ಮುಂದಿನ ವರ್ಷದಿಂದ ಮದೀನಾದಲ್ಲಿ 41 ವಿಧಗಳ ಉದ್ಯೋಗಗಳು ಸೌದಿಗಳಿಗೇ ಮೀಸಲು

Update: 2018-12-17 11:16 GMT

ಜಿದ್ದಾ, ಡಿ. 17: ಮದೀನಾದಲ್ಲಿ 41 ವಿಧಗಳ ಉದ್ಯೋಗಗಳನ್ನು ಸೌದಿ ಪುರುಷರು ಮತ್ತು ಮಹಿಳೆಯರಿಗೆ ಮಾತ್ರ ಮೀಸಲಿರಿಸುವ ಆದೇಶವೊಂದನ್ನು ಸೌದಿ ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವ ಅಹ್ಮದ್ ಬಿನ್ ಸುಲೈಮಾನ್ ಅಲ್-ರಝಿ ಹೊರಡಿಸಿದ್ದಾರೆ. ಈ ಉದ್ಯೋಗಗಳು ಎನ್‍ಜಿಒ, ರಿಟೇಲ್, ಹಾಸ್ಪಿಟಾಲಿಟಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ್ದಾಗಿವೆ.

ಸರಕಾರೇತರ ಸಂಘಟನೆಗಳಲ್ಲಿ ಈ ಆದೇಶ ಎ. 7, 2019ರಿಂದ ಹಾಗೂ ಹಾಸ್ಪಿಟಾಲಿಟಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಜೂ. 10ರಿಂದ  ಜಾರಿಗೊಳ್ಳಲಿದೆ.

ಸೌದಿಗಳಿಗೆಂದೇ ಮೀಸಲಿರಿಸಲಾಗಿರುವ ಉದ್ಯೋಗಗಳು ಇಂತಿವೆ

ಲಘು ವಾಹನ ಚಾಲಕ, ಆರ್ಡರ್ ಪಡೆಯುವ ಉದ್ಯೋಗ, ಸುರಕ್ಷತಾ ಮತ್ತು ಭದ್ರತಾ ಅಧಿಕಾರಿ, ಆಹಾರ ಸೇವೆ ಉದ್ಯೋಗಿ, ಟೆಲಿಫೋನ್ ಆಪರೇಟರ್, ಡಾಟಾ ಎಂಟ್ರಿ ಕ್ಲರ್ಕ್, ಅಡ್ಮಿನಿಸ್ಟ್ರೇಟಿವ್ ಕ್ಲರ್ಕ್, ಕಾರ್ಯದರ್ಶಿ,  ಜನರಲ್ ಸರ್ವಿಸ್ ಸುಪರ್‍ವೈಸರ್, ರೂಂ ಸರ್ವಿಸ್ ಸುಪರ್‍ವೈಸರ್, ಮೈಂಟನೆನ್ಸ್ ಸುಪರ್‍ವೈಸರ್, ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ಸುಪರ್‍ವೈಸರ್, ಸೇಫ್ಟಿ ಆ್ಯಂಡ್ ಸೆಕ್ಯುರಿಟಿ ಸೂಪರ್‍ವೈಸರ್, ಪ್ರವಾಸೋದ್ಯಮ ಕಾರ್ಯಕ್ರಮಗಳ ಸುಪರ್‍ವೈಸರ್, ಫ್ರಂಟ್ ಆಫೀಸ್ ಸುಪರ್‍ವೈಸರ್, ಟೆಲಿಫೋನ್ ಆಪರೇಟರ್ಸ್ ಸುಪರ್‍ವೈಸರ್, ಸೆಕ್ಯುರಿಟಿ ಆ್ಯಂಡ್ ಸೇಫ್ಟಿ ಡೈರೆಕ್ಟರ್,  ಆ್ಯಕ್ಟಿಂಗ್ ಡೈರೆಕ್ಟರ್, ನಿರ್ವಹಣಾ ಮ್ಯಾನೇಜರ್, ರೂಂ ಸರ್ವಿಸ್ ಮ್ಯಾನೇಜರ್, ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ಪ್ರತಿನಿಧಿ, ಡೈರೆಕ್ಟರ್ ಆಫ್ ಟೂರಿಸಂ ಪ್ರೊಗ್ರಾಮ್ಸ್ , ಡೈರೆಕ್ಟರ್ ಆಫ್ ಫ್ರಂಟ್ ಆಫೀಸ್ ಹಾಗೂ ಡೈರೆಕ್ಟರ್ ಆಫ್ ಸ್ಟಾಫ್ ರಿಲೇಶನ್ಸ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News