ದ್ವಿತೀಯ ಟೆಸ್ಟ್: ಭಾರತ 283 ರನ್‌ಗೆ ಆಲೌಟ್

Update: 2018-12-16 06:07 GMT

ಪರ್ತ್, ಡಿ.16: ಸ್ಪಿನ್ನರ್ ನಥಾನ್ ಲಿಯೊನ್, ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಹೆಝಲ್‌ವುಡ್ ಸಾಹಸದ ಸಹಾಯದಿಂದ ಆತಿಥೇಯ ಆಸ್ಟ್ರೇಲಿಯ ತಂಡ ಭಾರತವನ್ನು ಮೊದಲ ಇನಿಂಗ್ಸ್‌ನಲ್ಲಿ 283 ರನ್‌ಗೆ ಆಲೌಟ್ ಮಾಡಿದೆ. 43 ರನ್ ಇನಿಂಗ್ಸ್ ಮುನ್ನಡೆ ಸಂಪಾದಿಸಿದೆ.

ಮೂರನೆ ದಿನವಾದ ರವಿವಾರ 4 ವಿಕೆಟ್ ನಷ್ಟಕ್ಕೆ 172 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ ನಿನ್ನೆಯ ಮೊತ್ತಕ್ಕೆ 111 ರನ್ ಗಳಿಸಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು.

ನಾಯಕ ವಿರಾಟ್ ಕೊಹ್ಲಿ(123)ಸರ್ವಾಧಿಕ ಸ್ಕೋರ್ ಕಲೆ ಹಾಕಿದರು. ಉಪ ನಾಯಕ ಅಜಿಂಕ್ಯ ರಹಾನೆ(51)ನಿನ್ನೆಯ ಸ್ಕೋರ್‌ಗೆ ಒಂದೂ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು.

 ವಿಕೆಟ್‌ಕೀಪರ್-ದಾಂಡಿಗ ರಿಷಭ್ ಪಂತ್(36)ಒಂದಷ್ಟು ಹೋರಾಟ ನೀಡಿದರು. ಅವರಿಗೆ ಕೆಳ ಕ್ರಮಾಂಕದ ಆಟಗಾರರಿಗೆ ಸೂಕ್ತ ಬೆಂಬಲ ಸಿಗಲಿಲ್ಲ. ಆಸೀಸ್‌ನ ಸ್ಪಿನ್ನರ್ ಲಿಯೊನ್ ಇಂದು ಐದು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಕಡಿವಾಣ ಹಾಕಿದರು. ಸ್ಟಾರ್ಕ್(2-79) ಹಾಗೂ ಹೆಝಲ್‌ವುಡ್(2-66)ತಲಾ ಎರಡು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News