ರಕ್ಷಣಾ ಸಚಿವರು ಹಾಗೂ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಒಳಗೊಂಡ ರಕ್ಷಣಾ ಖರೀದಿ ಮಂಡಳಿ ಈ ಪ್ರಕರಣದಲ್ಲಿ ಶಿಫಾರಸ್ಸು ಮಾಡಿರಲಿಲ್ಲ. ಬದಲಾಗಿ, ಈ ವಿಚಾರವನ್ನು ಮೇಲ್ತನಿಖೆಯ ಸಂಪುಟ ಸಮಿತಿಯ ವಿವೇಚನೆಗೆ ಬಿಟ್ಟಿತ್ತು. ಏಕೆ? ಎಂಬ ಅಂಶದ ಬಗ್ಗೆ ಗಮನ ಹರಿಸಬೇಕಿದೆ. "ನನ್ನ ನೆನಪಿನ ಪ್ರಕಾರ ರಕ್ಷಣಾ ಬಂಡವಾಳ ಖರೀದಿ ಇತಿಹಾಸದದಲ್ಲೇ ಇಂಥ ನಿರ್ದಶನ ಇಲ್ಲ. ಏಕೆಂದರೆ ಇದು ವಿಚಿತ್ರ ಹಾಗೂ ಸಂಶಯಾಸ್ಪದ" ಎಂದು ಮೊಹಾಂತಿ ಹೇಳಿದ್ದರು.

ತಾಂತ್ರಿಕವಾಗಿ ಈ ಅಂಶವು ರಫೇಲ್ ಒಪ್ಪಂದದ ಬೆಲೆನಿಗದಿ ಆಯಾಮದಡಿ ಬರುವುದಾಗಿದ್ದು, ಇದನ್ನು ಪರಿಶೀಲನೆ ನಡೆಸದಿರಲು ಸುಪ್ರೀಂಕೋರ್ಟ್ ನಿರ್ಧರಿಸಿದೆಯಾದರೂ, ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಉಲ್ಲಂಘನೆಗಳಾಗಿವೆ ಎಂಬ ಅಂಶಗಳನ್ನು ಸ್ಪಷ್ಟಪಡಿಸಿದೆ. ಈ ಅಂಶವನ್ನು ಸಾರಾಸಗಟಾಗಿ ನಿರ್ಲಕ್ಷಿಸುವ ನಿರ್ಧಾರಕ್ಕೆ ಬಂದಿರುವ ಕೋರ್ಟ್ ಕ್ರಮ ನಿಜಕ್ಕೂ ಒಗಟಾಗಿದೆ.

2. ಒಟ್ಟು 126 ವಿಮಾನ ಖರೀದಿ ಬದಲಾಗಿ 36 ಆದದ್ದು ಹೇಗೆ?

ಮೂಲ ಒಪ್ಪಂದದಲ್ಲಿ ಇದ್ದಂತೆ 126 ವಿಮಾನಗಳ ಖರೀದಿ ಬದಲಾಗಿ 36 ವಿಮಾನಗಳನ್ನಷ್ಟೇ ಖರೀದಿಸಲು ಕೈಗೊಂಡ ನಿರ್ಧಾರದ ಬಗ್ಗೆ ತೀರ್ಪು ನೀಡುವುದು ನಮ್ಮ ಕೆಲಸವಲ್ಲ ಎಂದು ಕೋರ್ಟ್ ಹೇಳಿದ್ದು, ನೈಜ ಸಮಸ್ಯೆಯನ್ನೇ ಪಕ್ಕಕ್ಕಿಟ್ಟಿದೆ. ಅಂದರೆ ಹಿಂದಿನ ಯುಪಿಎ ಸರ್ಕಾರದ ಯುಗದಲ್ಲಿ ಒಪ್ಪಂದದ ವೇಗ ಹಾಗೂ ಕಾರ್ಯವಿಧಾನ, 126 ವಿಮಾನಗಳ ಒಪ್ಪಂದದ ಬದಲಾಗಿ ಹೊಸದಾಗಿ ವಾಸ್ತವವಾಗಿ ನಿರ್ದಿಷ್ಟಪಡಿಸಿದ ಪ್ರಕ್ರಿಯೆಗಳನ್ನು ಅನುಸರಿಸದೇ 36 ವಿಮಾನಗಳ ಖರೀದಿಗೆ ಒಪ್ಪಿಂದ ಮಾಡಿಕೊಂಡದ್ದು ಮುಂತಾದ ಅಂಶಗಳನ್ನು ಕೋರ್ಟ್ ಪರಿಗಣಿಸಿಲ್ಲ.

ಮೋದಿ ಸರ್ಕಾರ ನೀಡಿದ ವೇಳಾಪಟ್ಟಿಯನ್ನು ಸುಪ್ರೀಂ ಕೋರ್ಟ್ ಯಥಾವತ್ತಾಗಿ ಸ್ವೀಕರಿಸಿದೆ. ಅಂದರೆ 126 ಜೆಟ್ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನು 2015ರ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗಿದ್ದು, 36 ವಿಮಾನಗಳ ಖರೀದಿಗೆ ಕೆಲ ವಾರಗಳ ಬಳಿಕ ಅಂದರೆ 2015ರ ಏಪ್ರಿಲ್ ಕೊನೆಯಲ್ಲಿ ನಿರ್ಧರಿಸಲಾಯಿತು ಎಂದು ಮೋದಿ ಸರ್ಕಾರ ಹೇಳಿತ್ತು. ಆದರೆ ಈ ಕುರಿತು ಎತ್ತಿದ್ದ ಹಲವು ಪ್ರಶ್ನೆಗಳನ್ನು ಕೋರ್ಟ್ ಮಾನ್ಯ ಮಾಡಿಲ್ಲ.

ಈ ಪ್ರಶ್ನೆಗಳಲ್ಲಿ ಪ್ರಮುಖವಾದವು ಇಲ್ಲಿವೆ: 2015ರಲ್ಲಿ ಪ್ರಕ್ರಿಯೆ ವಾಪಾಸು ಪಡೆಯಲು ಯಾವ ಪತ್ರ ವ್ಯವಹಾರವನ್ನು ನಡೆಸಲಾಗಿದೆ ಹಾಗೂ ಈ ವಿಚಾರದಲ್ಲಿ ಸೂಕ್ತ ವಿವರಗಳನ್ನು ಒದಗಿಸಲು ಸರ್ಕಾರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?, ಈ ಪ್ರಕ್ರಿಯೆಯಲ್ಲಿ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರನ್ನು ಏಕೆ ಸೇರಿಸಿಕೊಂಡಿಲ್ಲ?, 2015ರ ಮಾರ್ಚ್ ವೇಳೆಗೆ ಪ್ರಕ್ರಿಯೆ ವಾಪಸ್ ಪಡೆಯುವ ಕೆಲಸ ಆರಂಭವಾಗಿದ್ದರೆ, 2015ರ ಮಾರ್ಚ್ 28ರಂದು ಡಸಾಲ್ಟ್ ಸಿಇಒ ಎರಿಕ್ ಟ್ರ್ಯಾಪಿಯರ್ ಅವರು 126 ಯುದ್ಧವಿಮಾನ ಒಪ್ಪಂದ ಶೇಕಡ 95ರಷ್ಟು ಪೂರ್ಣವಾಗಿದೆ ಎಂದು ಏಕೆ ಹೇಳಿಕೆ ನೀಡಿದ್ದರು?, ಐಜಿಎ ಸಹಿ ಮಾಡುವ ಮುನ್ನ ಯಾವ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿತ್ತು? ಯಾರ ಸಲಹೆ ಪಡೆಯಲಾಗಿತ್ತು?

ಈ ಹಿನ್ನೆಲೆಯಲ್ಲಿ ಖರೀದಿ ಪ್ರಕ್ರಿಯೆ ಸಂದೇಹಿಸಲು ಸಕಾರಣಗಳು ಇಲ್ಲ ಎಂಬ ಸುಪ್ರೀಂಕೋರ್ಟ್‍ನ ಮೌಲ್ಯಮಾಪನದಲ್ಲಿ ಮಹತ್ವದ ದೋಷವಿರುವುದು ಸ್ಪಷ್ಟ.

ಹಿರಿಯ ವಕೀಲ ಮತ್ತು ಹೋರಾಟಗಾರ ಪ್ರಶಾಂತ್ ಭೂಷಣ್ ಮತ್ತು ಮಾಜಿ ಕೇಂದ್ರ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ ಸಿನ್ಹಾ ಸಿಬಿಐಗೆ ನೀಡಿದ ದೂರಿನಲ್ಲಿ ಹೇಳಿರುವಂತೆ, ಸ್ಪಷ್ಟವಾಗಿ ಹೇಳುವುದಾದರೆ 36 ಯುದ್ಧ ವಿಮಾನಗಳ ಖರೀದಿಯ ಹೊಸ ಒಪ್ಪಂದವೇ ಪ್ರತ್ಯೇಕ. ಆದ್ದರಿಂದ ಇದಕ್ಕಾಗಿ ಕಡ್ಡಾಯವಾದ ಹಲವು ಪ್ರಕ್ರಿಯೆಗಳನ್ನು ಅನುಸರಿಸಬೇಕಿತ್ತು. ಆದರೆ ಇವುಗಳನ್ನು ಕೈಬಿಡಲಾಗಿದೆ. ವಾಸ್ತವವಾಗಿ ಭಾರತೀಯ ವಾಯುಪಡೆ 36 ಯುದ್ಧವಿಮಾನಗಳ ಬಗ್ಗೆ ಪ್ರಕರಣದ ಹೇಳಿಕೆ ಸಲ್ಲಿಸುವಲ್ಲಿಂದ ಈ ಪ್ರಕ್ರಿಯೆ ಆರಂಭವಾಗಬೇಕಿತ್ತು.

3. ಸಾರ್ವಭೌಮ ಅಥವಾ ಸಂಪೂರ್ಣ ಖಾತ್ರಿಯ ಅಂಶವನ್ನು ಏಕೆ ನಿರ್ಲಕ್ಷಿಸಲಾಗಿದೆ?

ಫ್ರಾನ್ಸ್ ಮತ್ತು ಭಾರತ ನಡುವೆ ಮಾಡಿಕೊಂಡ ಅಂತರ ಸರ್ಕಾರ ಒಪ್ಪಂದದ ಅಂಶಗಳನ್ನು ಕಳೆದ ವಾರ "ದ ವೈರ್" ಬಹಿರಂಗಪಡಿಸಿತ್ತು. ಇದರಲ್ಲಿ ಸಂಪೂರ್ಣ ಖಾತ್ರಿ (ಸವರೀನ್ ಗ್ಯಾರಂಟಿ) ಅಂಶವಿಲ್ಲ ಎನ್ನುವುದನ್ನು ಬೆಳಕಿಗೆ ತಂದಿತ್ತು. ವಾಸ್ತವವಾಗಿ ಇದು ಯಾವುದೇ ಮಿಲಿಟರಿ ಸಾಧನ ಅಥವಾ ವಿಮಾನವನ್ನು ಮಾರಾಟ ಮಾಡುವ ದೇಶ ಹೊರಬೇಕಾದ ಕಾನೂನುಬದ್ಧ ಹೊಣೆಗಾರಿಕೆಯಾಗಿದೆ.

ಪರಿಪೂರ್ಣ ಖಾತ್ರಿ ಎಂದರೆ, ಉಭಯ ಸರ್ಕಾರಗಳ ನಡುವೆ ಮಾಡಿಕೊಳ್ಳುವ ರಕ್ಷಣಾ ಒಪ್ಪಂದಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮರು ಖಾತ್ರಿಯಾಗಿದೆ. ಇಂಥ ಖಾತ್ರಿಯ ಕೊರತೆ ಇರುವ ಬಗ್ಗೆ ನ್ಯಾಯಾಲಯ ವಿಚಾರಣೆ ವೇಳೆ ಚರ್ಚಿಸಲಾಗಿತ್ತು. ಆದರೆ ಈ ಅಂಶವನ್ನು ಅರ್ಜಿದಾರರ ವಾದ ಎಂಬ ಭಾಗದಲ್ಲಿ ಸಾರಾಂಶ ರೂಪದಲ್ಲಷ್ಟೇ ನೀಡಲಾಗಿದೆ.

ಆದಾಗ್ಯೂ ರಫೇಲ್ ಒಪ್ಪಂದವನ್ನು ಮೋದಿ ಸರ್ಕಾರ ಯಾವ ರೀತಿ ಮಾಡಿಕೊಂಡಿದೆ ಎಂಬ ಅಂಶದ ಮಹತ್ವವನ್ನು ಪರಿಶೀಲಿಸುವ ಬಗ್ಗೆ ಅಥವಾ ಅದರ ಪರಿಣಾಮಗಳ ಬಗ್ಗೆ ತೀರ್ಪಿನಲ್ಲಿ ಯಾವ ಅಂಶವನ್ನೂ ಉಲ್ಲೇಖಿಸಲಾಗಿಲ್ಲ.

ರಕ್ಷಣಾ ಸಚಿವಾಲಯದ ಮಾಜಿ ಅಧಿಕಾರಿ ಸುಧಾಂಶು ಮೊಹಾಂತಿ ಒಪ್ಪಂದದ ಅಂಶಗಳನ್ನು ಟೀಕಿಸಿ, ಫ್ರಾನ್ಸ್ ಸರ್ಕಾರ ಕೇವಲ "ಲೆಟರ್ ಆಫ್ ಕಂಫರ್ಟ್" ನೀಡಿದೆ. ಆದರೆ ಇದು ಕೇವಲ ನೈತಿಕ ಬದ್ಧತೆಯಾಗಿದ್ದು, ಯಾವುದೇ ಕಾನೂನಾತ್ಮಕ ಬದ್ಧತೆಯನ್ನು ಒಳಗೊಂಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.

ಪರಿಪೂರ್ಣ ಖಾತ್ರಿ ಇಲ್ಲದಿರುವುದರಿಂದ ಯಾವ ದೇಶವಾದರೂ, ನೈತಿಕ ಬದ್ಧತೆ ಇದ್ದರೂ ಈ ಭರವಸೆಯನ್ನು ಉಲ್ಲಂಘಿಸಬಹುದು ಅಥವಾ ಯಾವುದೇ ಅಳುಕಿಲ್ಲದೇ ಭಿನ್ನ ಮಾರ್ಗದಲ್ಲಿ ನಡೆಯಬಹುದು. ಆದಾಗ್ಯೂ ಸಾರ್ವಜನಿಕ ನಿಧಿಯಲ್ಲಿ ಮಾಡುವ ಖರೀದಿಯಾಗಿರುವುದರಿಂದ ಅದು ದೇಶಕ್ಕೆ ಹಾನಿಕಾರಕ ಆಗಬಾರದು ಎಂಬ ಕಳಕಳಿಯನ್ನು ಅವರು ವ್ಯಕ್ತಪಡಿಸಿದ್ದರು.

ಫ್ರಾನ್ಸ್ ಜತೆಗೆ ಯಾವುದೇ ವ್ಯಾಜ್ಯ ಉದ್ಭವಿಸಿದಲ್ಲಿ, ವ್ಯಾಜ್ಯ ಪರಿಹಾರ ವ್ಯವಸ್ಥೆಯಿಂದ ಹೊರಗಿರುವ ಭಾರತದ ನಿಲುವಿನ ಬಗ್ಗೆ ಎತ್ತಿದ ಕಳಕಳಿಯನ್ನು ಕೂಡಾ ನ್ಯಾಯಾಲಯ ನಿರ್ಲಕ್ಷಿಸಿದೆ.

4. ಬೆಲೆನಿಗದಿ ವಿಚಾರದ ಬಗ್ಗೆ ಚರ್ಚಿಸದಿದ್ದರೂ ಅಧಿಕೃತ ನಿಲುವನ್ನು ಏಕೆ ಒತ್ತಿ ಹೇಳಲಾಗಿದೆ?

ಸುಪ್ರೀಂಕೋರ್ಟ್ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ, ಬೆಲೆನಿಗದಿ ವಿಚಾರ ಅಥವಾ ಈ ಸಲಕರಣೆ ತಾಂತ್ರಿಕವಾಗಿ ಎಷ್ಟು ಸೂಕ್ತ ಎಂಬ ವಿಚಾರದ ಬಗ್ಗೆ ಪರಾಮರ್ಶೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು.

ಇದರ ಹೊರತಾಗಿಯೂ ವಿಚಾರಣೆ ವೇಳೆಯಲ್ಲಿ ಕೋರ್ಟ್, ಬೆಲೆನಿಗದಿಗೆ ಸಂಬಂಧಿಸಿದ ಮತ್ತು ಅದರ ಪ್ರಯೋಜನಗಳ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ಮೋದಿ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಇಲ್ಲಿ ನಿಜವಾಗಿಯೂ ಕೆಲ ಅಂಶಗಳು ಗೊಂದಲಕ್ಕೆ ಎಡೆಮಾಡಿಕೊಡುತ್ತವೆ. ನ್ಯಾಯಾಲಯ ಎಲ್ಲ ಬೆಲೆ ವಿವರಗಳನ್ನು ಮತ್ತು ಪ್ರತಿ ಅಂಶಗಳ ವೆಚ್ಚವನ್ನು ಗಂಭೀರವಾಗಿ ಪರಿಶೀಲಿಸಿದ್ದಾಗಿ ಹೇಳಿದೆ. ಆದರೆ 36 ಯುದ್ಧ ವಿಮಾನಗಳ ಖರೀದಿಯಲ್ಲಿ ವಾಣಿಜ್ಯಾತ್ಮಕ ಲಾಭಗಳಿವೆ. ಜತೆಗೆ ಶಸ್ತ್ರಾಸ್ತ್ರ ಪ್ಯಾಕೇಜ್‍ನಲ್ಲಿ ಕೆಲ ನಿರ್ದಿಷ್ಟ ಉತ್ತಮ ಷರತ್ತುಗಳಿವೆ ಎಂಬ ಸರ್ಕಾರದ ಪ್ರತಿಪಾದನೆಯನ್ನಷ್ಟೇ ತೀರ್ಪಿನಲ್ಲಿ ಉಲ್ಲೇಖಿಸಿದೆ.

 ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ವರದಿ ಮಾಡಿದಂತೆ ಇದು ಸತ್ಯವಲ್ಲ. ಮೂಲ ಆರ್‍ಎಫ್‍ಪಿ ವಿಶ್ಲೇಷಣೆಯಿಂದ ತಿಳಿದುಬರುವಂತೆ, ಮೋದಿ ಸರಕಾರದ 36 ಯುದ್ಧವಿಮಾನ ಖರೀದಿಯು ವಾಸ್ತವವಾಗಿ 126 ಯುದ್ಧವಿಮಾನಗಳ ಖರೀದಿಗೆ ಮೂಲವಾಗಿ ಮಾಡಿಕೊಂಡ ಒಪ್ಪಂದಕ್ಕೆ ಹೋಲಿಸಿದರೆ ಶೇಕಡ 40ರಷ್ಟು ದುಬಾರಿ. ಸುಪ್ರೀಂಕೋರ್ಟ್ ಈ ಅಂಶಗಳನ್ನು ಪರಿಗಣಿಸಿಲ್ಲ. ಸರ್ಕಾರದ ಪ್ರತಿಪಾದನೆಯನ್ನು ಯಥಾವತ್ತಾಗಿ ಉಲ್ಲೇಖಿಸಿ, ತನ್ನ ಮೂಲ ನಿಲುವಿಗೇ ಅಂಟಿಕೊಂಡಿದೆ:

"ಪ್ರಸ್ತುತ ವಿಷಯಗಳಂತಹ ವಿಚಾರದಲ್ಲಿ ಬೆಲೆಗಳ ತುಲನೆ ಮಾಡುವುದು ಖಂಡಿತವಾಗಿಯೂ ಕೋರ್ಟ್‍ನ ಕೆಲಸವಲ್ಲ. ಈ ಅಂಶವನ್ನು ರಹಸ್ಯವಾಗಿ ಇಟ್ಟಿರುವುದರಿಂದ ಇದಕ್ಕಿಂತ ಹೆಚ್ಚಿನದೇನನ್ನೂ ನಾವು ಹೇಳುವಂತಿಲ್ಲ" ಎಂದಿದೆ.

5. ಒಲಾಂಡೆಯವರ ವಿವಾದಾತ್ಮಕ ಹೇಳಿಕೆಯನ್ನು ಹೇಗೆ ಕಡೆಗಣಿಸಲಾಗಿದೆ?

ಅನಿಲ್ ಅಂಬಾನಿಯವರ ಕಂಪನಿಯನ್ನು ಭಾರತದ ಆಫ್ ಸೆಟ್ ಪಾಲುದಾರ ಕಂಪನಿಯಾಗಿ ಆಯ್ದುಕೊಳ್ಳುವಂತೆ ಫ್ರಾನ್ಸ್ ಗೆ ಸೂಚಿಸಲಾಗಿತ್ತು ಎಂದು ಫ್ರಾನ್ಸ್‍ ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡೆ ನೀಡಿರುವ ಹೇಳಿಕೆಗೆ ಸುಪ್ರೀಂಕೋರ್ಟ್ ವಾಸ್ತವವಾಗಿ ಹೆಚ್ಚಿನ ಮಹತ್ವ ನೀಡಬೇಕಿತ್ತು. ಆದರೆ ಒಲಾಂಡೆ ಹೇಳಿಕೆಯ ಮಹತ್ವ ಅದರ ಅಂಶಗಳಿಗೆ ಬದಲಾಗಿ, ಅದು ಎಬ್ಬಿಸಿದ ವಿವಾದಕ್ಕಷ್ಟೇ ಸೀಮಿತವಾಯಿತು.

"ರಫೇಲ್ ಒಪ್ಪಂದದ ಬಗೆಗೆ ಸಂಶಯ ಸೃಷ್ಟಿಯಾದದ್ದು ಕೆಲ ಪತ್ರಿಕೆಗಳಿಗೆ ಒಲಾಂಡೆಯವರು ನೀಡಿದ್ದಾರೆ ಎನ್ನಲಾದ ಹೇಳಿಕೆಯ ಬಗ್ಗೆ ವರದಿ ಮಾಡಿದ ಬಳಿಕ" ಎಂದಷ್ಟೇ ತೀರ್ಪಿನಲ್ಲಿ ಉಲ್ಲೇಖವಿದೆ.

ಅನಿಲ್ ಅಂಬಾನಿಯವರ ರಿಲಯನ್ಸ್ ಸಮೂಹವನ್ನು ಭಾರತ ಆಫ್ ಸೆಟ್ ಪಾಲುದಾರ ಕಂಪನಿಯಾಗಿ ಮುಂದಿಟ್ಟಿತ್ತು ಎಂಬ ಬಗ್ಗೆ ತೀರ್ಪಿನಲ್ಲಿ, "ಭಾರತ ಸರ್ಕಾರ ಪಾಲುದಾರ ಕಂಪನಿಯ ಆಯ್ಕೆ ವಿಚಾರದಲ್ಲಿ ಫ್ರಾನ್ಸ್‍ ಗೆ ಯಾವ ಆಯ್ಕೆಯ ಅವಕಾಶವನ್ನೂ ನೀಡಲಿಲ್ಲ" ಎಂದು ಸಂದರ್ಶನದಲ್ಲಿ ಫ್ರಾನ್ಸ್ ಮಾಜಿ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ಎರಡೂ ಕಡೆಯವರೂ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ಈ ಬಗೆಯ ಕಾರಣ ನೀಡಿದ್ದರಲ್ಲಿ ಎರಡು ಪ್ರಮುಖ ಸಮಸ್ಯೆಗಳಿವೆ.

ಮೊದಲನೆಯದಾಗಿ, ರಫೇಲ್ ಒಪ್ಪಂದ ಘೋಷಣೆಯಾದ ತಕ್ಷಣ ಇದರ ಸಂಭಾವ್ಯ ಅವ್ಯವಹಾರಗಳ ಬಗ್ಗೆ ಪ್ರಶ್ನೆಗಳು ಎದ್ದಿದ್ದವು ಹಾಗೂ ವರ್ಷ ಬಳಿಕ ಅದು ದೊಡ್ಡದಾಗುತ್ತಾ ಹೋಯಿತು. ಒಲಾಂಡೆಯವರ ಅಭಿಪ್ರಾಯವು ಹಾಲಿ ಇದ್ದ ಆತಂಕವನ್ನು ಹೆಚ್ಚಿಸಿದೇ ವಿನಃ ಅದು ಕಿಡಿ ಹೊತ್ತಿಸಲಿಲ್ಲ.

ಎರಡನೆಯದಾಗಿ, ‘ದ ವೈರ್’ ಮತ್ತು ಇತರ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯಂತೆ ಎರಡೂ ಕಡೆಯವರು ಈ ಅಂಶವನ್ನು ಸಾರಾಸಗಟಾಗಿ ತಳ್ಳಿಹಾಕಿಲ್ಲ. ಪ್ರಸ್ತುತ ಇದ್ದ ನಿಯಮಾವಳಿಗಳನ್ನು ಪುನರುಚ್ಚರಿಸಿ ಫ್ರಾನ್ಸ್ ಮಾಜಿ ಅಧ್ಯಕ್ಷರ ಹೇಳಿಕೆಯನ್ನು ಅಲ್ಲಗಳೆಯಲಾಗಿದೆಯೇ ವಿನಃ ಅವರ ಆರೋಪಗಳನ್ನು ನೇರವಾಗಿ ಎಲ್ಲೂ ಅಲ್ಲಗಳೆದಿಲ್ಲ.

ಸಹಜವಾಗಿಯೇ ಸುಪ್ರೀಂಕೋರ್ಟ್ ದುರ್ಬಲವಾದ ಅಲ್ಲಗಳೆಯುವಿಕೆಯನ್ನು ಒಪ್ಪಿಕೊಂಡಿದ್ದು, ಇದು ಒಲಾಂಡೆಯವರು ಎತ್ತಿದ್ದ ಪ್ರಶ್ನೆಗಳನ್ನು ಸಮಗ್ರವಾಗಿ ಕಿತ್ತುಹಾಕಿವೆ ಎಂಬ ನಿರ್ಧಾರಕ್ಕೆ ಬಂದಿದೆ.

6. ಅಂಬಾನಿ ಸಹೋದರರ ವಿಚಾರದಲ್ಲಿ ಏಕೆ ಗೊಂದಲ?

ಕಳೆದ ಕೆಲ ತಿಂಗಳುಗಳಲ್ಲಿ ಕೇಳಿಬಂದ ಆರೋಪ ಮತ್ತು ಸ್ವಜನ ಪಕ್ಷಪಾತದ ಬಗ್ಗೆ ಉತ್ತರಿಸುವಾಗೆಲ್ಲ ಬಿಜೆಪಿ ಹಾಗೂ ಡಸಾಲ್ಟ್ ಏವಿಯೇಷನ್, ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗಿವೆ.

ಕೇಸರಿ ಪಕ್ಷದ ಮುಖಂಡರು ಮತ್ತು ಡಸಾಲ್ಟ್ ಸಿಇಒ ಎರಿಕ್ ಟ್ರ್ಯಾಪಿಯರ್, ಅನಿಲ್ ಅಂಬಾನಿಯವರ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಕಂಪನಿಯನ್ನು ರಫೇಲ್ ಒಪ್ಪಂದದಲ್ಲಿ ಆಫ್‍ಸೆಟ್ ಪಾಲುದಾರ ಕಂಪನಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದರು. 2012ರಲ್ಲಿ ಡಸಾಲ್ಟ್ ಕಂಪನಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಜತೆ ಮಾಡಿಕೊಂಡ ಪಾಲುದಾರಿಕೆಯನ್ನು ಮುಂದುವರಿಸಿದ್ದಾಗಿ ಸಮರ್ಥಿಸಿಕೊಂಡಿದ್ದರು. ಯುಪಿಯ ಆಡಳಿತಾವಧಿಯಲ್ಲಿ ಮಾಡಿಕೊಂಡ ಒಪ್ಪಂದವನ್ನೇ ಮುಂದುವರಿಸಲಾಗಿದೆ ಎಂಬ ಅರ್ಥ ಬರುವ ರೀತಿಯ ಮಾತುಗಳನ್ನು ಟ್ರ್ಯಾಪಿಯರ್ ಆಡಿದ್ದರು.

ಆದರೆ ಇದು ಸತ್ಯಕ್ಕೆ ದೂರ. ಈಗಾಗಲೇ ‘ದ ವೈರ್’ ಬೆಳಕಿಗೆ ತಂದಂತೆ ಈ ಇಬ್ಬರು ಸಹೋದರರ ವ್ಯವಹಾರವೇ ಪ್ರತ್ಯೇಕ. ಮುಖೇಶ್ ಅಂಬಾನಿ 2012ರಲ್ಲಿ ಡಸಾಲ್ಟ್ ಜತೆ ಮಾಡಿಕೊಂಡ ಒಪ್ಪಂದಕ್ಕೂ 2015ರಲ್ಲಿ ಅನಿಲ್ ಅಂಬಾನಿ ಕಂಪನಿ ಜತೆ ಡಸಾಲ್ಟ್ ಮಾಡಿಕೊಂಡ ಒಪ್ಪಂದಕ್ಕೂ ಯಾವ ಸಂಬಂಧವೂ ಇಲ್ಲ.

ಸುಪ್ರೀಂ ಕೋರ್ಟ್ ಕೂಡಾ ಈ ವಿಚಾರದಲ್ಲಿ ಗೊಂದಲಕ್ಕೀಡಾದಂತಿದೆ. ತೀರ್ಪಿನ 25ನೇ ಪುಟದಲ್ಲಿ ಹೇಳಿರುವಂತೆ, 2012ರಲ್ಲಿ 126 ಯುದ್ಧವಿಮಾನಗಳ ಖರೀದಿಗೆ ಮುಂದಾದಾಗ ಡಸಾಲ್ಟ್ ಕಂಪನಿ ಕನಿಷ್ಠ ಮೊತ್ತ ಬಿಡ್ ಮಾಡಿತ್ತು. ಇದು ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಇದು ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್‍ನಿಂದ ಪ್ರತ್ಯೇಕವಾಗಿದ್ದು, ಮೊದಲ ಕಂಪನಿಯನ್ನು ಮತ್ತೊಂದು ಉದ್ಯಮ ಸಮೂಹ “ಎಂದು ಕರೆಯಲಾಗಿದೆ.

ಮುಂದಿನ ಪುಟದಲ್ಲೇ ಡಸಾಲ್ಟ್ ಕಂಪನಿಯ ಪತ್ರಿಕಾ ಹೇಳಿಕೆಯನ್ನು ಉಲ್ಲೇಖಿಸಿದೆ. ಇದರಲ್ಲಿ ಅಂಬಾನಿಯವರ ರಿಲಯನ್ಸ್ ಏರೊಸ್ಟ್ರಕ್ಚರ್ ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡ ಕಂಪನಿಯಾಗಿದ್ದು, 2012ರಲ್ಲಿ ರಿಲಯನ್ಸ್ ಕಂಪನಿ ಮತ್ತು ಡಸಾಲ್ಟ್ ನಡುವೆ 2012ರಲ್ಲಿ ಮಾಡಿಕೊಂಡ ಒಪ್ಪಂದದನ್ವಯ ಮಾಡಿಕೊಂಡ ಹೊಂದಾಣಿಕೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆದರೆ ಈ ಅಂಶಗಳು ಶುದ್ಧ ಸುಳ್ಳು. ಅಂಬಾನಿ ನೇತೃತ್ವದ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ಎಂದೂ ರಿಲಯನ್ಸ್ ಏರೋಸ್ಟ್ರಕ್ಚರ್ ನ ಮಾತೃಸಂಸ್ಥೆಯಾಗಿರಲಿಲ್ಲ.

ಸುಪ್ರೀಂಕೋರ್ಟ್ ತೀರ್ಪು, ಮೂಲ ಅಂಶಗಳನ್ನು ನಿರ್ಲಕ್ಷಿಸಿದ್ದು, ಗೊಂದಲಕಾರಿಯಾಗಿ ಮಾಡಿದೆ ಹಾಗೂ ಆತಂಕಕಾರಿ ಎಂಬಂತೆ ಇದನ್ನು ಕಲಬೆರಕೆ ಮಾಡಿದೆ. ಡಸಾಲ್ಟ್ ಹಾಗೂ ಬಿಜೆಪಿ ನಾಯಕರು ನೀಡಿದ ಸತ್ಯಕ್ಕೆ ದೂರವಾದ ಅಂಶಗಳನ್ನು ನಂಬಿ ಈ ಪ್ರಮಾದ ಆಗಿದೆ. ಅಂತಿಮವಾಗಿ ಇದು ಯಾವುದೇ ಪಕ್ಷಕ್ಕೆ ವಾಣಿಜ್ಯ ಸ್ವಜನ ಪಕ್ಷಪಾತದ ಪ್ರಕರಣ ಎಂದು ನಿರ್ಧರಿಸಲು ಯಾವುದೇ ಅಂಶಗಳಿಲ್ಲ ಎಂದು ನಿರ್ಧಾರಕ್ಕೆ ಬಂದಿದೆ.

7. ಎಚ್‍ಎಎಲ್ ನಿಲುವನ್ನು ಹೇಗೆ ನಿರ್ಲಕ್ಷಿಸಲಾಗಿದೆ?

126 ಯುದ್ಧ ವಿಮಾನಗಳ ಖರೀದಿ ಒಪ್ಪಂದ ಸ್ಪಷ್ಟ ರೂಪ ಪಡೆಯದಿರಲು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೊನಾಟಿಕಲ್ಸ್ ಲಿಮಿಟೆಡ್ ತಡೆಯಾಗಿ ಪರಿಣಮಿಸಿದ್ದು, ಫ್ರಾನ್ಸ್ ಹಾಗೂ ಭಾರತ 36 ಯುದ್ಧವಿಮಾನಗಳ ಖರೀದಿಯ ಸಣ್ಣ ಒಪ್ಪಂದಕ್ಕೆ ಬರಲು ಕಾರಣವಾಯಿತು ಎಂದು ಮೋದಿ ಸರ್ಕಾರ ವಾದ ಮಂಡಿಸಿತ್ತು.

ಎಚ್‍ಎಎಲ್ ಮುಂದಿಟ್ಟಿದೆ ಎನ್ನಲಾದ ಅಧಿಕ ಮಾನವ ಗಂಟೆ, ಗುತ್ತಿಗೆ ಬದ್ಧತೆಗಳು ಹಾಗೂ ವಿಳಂಬ ಮತ್ತಿರರ ಸಮಸ್ಯೆಗಳ ಕಾರಣದಿಂದಾಗಿ 2015ರ ಮಾರ್ಚ್‍ನಲ್ಲಿ ಆರ್‍ಎಫ್‍ಪಿ ಹಿಂಪಡೆಯುವ ಪ್ರಕ್ರಿಯೆ ಆರಂಭವಾಯಿತು ಎಂದು ಕೋರ್ಟ್ ತೀರ್ಪು ಸಂಕ್ಷಿಪ್ತವಾಗಿ ಹೇಳಿದೆ.

"ವಾಸ್ತವ ಸತ್ಯಾಂಶವೆಂದರೆ, ಒಪ್ಪಂದ ಎಂದೂ ಜಾರಿಗೆ ಬರಲೇ ಇಲ್ಲ. ಆದರೆ ಪರಸ್ಪರ ಮಾತುಕತೆ ಕೊನೆಗೊಂಡಿತ್ತು. ಇದರಿಂದಾಗಿ ಆರ್‍

Writer - thewire.in ವಿಶೇಷ ವರದಿ

contributor

Editor - thewire.in ವಿಶೇಷ ವರದಿ

contributor

Similar News