×
Ad

ಬೈಕ್ ಕಳವು ಆರೋಪಿಯ ಬಂಧನ: 10 ಬೈಕ್‌ ಜಪ್ತಿ

Update: 2018-12-17 21:48 IST

ಬೆಂಗಳೂರು, ಡಿ.17: ಬೈಕ್ ಕಳವು ಆರೋಪದಡಿ ವ್ಯಕ್ತಿಯೋರ್ವನನ್ನು ಬಂಧಿಸಿ, 10 ಬೈಕ್‌ಗಳನ್ನು ಜಪ್ತಿ ಮಾಡುವಲ್ಲಿ ಇಲ್ಲಿನ ಮಲ್ಲೇಶ್ವರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆಯ ಬನ್ನೂರು ತಾಲೂಕಿನ ಸುರೇಶ್(45) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.7ರಂದು ಮಹೇಶ್ ಎಂಬುವರು, ತಮ್ಮ ಸ್ಕೂಟರ್‌ನಲ್ಲಿ ನಗರದ ಸಂಪಿಗೆ ರಸ್ತೆಯ, 2ನೆ ಕ್ರಾಸ್, ಎಸ್‌ಬಿಐ ಬ್ಯಾಂಕ್ ಬಳಿ ನಿಲ್ಲಿಸಿ, ಮತ್ತೆ ವಾಪಸ್ ಮಧ್ಯಾಹ್ನ ಬಂದು ನೋಡಿದಾಗ ವಾಹನ ನಾಪತ್ತೆಯಾಗಿತ್ತು. ಈ ಸಂಬಂಧ ಮಲ್ಲೇಶ್ವರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿರುವುದಾಗಿ ತಿಳಿದುಬಂದಿದೆ.

ಬಂಧಿತ ಸುರೇಶ್‌ನಿಂದ 3.56 ಲಕ್ಷ ರೂ. ಮೌಲ್ಯದ 10 ಬೈಕ್ ಜಪ್ತಿ ಮಾಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News