ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

Update: 2018-12-16 17:00 GMT

ಬೆಂಗಳೂರು, ಡಿ.16: ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಇಲ್ಲಿನ ಕೊತ್ತನೂರು ಠಾಣಾ ಪೊಲೀಸರು 1.100 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ನಗರದ ಜಕ್ಕೂರಿನ ಮುರಳಿ (21), ಬಾಲಚಂದ್ರ (20), ವೆಂಕಟೇಶಪುರದ ದಿನೇಶ್ (19) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 32 ಸಾವಿರ ಮೌಲ್ಯದ 1 ಕೆಜಿ 100 ಗ್ರಾಂ ಗಾಂಜಾ ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.

ಬಾಗಲೂರು ಮುಖ್ಯರಸ್ತೆಯ ಗೌತಮ್ ಶಾಲೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸೆರೆಸಿಕ್ಕಿದ್ದು, ಬೆಂಗಳೂರು ಹೊರವಲಯದಿಂದ ಗಾಂಜಾ ತಂದು ಚಿಕ್ಕ ಪಾಕೆಟ್‌ಗಳಾಗಿ ಕಟ್ಟಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News