ನಾನು ನಿರ್ದೇಶಕರ ನಟ - ಡಾ.ಶಿವರಾಜ್ ಕುಮಾರ್

Update: 2018-12-15 18:58 GMT

             ಶಶಿಕರ ಪಾತೂರು

ಅಭಿಮಾನಿಗಳು ಅಂದಮೇಲೆ ಅವರು ಸಹಜವಾಗಿಯೇ ದೊಡ್ಡಮಟ್ಟದಲ್ಲಿ ನಿರೀಕ್ಷೆ ಮಾಡಿರುತ್ತಾರೆ. ಹಾಗಾಗಿ ಅವರಿಂದ ಆಪಾದನೆ ಕೂಡ ಸಹಜವೇ. ಯಾಕೆಂದರೆ ಮಫ್ತಿಯಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಅಂತ ಇದ್ದಿದ್ದು ಚಿತ್ರ ನೋಡಿದಾಗ ಮುಖ್ಯ ಪಾತ್ರವನ್ನೇ ಮೀರಿಸುವಂತೆ ತೋರಿಸಲಾಗಿತ್ತು. ಇಂಥ ಸಂದರ್ಭದಲ್ಲಿ ನಾನಾ ನೀನಾ ಎಂಬ ಹಾಗೆ ಕಾಣಿಸಲಿರುವ ನಾಯಕರು ಎಂಬ ನಿರೀಕ್ಷೆ ನೀಡಿ ಚಿತ್ರ ತೋರಿಸಿದಾಗ ಎಲ್ಲೋ ನನಗೆ ಬಿಲ್ಡಪ್ ಕಡಿಮೆಯಾದಂತೆ ಕಂಡಿದ್ದರೆ ಅದು ಅಭಿಮಾನಿಗಳ ಸಹಜ ಅಭಿಪ್ರಾಯ..

ಚಿತ್ರರಂಗ ಪ್ರವೇಶಿಸುತ್ತಲೇ ಹ್ಯಾಟ್ರಿಕ್ ಹೀರೋವಾಗಿ ಗುರುತಿಸಿಕೊಂಡ ಶಿವರಾಜ್ ಕುಮಾರ್ ಮೂರು ದಶಕಗಳ ಬಳಿಕವೂ ಅಭಿಮಾನಿಗಳಲ್ಲಿ ಅದೇ ಕ್ರೇಜ್ ಉಳಿಸಿಕೊಂಡವರು. ಮಫ್ತಿ, ಟಗರು ಬಳಿಕ ಇದೀಗ ‘ದಿ ವಿಲನ್’ ಚಿತ್ರದ ಗೆಲುವು ಅವರಿಗೆ ಮತ್ತೊಮ್ಮೆ ಹ್ಯಾಟ್ರಿಕ್ ಪಟ್ಟ ನೀಡಿರುವುದೇ ಅದಕ್ಕೆ ಉದಾಹರಣೆ. ಇದು ಪ್ರೇಮ್ ಜೊತೆಗೆ ಶಿವಣ್ಣ ನಟಿಸಿರುವ ಮೂರನೇ ಚಿತ್ರವೂ ಹೌದು. ಆದರೆ ಚಿತ್ರ ಬಿಡುಗಡೆಯ ತಕ್ಷಣ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರ ಬಗ್ಗೆ ಮತ್ತು ಸದ್ಯದ ಕನ್ನಡ ಚಿತ್ರರಂಗದ ಪರಿಸ್ಥಿತಿಗಳ ಬಗ್ಗೆ ಡಾ. ಶಿವರಾಜ್ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.

‘ದಿ ವಿಲನ್’ ಚಿತ್ರ ತೆರೆಕಂಡ ಮೇಲೆ ನಟನಾಗಿ ತಮಗೆ ಅನಿಸಿದ್ದೇನು?

- ಖುಷಿಯಾಯಿತು. ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿದೆ ಮಾತ್ರವಲ್ಲ, ಒಳ್ಳೆಯ ರಿವ್ಯ ಕೂಡ ಪಡೆದಿದೆ.

ಆದರೆ ಚಿತ್ರ ನೋಡಿದಾಗ ನಿಮಗೆ ಪ್ರೇಮ್ ಮೊದಲು ಹೇಳಿದ ಕತೆಯನ್ನು ಬದಲಿಸಿದ್ದಾರೆ ಅನಿಸಿತಾ?

- ನಿಜ ಹೇಳೋದಾದ್ರೆ ನಾನು ವಿಲನ್ ಚಿತ್ರ ಇದುವರೆಗೂ ನೋಡಿಲ್ಲ. ಡಬ್ಬಿಂಗ್ ಮಾಡುವಾಗ ಮಾತ್ರ ನನ್ನ ಕ್ಯಾರೆಕ್ಟರ್ ನೋಡಿದ್ದೇನೆ. ಅಷ್ಟೇ. ನನಗೆ ಏನು ಪಾತ್ರ ನೀಡಿದ್ದಾರೋ ಅದನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ ಅನಿಸಿತು. ಉಳಿದಂತೆ ಕೆಲವೊಮ್ಮೆ ಮೇಕಿಂಗ್‌ನಲ್ಲಿ ಏನೋ ಸ್ವಲ್ಪ ಏರುಪೇರಾಗಿರಬಹುದು. ಶೂಟಿಂಗ್‌ನಲ್ಲಿ ಅದು ಸಾಮಾನ್ಯ ಆಗಿರುವ ಕಾರಣ ಅದನ್ನು ದೊಡ್ಡ ವಿಚಾರ ಮಾಡಲಾರೆ.

ಆದರೆ ನಿಮ್ಮ ಅಭಿಮಾನಿಗಳು ಸಿನೆಮಾದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ಅನ್ಯಾಯವಾಗಿದೆ ಎನ್ನುತ್ತಿದ್ದಾರಲ್ಲ?

- ಅಭಿಮಾನಿಗಳು ಅಂದಮೇಲೆ ಅವರು ಸಹಜವಾಗಿಯೇ ದೊಡ್ಡಮಟ್ಟದಲ್ಲಿ ನಿರೀಕ್ಷೆ ಮಾಡಿರುತ್ತಾರೆ. ಹಾಗಾಗಿ ಅವರಿಂದ ಆಪಾದನೆ ಕೂಡ ಸಹಜವೇ. ಯಾಕೆಂದರೆ ಮಫ್ತಿಯಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಅಂತ ಇದ್ದಿದ್ದು ಚಿತ್ರ ನೋಡಿದಾಗ ಮುಖ್ಯ ಪಾತ್ರವನ್ನೇ ಮೀರಿಸುವಂತೆ ತೋರಿಸಲಾಗಿತ್ತು. ಇಂಥ ಸಂದರ್ಭದಲ್ಲಿ ನಾನಾ ನೀನಾ ಎಂಬ ಹಾಗೆ ಕಾಣಿಸಲಿರುವ ನಾಯಕರು ಎಂಬ ನಿರೀಕ್ಷೆ ನೀಡಿ ಚಿತ್ರ ತೋರಿಸಿದಾಗ ಎಲ್ಲೋ ನನಗೆ ಬಿಲ್ಡಪ್ ಕಡಿಮೆಯಾದಂತೆ ಕಂಡಿದ್ದರೆ ಅದು ಅಭಿಮಾನಿಗಳ ಸಹಜ ಅಭಿಪ್ರಾಯ. ಅವರಿಗೆ ನಿರಾಶೆಯಾಗಿದ್ದರೆ ನಾನು ಕ್ಷಮೆ ಕೇಳಬಹುದೇ ಹೊರತು. ಅದರಿಂದ ನನಗೆ ನೋವಾಗಿಲ್ಲ.

ಈ ಹಿಂದೆ ಕೋದಂಡರಾಮದ ಸಂದರ್ಭದಲ್ಲಿಯೂ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಒಟ್ಟಿನಲ್ಲಿ ಅಭಿಮಾನಿಗಳ ನಿರೀಕ್ಷೆ ನಿಮಗೆ ಸವಾಲು ಅನಿಸುತ್ತಿದೆಯಾ?

- ಹಾಗೇನಿಲ್ಲ. ಕೋದಂಡರಾಮದಲ್ಲಿ ರವಿಸರ್ ನಿರ್ದೇಶಕರು. ಅವರು ನನಗಿಂತ ವಯಸ್ಸಿನಲ್ಲಿಯೂ, ಇಂಡಸ್ಟ್ರಿಯಲ್ಲಿಯೂ ಒಂದು ವರ್ಷ ಸೀನಿಯರು. ಅವರೇ ಡೈರೆಕ್ಟರ್ ಬೇರೆ. ನಾವು ಕತೆ ಕೇಳಿ ಸಿನೆಮಾ ಒಪ್ಪಿದ ಮೇಲೆ ನಟಿಸುವುದು ನಮ್ಮ ಜವಾಬ್ದಾರಿ. ಎಲ್ಲಕ್ಕಿಂತ ಮುಖ್ಯವಾಗಿ ನಿರ್ದೇಶಕರ ವಿಷನ್ ಏನು ಎನ್ನುವುದು ನಮಗೆ ತಿಳಿದಿರಬೇಕು ಎಂದೇನಿಲ್ಲ. ಹಾಗಾಗಿ ಅವರ ಕನಸಿನ ಪಾತ್ರಕ್ಕೆ ನಾನು ಬದ್ಧನಾಗಿರುತ್ತೇನೆ. ನನಗೆ ಆ ಚಿತ್ರವೂ ಇಷ್ಟವಾಗಿತ್ತು. ಅಷ್ಟು ನಂಬಿಕೆ ಇಲ್ಲ ಅಂದ್ರೆ ನಟಿಸೋದಕ್ಕೇನೇ ಹೋಗಬಾರದು.

ಮುಂದೆ ನೀವು ಸ್ಟಾರ್ ಕಾಂಬಿನೇಶನ್ ಚಿತ್ರಗಳಲ್ಲಿ ನಟಿಸಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೀರಂತೆ?

- ಸುಳ್ಳು. ಒಳ್ಳೆಯ ಪಾತ್ರಗಳು ಬಂದರೆ ರವಿ ಸರ್ ಅಗಲೀ, ಸುದೀಪ್ ಅವರೊಂದಿಗಾಗಲೀ ನಟಿಸೋದಕ್ಕೆ ಖಂಡಿತವಾಗಿಯೂ ಒಪ್ಪುತ್ತೇನೆ. ಒಂದು ವೇಳೆ ಇದೇ ಪ್ರೇಮ್ ವಿಲನ್ ಚಿತ್ರದ ಎರಡನೇ ಪಾರ್ಟ್ ತೆಗೆಯೋದಾದ್ರೆ, ಆ ಕತೆ ನನಗೆ ಇಷ್ಟವಾದರೆ ಮತ್ತೆ ಇದೇ ಕಾಂಬಿನೇಶನಲ್ಲೇ ಚಿತ್ರ ಮಾಡುತ್ತೇನೆ.

ಗಾಸಿಪ್ ಎನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಹೀರೋಗಳಿಗೂ ಇರುವಂಥದ್ದೇ. ಚಿತ್ರರಂಗ ಎಂದಮೇಲೆ ಗಾಸಿಪ್ ಕೂಡ ಅದರದೊಂದು ಭಾಗ ಎಂದುಕೊಂಡರಷ್ಟೇ ನೆಮ್ಮದಿಯಾಗಿ ನಟಿಸಲು ಸಾಧ್ಯ. ನಾವು ಎಷ್ಟೇ ಸತ್ಯವಂತರಾಗಿದ್ದರೂ, ನಮ್ಮ ಬಗ್ಗೆ ಕೂಡ ಅಪವಾದಗಳು ಹರಡಬಾರದು ಎಂದೇನಿಲ್ಲ. ಆದರೆ ಖಚಿತವಾಗಿ ಒಂದಲ್ಲ ಒಂದು ದಿನ ಸತ್ಯ ಹೊರಗೆ ಬಂದೇ ಬರುತ್ತದೆ. ಚಿತ್ರರಂಗವೇ ನಮ್ಮ ಕುಟುಂಬ ಎಂಬಂತೆ ಬೆಳೆದವರು ನಾವು. ನಮ್ಮ ಫ್ಯಾಮಿಲಿಯಲ್ಲಿ ಕಲೆಗೆ ಯಾವತ್ತಿಗೂ ಪ್ರೋತ್ಸಾಹ ಇರುವಂಥದ್ದೇ.

ಇದೇ ವಿಚಾರದಲ್ಲಿ ಇಬ್ಬರ ಅಭಿಮಾನಿಗಳ ನಡುವೆ ಮಾತುಕತೆಗಳು ನಡೆದಿವೆ. ಅಭಿಮಾನಿಗಳು ಜಗಳವಾಡಿದರೆ ತಾಯಾಣೆ ಥಿಯೇಟರ್ ರೌಂಡಪ್ ಮಾಡಲ್ಲ ಎಂದಿದ್ದಿರಿ. ಮುಂದೇನು ಮಾಡುತ್ತೀರಿ?

- ನೀವೇ ಹೇಳಿದಂತೆ ಅಭಿಮಾನಿಗಳ ನಡುವೆ ನಡೆದಿದ್ದು ಮಾತುಗಳಷ್ಟೇ. ಹಾಗಾಗಿ ಅದನ್ನು ಜಗಳವೆಂದು ನಾನು ಕೂಡ ಪರಿಗಣಿಸೋದಿಲ್ಲ. ಮಾತ್ರವಲ್ಲ, ಕುಟುಂಬ ಸಮೇತ ಬಂದ ಪ್ರೇಕ್ಷಕರು ಚಿತ್ರದ ಬಗ್ಗೆ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಮೆಚ್ಚಿದ್ದಾರೆ. ಕೆಲವರು ಅಭಿಮಾನಿಗಳು ಅವರಿಗೆ ಏನು ಮಿಸ್ಟೇಕ್ ಕಂಡಿದೆ ಅನ್ನೋದನ್ನೂ ನನಗೆ ಹೇಳಿದ್ದಾರೆ. ಎಲ್ಲಕ್ಕಿಂತ ಪ್ರಮುಖ ವಿಚಾರ ಅಂದರೆ ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಫೈನಲಿ ನಮಗೆಲ್ಲ ಬೇಕಾಗಿರುವುದು ಅದೇ ತಾನೇ..? ಹಾಗಾಗಿ ಚಿತ್ರವನ್ನು ಯಶಸ್ವಿಗೊಳಿಸಿದ ಪ್ರೇಕ್ಷಕರ ಮುಂದೆ ಹೋಗಲು ನನಗೆ ಯಾವುದೇ ಅಡ್ಡಿಯಿಲ್ಲ. ಆದರೆ ಪ್ರಾಣಿಬಲಿಯಂಥ ಘಟನೆಗಳು ಮುಂದೆಂದೂ ನಡೆಯಬಾರದು ಎಂದು ಕೈಮುಗಿದು ವಿನಂತಿಸುತ್ತೇನೆ.

ಚಿತ್ರದಲ್ಲಿ ನೀವು ವಿಷ್ಣುವರ್ಧನ್ ಶೈಲಿಯಲ್ಲಿ ‘ಮೇಷ್ಟ್ರೇ’ ಎಂದು ಹೇಳುವ ಸಂಭಾಷಣೆ ಇದೆ ಎಂದಿದ್ದೀರಿ. ಆ ಪೋರ್ಶನ್ ಕಟ್ ಮಾಡಲಾಗಿದೆಯೇ?

- ಇಲ್ಲವಲ್ಲ? ನಾಗರ ಹಾವು ಚಿತ್ರದಲ್ಲಿ ವಿಷ್ಣು ಸರ್ ಹೇಗೆ ‘ಮೇಷ್ಟ್ರೇ’ ಎಂದು ಕೂಗಿದ್ರೋ ಅದೇ ಶೈಲಿನಲ್ಲಿ ಕೂಗಿದ್ದೀನಿ ನೋಡಿ. ಡಬ್ಬಿಂಗ್‌ನಲ್ಲಿಯೂ ನನಗೆ ಅದೇ ವಾಯ್ಸಿ ಸಿಂಕ್ ಆದಹಾಗಿತ್ತು. ನಾನು ಎಂಜಾಯ್ ಮಾಡಿದಂಥ ದೃಶ್ಯಗಳಲ್ಲಿ ಅದೂ ಒಂದು.

ಮೀಟು ಅಭಿಯಾನದ ಅಡಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಏನು ಹೇಳುತ್ತೀರಿ?

- ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ, ಆ ಘಟನೆಯ ಬಗ್ಗೆ ಮಾತನಾಡೋದು ತಪ್ಪಾಗುತ್ತದೆ. ಆದರೆ ಸಾಧ್ಯವಾದಷ್ಟು ಅಂಥ ಘಟನೆಗಳು ನಡೆದರೆ ಕೋರ್ಟ್ ತನಕ ಹೋಗುವುದಕ್ಕಿಂತ ನಾವಾಗಿ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ಇಲ್ಲಿ ಯಾರನ್ನು ಕೂಡ ವೈಯಕ್ತಿಕವಾಗಿ ವಿಮರ್ಶಿಸೋದು ತಪ್ಪು. ಮೂರನೆಯವರಾಗಿ ಆ ಹಕ್ಕು ಕೂಡ ನಮಗಿಲ್ಲ. ಅದರಲ್ಲಿಯೂ ಈ ಘಟನೆಯ ಬಗ್ಗೆ ಚಿತ್ರರಂಗದವರ ಅಭಿಪ್ರಾಯ ಕೇಳುವುದು ವ್ಯರ್ಥ. ಯಾಕೆಂದರೆ ನಾವು ಚಿತ್ರೋದ್ಯಮದವರು ಒಬ್ಬೊಬ್ಬರ ಕಡೆ ಪಕ್ಷಪಾತದ ಧೋರಣೆ ತಾಳಬಹುದು. ಹಾಗಾಗಿ ಮಾಧ್ಯಮದವರು ತಮ್ಮದೇ ತನಿಖಾ ಹಾದಿಯಿಂದ ಘಟನೆಯನ್ನು ಗಮನಿಸಿದ್ದರೆ ಚೆನ್ನಾಗಿರುತ್ತಿತ್ತು. ಈಗ ನ್ಯಾಯಾಲಯದ ತೀರ್ಪು ಹೊರಗಿಡುವ ಸತ್ಯಕ್ಕಾಗಿ ಕಾಯೋಣ.

ಚಿತ್ರರಂಗ ಎಂದರೆ ಹೆಣ್ಣುಮಕ್ಕಳಿಗೆ ಗಾಸಿಪ್ ಖಚಿತ ಎಂಬ ಕಾರಣದಿಂದಾಗಿಯೇ ಡಾ.ರಾಜ್ ಕುಟುಂಬದ ಹೆಣ್ಣುಮಕ್ಕಳು ಚಿತ್ರರಂಗ ಪ್ರವೇಶಿಸಿಲ್ಲ ಎನ್ನಬಹುದೇ?

- ತಪ್ಪು. ಗಾಸಿಪ್ ಎನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಹೀರೋಗಳಿಗೂ ಇರುವಂಥದ್ದೇ. ಚಿತ್ರರಂಗ ಎಂದಮೇಲೆ ಗಾಸಿಪ್ ಕೂಡ ಅದರದೊಂದು ಭಾಗ ಎಂದುಕೊಂಡರಷ್ಟೇ ನೆಮ್ಮದಿಯಾಗಿ ನಟಿಸಲು ಸಾಧ್ಯ. ನಾವು ಎಷ್ಟೇ ಸತ್ಯವಂತರಾಗಿದ್ದರೂ, ನಮ್ಮ ಬಗ್ಗೆ ಕೂಡ ಅಪವಾದಗಳು ಹರಡಬಾರದು ಎಂದೇನಿಲ್ಲ. ಆದರೆ ಖಚಿತವಾಗಿ ಒಂದಲ್ಲ ಒಂದು ದಿನ ಸತ್ಯ ಹೊರಗೆ ಬಂದೇ ಬರುತ್ತದೆ. ಚಿತ್ರರಂಗವೇ ನಮ್ಮ ಕುಟುಂಬ ಎಂಬಂತೆ ಬೆಳೆದವರು ನಾವು. ನಮ್ಮ ಫ್ಯಾಮಿಲಿಯಲ್ಲಿ ಕಲೆಗೆ ಯಾವತ್ತಿಗೂ ಪ್ರೋತ್ಸಾಹ ಇರುವಂಥದ್ದೇ. ಆದರೆ ಅವರಿಗೂ ನಟಿಸುವ ಆಸಕ್ತಿ ಇರಬೇಕಲ್ಲ? ನನ್ನ ಚಿಕ್ಕಮಗಳು ಬಾಲನಟಿಯಾಗಿ ನಟಿಸಿದ್ದಳು. ಈಗ ಡೈರೆಕ್ಷನ್ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿದ್ದಾಳೆ. ಅದೆಲ್ಲ ಅವರವರ ಆಯ್ಕೆಗೆ ಬಿಟ್ಟಿದ್ದು.

ನಿಜ ಹೇಳೋದಾದ್ರೆ ನಾನು ವಿಲನ್ ಚಿತ್ರ ಇದುವರೆಗೂ ನೋಡಿಲ್ಲ. ಡಬ್ಬಿಂಗ್ ಮಾಡುವಾಗ ಮಾತ್ರ ನನ್ನ ಕ್ಯಾರೆಕ್ಟರ್ ನೋಡಿದ್ದೇನೆ. ಅಷ್ಟೇ. ನನಗೆ ಏನು ಪಾತ್ರ ನೀಡಿದ್ದಾರೋ ಅದನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ ಅನಿಸಿತು. ಉಳಿದಂತೆ ಕೆಲವೊಮ್ಮೆ ಮೇಕಿಂಗ್‌ನಲ್ಲಿ ಏನೋ ಸ್ವಲ್ಪ ಏರುಪೇರಾಗಿರಬಹುದು. ಶೂಟಿಂಗ್‌ನಲ್ಲಿ ಅದು ಸಾಮಾನ್ಯ ಆಗಿರುವ ಕಾರಣ ಅದನ್ನು ದೊಡ್ಡ ವಿಚಾರ ಮಾಡಲಾರೆ.

ನಿಮಗೆ ಮರೆಯಲಾಗದ ದೀಪಾವಳಿಯ ಬಗ್ಗೆ ಹೇಳಿ.

- ದೀಪಾವಳಿ ಬಗ್ಗೆ ಹೇಳುವುದಾದರೆ ಖಂಡಿತಾ ಬಾಲ್ಯದ ದೀಪಾವಳಿಯನ್ನು ನನ್ನಿಂದ ಮರೆಯಲಾಗದು. ಅದರಲ್ಲಿಯೂ ಅಪ್ಪಾಜಿ ಪ್ಲವರ್ ಪಾಟ್ ಹಚ್ಚೋದರಿಂದ ಹಿಡಿದು ಪ್ರತಿಯೊಂದರಲ್ಲಿಯೂ ಪಾಲ್ಗೊಂಡು ಖುದ್ದಾಗಿ ಎಂಜಾಯ್ ಮಾಡುತ್ತಿದ್ದರು. ಈಗ ನನಗೆ ಆ ನೆನಪುಗಳು ಬಿಟ್ಟರೆ ದೀಪಾವಳಿಗೆ ಹೊಸ ಸಿನೆಮಾ ನೀಡುವುದೇ ಹಬ್ಬ. ಮುಂದಿನ ಚಿತ್ರ ‘ಕವಚ’ ಭರ್ಜರಿಯಾಗಿ ತಯಾರಾಗಿ ನಿಂತಿದೆ. ಮಫ್ತಿಯಲ್ಲಿ ನನ್ನ ಕಣ್ಣಿನ ಅಭಿನಯ ಮೆಚ್ಚಿದ ಅಭಿಮಾನಿಗಳು ಈ ಚಿತ್ರದಲ್ಲಿ ಕಣ್ಣಿಲ್ಲದ ನನ್ನ ಅಭಿನಯ ಕಂಡು ಏನು ಹೇಳಲಿದ್ದಾರೆ ಎಂದು ಆಸಕ್ತಿಯಿಂದ ಕಾಯುತ್ತಿದ್ದೇನೆ.

ನಿಮಗೆ ಇತ್ತೀಚೆಗೆ ನೋಡಿ ಇಷ್ಟವಾದಂಥ ಯಾವುದೇ ಭಾಷೆಯ ಒಂದು ಸಿನೆಮಾ ಯಾವುದು?

- ಅದು ಒಂದು ಹಿಂದಿ ಸಿನೆಮಾ. ವಿಲನ್ ರಿಲೀಸಾದ ದಿನವೇ ಬಿಡುಗಡೆಯಾಗಿತ್ತು. ಚಿತ್ರದ ಹೆಸರು ‘ಬದಾಯಿ ಹೊ’. ಅದು ತುಂಬಾನೇ ಇಷ್ಟವಾಗಿತ್ತು. ಆಯುಶ್ಮಾನ್ ಖುರಾನ ಚಿತ್ರದ ಹೀರೋ. ಅದರಲ್ಲಿ ಹೀರೋ, ಹೀರೋಯಿನ್ ಎನ್ನುವುದಕ್ಕಿಂತಲೂ ಒಟ್ಟು ಕತೆಯಲ್ಲಿರುವ ಫ್ಯಾಮಿಲಿ ಸೆಂಟಿಮೆಂಟ್ಸ್ ತುಂಬ ಟಚ್ಚಾಗುತ್ತವೆ. ಕುಟುಂಬದೊಳಗಿನ ಸಂಬಂಧಗಳನ್ನು ಚೆನ್ನಾಗಿ ತೋರಿಸಿರುವಂಥ ಚಿತ್ರ ಅದು.

ಹೃದಯಾಘಾತವಾಗಿ ಸರಿಯಾಗಿ ಎರಡು ವರ್ಷಕ್ಕೆ ಮತ್ತೆ ಆಸ್ಪತ್ರೆಗೆ ದಾಖಲಾದ ಬಗ್ಗೆ?

- ಆ ಹೃದಯಾಘಾತಕ್ಕೂ ಇತ್ತೀಚೆಗೆ ದಾಖಲಾಗಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ಇದು ವೈರಲ್ ಫಿವರ್ ಅಷ್ಟೇ. ಈಗ ತುಂಬ ಆರೋಗ್ಯವಾಗಿದ್ದೇನೆ. ಹಾಗೆ ಪತ್ರಿಕೆಯ ಓದುಗರಿಗೆ ಮತ್ತು ರಾಜ್ಯದ ಎಲ್ಲರಿಗೂ ಆರೋಗ್ಯಪೂರ್ಣ ದೀಪಾವಳಿಯ ಶುಭಹಾರೈಸುತ್ತೇನೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News

ಗಾಂಧೀಜಿ