ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣ: ಐವರ ಬಂಧನ
Update: 2018-12-17 20:18 IST
ಬೆಂಗಳೂರು, ಡಿ.17: ಮೈಲಸಂದ್ರದ ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ನಿವಾಸಿಗಳಾದ ಆದರ್ಶ, ಕಾರ್ತಿಕ್, ಸುನೀಲ್, ನಂಜಪ್ಪಹಾಗೂ ಪವನ್ ಎಂಬುವರು ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಡಿಸೆಂಬರ್ 11 ರಂದು ಕಾರ್ಯಕ್ರಮ ಆಯೋಜಿಸಿರುವ ನೆಪದಲ್ಲಿ ರೌಡಿಶೀಟರ್ ನಾಗರಾಜು ಅನ್ನು ಮೈಲಸಂದ್ರದ ಗ್ರೀನ್ ಗಾರ್ಡನ್ ರೆಸ್ಟೋರೆಂಟ್‌ಗೆ ಕರೆ ತಂದಿದ್ದರು. ಬಳಿಕ ಅಲ್ಲಿಯೇ ಕೊಲೆ ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಮೃತ ನಾಗರಾಜ್, ನಗರದ ವಿವಿ ಪುರಂ ಠಾಣೆಯ ರೌಡಿಶೀಟರ್ ಆಗಿದ್ದ ಎಂದು ತಿಳಿದುಬಂದಿದೆ.