'ಗಾರ್ಡಿಯನ್ ಆಫ್ ಹಾರ್ಟ್ಸ್' ಪುಸ್ತಕ ಲೋಕಾರ್ಪಣೆ

Update: 2018-12-16 17:07 GMT

ಬೆಂಗಳೂರು, ಡಿ.16: ವೈದ್ಯ ಡಾ.ಬಿ.ಗಣೇಶ್ ಬಾಳಿಗಾ ಅವರ ಬದುಕು ಹಾಗೂ ವೃತ್ತಿ ಜೀವನ ಕುರಿತ ಪ್ರೊ.ಎನ್.ದಯಾನಂದ ಅವರು ಬರೆದಿರುವ ‘ಗಾರ್ಡಿಯನ್ ಆಫ್ ಹಾರ್ಟ್ಸ್’ ಪುಸ್ತಕವನ್ನು ಇಂದಿಲ್ಲಿ ಲೋಕಾರ್ಪಣೆ ಮಾಡಲಾಯಿತು.

ಖ್ಯಾತ ನೇತ್ರತಜ್ಞ ಡಾ.ಸಿ.ಆರ್.ಕಾಮತ್ ಹಾಗೂ ಚಿಂತಕ ಪ್ರೊ.ಸಿ.ಎನ್.ರಾಮಚಂದ್ರನ್ ಕೃತಿಯನ್ನು ಬಿಡುಗಡೆ ಮಾಡಿದರು. ಕೃತಿಯು ಬಾಳಿಗಾ ಅವರು ವೃತ್ತಿಯಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ದೃಷ್ಟಿಕೋನದಿಂದ ಕೆಲಸ ನಿರ್ವಹಿಸಿರುವುದು, ಹೃದಯ ರೋಗಗಳು ಸಾಮಾಜಿಕ ಸ್ತರದಲ್ಲಿ ವ್ಯಕ್ತಿ ಹಾಗೂ ಕುಟುಂಬಗಳಿಗೆ ಉಂಟು ಮಾಡುವ ಆಘಾತವನ್ನು ಕಂಡು ಅತ್ಯಂತ ಕಳಕಳಿಯಿಂದ ಅವರು ತಮ್ಮ ಸೇವೆಯನ್ನು ಸಲ್ಲಿಸಿರುವ ಕುರಿತು ಕೃತಿಯು ದಾಖಲಿಸಿದೆ.

ಡಾ.ಬಾಳಿಗಾ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಬದುಕು ಕಟ್ಟಿಕೊಳ್ಳಲು ಶ್ರಮ ಪಡಬೇಕಾಯಿತು. ಆದರೆ, ಅನಂತರ ಅವರು ಒಳ್ಳೆಯ ಕೈಗುಣದ ವೈದ್ಯರಾಗಿ ರೂಪಗೊಂಡರು. ಅವರ ವೃತ್ತಿ ಜೀವನದ 30 ವರ್ಷಗಳಲ್ಲಿ ಪರಿಚಯವಾದ ವಿವರ, ಅವರು ಕೈಗೊಂಡ ವೈದ್ಯಕೀಯ ಸೇವೆ, ಉಂಟಾಗಿದ್ದ ಸಂದಿಗ್ಧತೆ ಹಾಗು ರೋಗಿಯ ಉಲ್ಬಣ ಸ್ಥಿತಿ ಉಂಟು ಮಾಡಿದ ನೋವು ಎಲ್ಲವೂ ಪುಸ್ತಕದ ಪುಟಗಳಲ್ಲಿ ದಾಖಲಾಗಿದೆ.

ಗಣೇಶ ಬಾಳಿಗಾ ಅವರು ತಮ್ಮ ಬದುಕಿನಲ್ಲಿ ಕೈಗೊಂಡಿರುವ, ಜನತೆಯ ಹೃದಯದ ಆರೋಗ್ಯವನ್ನು ಉತ್ತಮ ಪಡಿಸುವ ಕಾರ್ಯಗಳು ಹಾಗೂ ವೈದ್ಯಕೀಯ ವೃತ್ತಿಯ ಪ್ರಥಮ ಕರ್ತವ್ಯ ಎಂದು ಪುಸ್ತಕ ಬರೆಯಲು ಪ್ರೇರಣೆಯಾಗಿದೆ. ಜೀವವನ್ನು ಕಾಪಾಡುವ ವೈದ್ಯಕೀಯ ಕ್ರಿಯೆ ವಿಶೇಷ ಪರಿಣಿತಿಯಿಂದ ಕೂಡಿದೆ ಎಂದು ಲೇಖಕ ಪ್ರೊ.ಎನ್.ದಯಾನಂದ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News